ಹನಮಸಾಗರದಲ್ಲಿ ಸೀರತ್ ಸಮಾವೇಶ ಹಿ ಧರ್ಮ, ಪ್ರಾಮಾಣಿಕತೆ, ಸಮಾನತೆ ಸಂದೇಶ
Seerat Conference in Hanamasagara, message of religion, honesty, equality
ಹನಮಸಾಗರದಲ್ಲಿ ಸೀರತ್ ಸಮಾವೇಶ ಹಿ ಧರ್ಮ, ಪ್ರಾಮಾಣಿಕತೆ, ಸಮಾನತೆ ಸಂದೇಶ
ಹನಮಸಾಗರ 13: ಪಟ್ಟಣದ ಶ್ರೀ ಕರಿಸಿದ್ದೇಶ್ವರ ಮಠದ ಸವ ಮಂಟಪದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ರಾಜ್ಯವ್ಯಾಪಿ ಸೀರತ್ ಅಭಿಯಾನದ ಸಮಾರೋಪ ಕಾರ್ಯಕ್ರಮ ನಡೆಯಿತು.. ಪ್ರವಚನಕಾರ ಲಾಲಹುಸೇನ ಕಂದಗಲ್ಲ ಮಾತನಾಡಿ, "ಪೈಗಂಬರರ ಜನ್ಮದಿನದ ಮೆರವಣಿಗೆಗಳಿಗೆ ಇಸ್ಲಾಮಿನಲ್ಲಿ ಸ್ಥಾನವಿಲ್ಲ. ಅವರ ಕಾಲದಲ್ಲಿ ಯಾವುದೇ ಭಾವಚಿತ್ರ ಬಿಡಿಸಲಾಗಲಿಲ್ಲ. ಯೇಸು ಕ್ರಿಸ್ತ, ಬುದ್ಧ, ಮಹಾವೀರರ ಕಾಲದಿಂದಲೇ ಭಾವಚಿತ್ರಗಳು ಲಭ್ಯವಾಗಿವೆ. ಆದರೆ ಪೈಗಂಬರರ ಭಾವಚಿತ್ರವಿಲ್ಲ. ಇದಕ್ಕೆ ಕಾರಣ ಹಿ ಜನರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಬಹುದು ಎಂಬ ಭಯ. ಇಂದಿನ ಸಮಾಜದಲ್ಲಿ ಅನೇಕ ಮಹಾನುಭಾವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವುದನ್ನು ನಾವು ನೋಡುತ್ತಿದ್ದೇವೆ. ಪೈಗಂಬರರ ನಿಜವಾದ ಸಂದೇಶವೇ ಸತ್ಯ, ಪ್ರಾಮಾಣಿಕತೆ ಮತ್ತು ಜನಸೇವೆ. ಇದನ್ನು ಪಾಲಿಸಿದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ," "ಮೆರವಣಿಗೆಗಳು, ಡಿಜೆ ಸದ್ದು-ಗದ್ದಲ, ಅನಾವಶ್ಯಕ ಹಬ್ಬಾಟದಿಂದ ಜನರಿಗೆ ಹಾನಿ ಉಂಟಾಗಿದೆ. ಕೆಲವರು ಹೃದಯಾಘಾತಕ್ಕೆ ಒಳಗಾದ ಘಟನೆಗಳು ನಮ್ಮ ಮುಂದೆ ಇವೆ. ಪೈಗಂಬರರ ಹೆಸರಿನಲ್ಲಿ ನಾನು ಸ್ವತಃ ಮೆರವಣಿಗೆಯಲ್ಲಿ ಪಾಲ್ಗೊಂಡಿಲ್ಲ. ಪೈಗಂಬರರು ಎಂದೂ ದೇವನ ದಾಸ್ಯವನ್ನು ಬಿಟ್ಟು ಬೇರೆ ಯಾರ ದಾಸ್ಯಕ್ಕೂ ಒತ್ತಾಯ ಮಾಡಲಿಲ್ಲ. ನೀವು ಕಲ್ಪಿಸಿಕೊಂಡ ದೇವರುಗಳನ್ನು ಬಿಟ್ಟು ನಿಜವಾದ ಸೃಷ್ಟಿಕರ್ತನ ದಾಸ್ಯಕ್ಕೆ ಬರಬೇಕು," ಎಂದು ಕರೆ ನೀಡಿದರು.ಸಂಸ್ಕೃತ ಜ್ಞಾನದಾಯಿನಿ ಪಾಠಶಾಲೆಯ ಪಂಡಿತ ಪ್ರಲ್ಹಾದಾರ್ಯ ಪೂಜಾರ ಮಾತನಾಡಿ, "ಧರ್ಮ ಎಂದರೆ ಎಲ್ಲ ಜೀವಿಗಳನ್ನು ಸಮಾನವಾಗಿ ನೋಡುವುದು. ದೇವರ ಮುಂದೆ ಪ್ರಾರ್ಥನೆ ಮಾಡುವುದೂ ಸಮಾನತೆಯ ಸಾಧನೆ. ಪ್ರಾಮಾಣಿಕತೆ, ಆದರ್ಶದ ಜೀವನ, ಇತರರಿಗೆ ನೋವಾಗದಂತೆ ಬದುಕುವುದು ಹಿ ಇವೇ ನಿಜವಾದ ಧರ್ಮದ ಅರ್ಥ. ಇಂದ್ರಿಯ ನಿಗ್ರಹ ಮಾಡಬೇಕು. ದುಡಿದ ದುಡ್ಡಿನಲ್ಲಿ ಒಂದಿಷ್ಟನ್ನು ದಾನ ಮಾಡಬೇಕು. ಮಾತನ್ನು ಮಿತವಾಗಿ ಬಳಸಬೇಕು. ಸಾತ್ವಿಕ ಆಹಾರ ಸೇವಿಸಬೇಕು. ಹಿರಿಯರಿಗೆ ಗೌರವ ಕೊಡಬೇಕು.
ಮಹಾನುಭಾವರ ಆದರ್ಶಗಳನ್ನು ಪಾಲಿಸಬೇಕು. ಇಂತಹ ಗುಣಗಳಿಂದಲೇ ಸಮಾಜದಲ್ಲಿ ಧಾರ್ಮಿಕ ಮೌಲ್ಯಗಳು ಬೆಳೆಯುತ್ತವೆ," ಎಂದರು..ಜಿಲ್ಲಾ ಸಂಚಾಲಕ ಜನಾಬ ದಿಲಾವರ ಅಂಬರಖಾನ್ ಮಾತನಾಡಿ, "ಪೈಗಂಬರರ ಬದುಕು ನ್ಯಾಯ ಮತ್ತು ಸಮಾನತೆಯ ಸಂದೇಶವನ್ನು ಸಾರುತ್ತದೆ. ಇಂದಿನ ಸಮಾಜದಲ್ಲಿ ಶಾಂತಿ ಹಾಳಾಗಲು ಅನೈತಿಕತೆ ಮತ್ತು ಅನ್ಯಾಯವೇ ಮೂಲ ಕಾರಣ. ನ್ಯಾಯದ ಮಾರ್ಗವನ್ನು ಬಿಟ್ಟು ಅನ್ಯಾಯದ ಮಾರ್ಗ ಅನುಸರಿಸುವುದರಿಂದ ಬ್ರಷ್ಟಾಚಾರ, ಅಶಾಂತಿ ಹೆಚ್ಚುತ್ತಿದೆ. ಇದನ್ನು ತಡೆಯಲು ಧಾರ್ಮಿಕ ಮೌಲ್ಯಗಳು ಅಗತ್ಯ," ಎಂದು ಹೇಳಿದರು.ವಿಜಯಮಹಾಂತ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, "ಎಲ್ಲಾ ಧರ್ಮಗಳು ಶಾಂತಿ ಮತ್ತು ಪ್ರಾಮಾಣಿಕತೆಯ ಸಂದೇಶವನ್ನು ನೀಡುತ್ತವೆ. ಸಮಾಜದಲ್ಲಿ ಧಾರ್ಮಿಕ ಮೌಲ್ಯಗಳು ನೆಲೆಸಿದಾಗ ಮಾತ್ರ ಶಾಂತಿ ಹಾಗೂ ಸಹಬಾಳ್ವೆ ಸಾಧ್ಯ," ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಿವಕುಮಾರ ಹೀರೆಮಠ, ಮೈನುದ್ದೀನ್ ಖಾಜಿ, ನಜೀರ್ ಸಾಬ್ ಮೇನೆದಾಳ, ಆಸಿಫ್ ಡಾಲಾಯತ (ಗುತ್ತಿಗೆದಾರ), ಮೆಹಬೂಬ ಮೂಲಿಮನಿ, ಮಲ್ಲಯ್ಯ ಕೋಮಾರಿ, ಗೆಸುದಾರಾಜ ಮೂಲಿಮನಿ, ಬಸವಂತಪ್ಪ ಕಂಪ್ಲಿ, ಖಾದರ್ ಸಾಬ್ ತಾಹಶಿಲ್ದಾರ್, ಪ್ರಶಾಂತ ಗಡಾದ, ಅಂದನಯ್ಯ ಸೊಪ್ಪಿಮಠ, ಸುರೇಶಬಾಬು ಜಮಖಂಡಿಕರ, ನಾರಾಯಣಪ್ಪ ನಾಗೂರ, ವಿಷ್ಣು ರಜಪೂತ, ಬಸವಂತಪ್ಪ ಕಪ್ಲಿ, ರಜಾಕ ಟೇಲರ್, ಖಲಿಲಅಹಮದ್ ಚೌದರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು..
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 