ದ್ವಿತೀಯ ಪಿಯುಸಿ ಪರೀಕ್ಷೆ : ನೀತು ಮುಕ್ತೇನಹಳ್ಳಿ ಸಾಧನೆ
ರಾಣೇಬೆನ್ನೂರು 15: ಇಲ್ಲಿನ ಟ್ಯಾಗೋರ್ ಶಿಕ್ಷಣ ಸಂಸ್ಥೆಯ, ರೋಟರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನೀತುಶ್ರೀ ಹನುಮಂತಪ್ಪ ಮುಕ್ತೇನಹಳ್ಳಿ ಇವಳು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ, ಸಾಧನೆ ಮೆರೆದಿದ್ದಾಳೆ. ಕಾಮರ್ಸ ಭಾಗದಲ್ಲಿ, 600 ಅಂಕಗಳಿಗೆ 576 ಅಂಕ ಗಳಿಸಿ ತನ್ನ ಶೈಕ್ಷಣಿಕ ಪ್ರತಿಭೆ ಮೆರೆದು, ರೋಟರಿ ಕಾಲೇಜಿಗೆ, ನೇಕಾರ ಸಮುದಾಯಕ್ಕೆ ಹಾಗೂ ತಂದೆ ತಾಯಿಗಳಿಗೆ ಅತಿವ ಗೌರವ ತಂದಿದ್ದಾಳೆ. ಇವಳ ಸಾಧನೆಗೆ, ರೋಟರಿ ಆಡಳಿತ ಮಂಡಳಿ, ಪ್ರಾಂಶುಪಾಲರು ಉಪನ್ಯಾಸಕರು ಮತ್ತು ಸಮಾಜದ ಗಣ್ಯರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.