ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಕನವಳ್ಳಿ ಇವರ ಸಹಯೋಗದಲ್ಲಿ ವಿಜ್ಞಾನ ವಸ್ತು ಪ್ರದರ್ಶನ
ಹಾವೇರಿ 14:ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಕನವಳ್ಳಿ ಇವರ ಸಹಯೋಗದಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು 13-12-2024 ರಿಂದ 14-12-2024 ರವರೆಗೆ ಎರಡು ದಿನಗಳ ಕಾಲ ಆಯೋಜಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಪರಮೇಶ್ವರ ಮಲ್ಲಪ್ಪ ಹಳೇಮನಿ, ಮುಖ್ಯ ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷೆ ಕವಿತಾ ಯರಿಮನಿ ಹಾಗೂ ಕನವಳ್ಳಿ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಎಸ್.ಎಸ್.ದೇಸಳ್ಳಿ,ಮುಖ್ಯಶಿಕ್ಷಕ ಆರ್.ಕೆ.ಹೀರೆಮಠ ಹಾಗೂ ಶಾಲೆಯ ಎಲ್ಲಾ ಸಹ ಶಿಕ್ಷಕರು ಮತ್ತು ಅಗಸ್ತ್ಯ ಪ್ರತಿಷ್ಠಾನದ ಮಾರ್ಗದರ್ಶಿ ಶಿಕ್ಷಕರಾದ ಮಲ್ಲಿಕಾರ್ಜುನ ಬಳಿಗೇರ,ವೀರನಗೌಡ ಮತ್ತು ರುದ್ರೇಶ ಹಳ್ಳಿಕೇರಿ ಭಾಗವಹಿಸಿದ್ದರು