ಸೀರತ್ ಅಭಿಯಾನ: ರೋಗಿಗಳಿಗೆ ಹಣ್ಣು ಹಂಪಲ ವಿತರಣೆ
Seerat Abhiyan: Distribution of fruits and vegetables to patients
ಸೀರತ್ ಅಭಿಯಾನ: ರೋಗಿಗಳಿಗೆ ಹಣ್ಣು ಹಂಪಲ ವಿತರಣೆ
ತಾಳಿಕೋಟಿ: ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಘಟಕದ ವತಿಯಿಂದ ಪ್ರವಾದಿ ಮಹಮ್ಮದರ ಜನ್ಮದಿನಾಚರಣೆ ಅಂಗವಾಗಿ ಸೆ.3ರಿಂದ14ರವರೆಗೆ ಹಮ್ಮಿಕೊಂಡಿರುವ ಸೀರತ್ ಅಭಿಯಾನದ ನಿಮಿತ್ಯವಾಗಿ ಜಮಾತ್ ನ ಸ್ಥಳೀಯ ಮಹಿಳಾ ಘಟಕದ ವತಿಯಿಂದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಗುರುವಾರ ಹಣ್ಣು ಹಂಪಲ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜ.ಇ.ಹಿಂ.ಮಹಿಳಾ ಘಟಕದ ಸಹ ಸಂಚಾಲಕಿ ಕೌಸರ ಎಂ.ಮೇತ್ರಿ ಅವರು ಮಾತನಾಡಿ ಪ್ರವಾದಿ ಮಹಮ್ಮದ್(ಸ)ರು ಮಾನವೀಯ ಮೌಲ್ಯಗಳಿಗೆ ಅತಿಹೆಚ್ಚಿನ ಮಹತ್ವವನ್ನು ಕೊಟ್ಟಿದ್ದಾರೆ ಸಮಾಜ ಸೇವೆ ಅವರ ಜೀವನದ ಅವಿಭಾಜ್ಯ ಅಂಗವಾಗಿತ್ತು. ಸಮಾಜದಲ್ಲಿರುವ ದುರ್ಬಲ, ಅಸಹಾಯಕ ಹಾಗೂ ನಿರ್ಗತಿಕರ ಸೇವೆ ದೇವನ ಆರಾಧನೆಗೆ ಸಮಾನವಾಗಿದೆ ಎಂದು ಅವರು ತಿಳಿಸಿದ್ದಾರೆ ಆದ್ದರಿಂದ ನಾವು ಈ ಅಭಿಯಾನದಲ್ಲಿ ಅವರ ಬದುಕಿನ ಸಂದೇಶವನ್ನು ಸಮಾಜದ ಎಲ್ಲ ವರ್ಗದವರಿಗೂ ತಲುಪಿಸುವುದರ ಜೊತೆಗೆ ಇಂಥಹ ಹಲವಾರು ಸಮಾಜಸೇವಾ ಕಾರ್ಯಗಳನ್ನೂ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ಈ ಸಮಯದಲ್ಲಿ ಪ್ರಸೂತಿ ತಜ್ಞೆ ಡಾ.ಮಧುಬಾಲಾ ಸಿಂಘಾಲ,ಜಿಲ್ಲಾ ಸಂಚಾಲಕಿ ಅಂಜುಮ ಎಕೀನ, ಮಹಿಳಾ ಘಟಕದ ನಗರ ಸಂಚಾಲಕಿ ಖುರ್ಷಿದ್ ಮೊಮೀನ,ಸಾಬೇರಾ ನಮಾಜ ಕಟ್ಟಿ,ಸಹೀಫಾ ನಮಾಜಕಟ್ಟಿ,ನೂರಜಹಾಂ ಕೊರ್ತಿ, ನುಸ್ರತ್ ಸಾಸಬಾಳ,ಮುನೀರಾ ಸಿಪಾಯಿ ಹಾಗೂ ಕಾರ್ಯಕರ್ತೆಯರು ಇದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 