ರಾಜ್ಯ ಮಟ್ಟಕ್ಕೆ ಆಯ್ಕೆ

ಧಾರವಾಡ : ನಗರದ ಡಯಟ್ನಲ್ಲಿ ಬುಧವಾರ ಜರುಗಿದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕುಸುಗಲ್ ಗ್ರಾಮದ ಸರಕಾರಿ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾಥರ್ಿಗಳಾದ ಶಿವಶಂಕರ ಗಾಣಿಗೇರ ಹಾಗೂ ಇಮ್ರಾನ್ ಹಳ್ಳಿಕೇರಿ 'ಸ್ವಚ್ಛತೆ ಎಲ್ಲಿದೆಯೋ, ಅಲ್ಲಿದೆ ಆರೋಗ್ಯ ಎಂಬ ವಿಷಯದ ಮೇಲೆ ವಿಜ್ಞಾನ ಪ್ರಯೋಗವನ್ನು ಪ್ರಸ್ತುತಪಡಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾಥರ್ಿಗಳಿಗೆ ಶಾಲೆಯ ವಿಜ್ಞಾನ ಶಿಕ್ಷಕ ಸಂಜೀವಕುಮಾರ ಭೂಶೆಟ್ಟಿ ಮಾರ್ಗದರ್ಶನ ಮಾಡಿದ್ದರು. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮಹೇಶ ಕಾರಡ್ಡಿ, ಸದಸ್ಯರು, ಮುಖ್ಯಾಧ್ಯಾಪಕ ಪಿ.ಆರ್. ಮ್ಯಾಗೇರಿ ಹಾಗೂ ಶಾಲೆಯ ಸಿಬ್ಬಂದಿ ಅಭಿನಂದಿಸಿದ್ದಾರೆ.