ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯ ಉಪನ್ಯಾಸ
Science subject lecture for SSLC students
ತಾಳಿಕೋಟಿ 15: ಪಟ್ಟಣದ ಎಸ್.ಎಸ್ ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸಂಗಮೇಶ್ವರ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್. ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ತಂತ್ರಗಳನ್ನು ತಿಳಿಸಿಕೊಡುವ ವಿಶೇಷ ಉಪನ್ಯಾಸ ಕಾರ್ಯಕ್ರಮ ಸೋಮವಾರ ಜರುಗಿತು.
ಬ.ಸಾಲವಾಡಗಿ ಸರಕಾರಿ ಪ್ರೌಢಶಾಲೆಯ ವಿಜ್ಞಾನ ವಿಷಯದ ಶಿಕ್ಷಕಿ ಸುವರ್ಣ ಮಠ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸುವ ತಂತ್ರಗಳನ್ನು ತಿಳಿಸಿಕೊಡುವುದರ ಜೊತೆಗೆ ವಿಜ್ಞಾನದ ಅನೇಕ ಸೂತ್ರಗಳನ್ನು ಹೇಳಿಕೊಟ್ಟರು.
ಅನೀರೀಕ್ಷಿತವಾಗಿ ಶಾಲಾ ಶಿಕ್ಷಣ ಹಾಗೂ ಸಾಕ್ಷಾರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಎಸ್.ಸಾವಳಗಿ ಮುದ್ದೇಬಿಹಾಳ ಮತ್ತು ಸಿ.ಆರಿ್ಪ.ಬಾಲಾಜಿ ವಿಜಾಪೂರ ಭೇಟಿ ನೀಡಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಎಲ್.ಬಿ.ಎ.ಎಪ್.ಎಲ್.ಎನ್. 29 ಅಂಶಗಳು, ಎನ್.ಎಮ್.ಎಮ್.ಎಸ್ ಪರೀಕ್ಷೆ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕುರಿತು ಸಾಕಷ್ಟು ಮಾಹಿತಿ ವಿವರಿಸಿದರು.
ಉಪನ್ಯಾಸ ನೀಡಿದ ಸುವರ್ಣಾ ಮಠ ಇವರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಆಡಳಿತಾಧಿಕಾರಿ ಕಿರಣಎಚ್.ಪಾಟೀಲ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಶೋಕ.ಕಟ್ಟಿ, ಹತ್ತನೇ ತರಗತಿ ವರ್ಗ ಶಿಕ್ಷಕ ಎಸ್.ಸಿ.ಗುಡಗುಂಟಿ, ಹಿರಿಯ ಶಿಕ್ಷಕ ಬಿ.ಆಯ್.ಹಿರೇಹೊಳಿ, ಎಸ್.ವಿ.ಜಾಮಗೊಂಡಿ, ಎಚ.ಬಿ.ಪಾಟೀಲ, ಎಮ್.ಎಸ್.ರಾಯಗೊಂಡ, ಯು.ಎಚ.ಗಟನೂರ, ಎಸ್.ಬಿ.ಸಾಸನೂರ,ಕವಿತಾ ತೆಗ್ಗಿನಮಠ, ಕೆ.ಎನ್.ನಾಲತವಾಡ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು 