ವಿಜ್ಞಾನ ಪ್ರತಿಭಾನ್ವಿತ ಪರೀಕ್ಷೆ: ಎಸ್.ಕೆ.ಪಿಯು ವಿದ್ಯಾರ್ಥಿಗಳ ಉತ್ತಮ ಸಾಧನೆ
Science Talented Exam: SKPU students perform well
ತಾಳಿಕೋಟಿ 01: ಪಟ್ಟಣದ ವೀರಶೈವ ವಿದ್ಯಾ ವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ಎಸ್ ಕೆ ಪಾಪು ಕಾಲೇಜಿನ ವಿದ್ಯಾರ್ಥಿಗಳು ಚಿತ್ರದುರ್ಗದ ಪುಟಾಣಿ ವಿಜ್ಞಾನ ಮತ್ತು ತಾರಾಮಂಡಲ ವಿಜ್ಞಾನ ಪ್ರತಿಭಾನ್ವಿತ ಪರೀಕ್ಷೆ-2025ರಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಸಪ್ಟಂಬರ್ ತಿಂಗಳಿನಲ್ಲಿ ನಡೆದ ಈ ಪರೀಕ್ಷೆಯಲ್ಲಿ ಕಾಲೇಜಿನಿಂದ 105 ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರೀಕ್ಷೆಯನ್ನು ಬರೆದಿದ್ದರು ಇದರಲ್ಲಿ ಮಧುರಾ ಬಿರಾದಾರ ರಾಷ್ಟ್ರಮಟ್ಟಕ್ಕೆ ದ್ವಿತೀಯ ಸ್ಥಾನ, ವಾಯುಪುತ್ರ ಎಡಹಳ್ಳಿ ರಾಷ್ಟ್ರಮಟ್ಟಕ್ಕೆ ದ್ವಿತೀಯ ಸ್ಥಾನ, ಪೂಜಾ ಸೋಮಣ್ಣವರ್ ಜಿಲ್ಲೆಗೆ ದ್ವಿತೀಯ ಸ್ಥಾನ, ಮಾಬೂಬ್ಬಿ ಮಾಗಿ ಜಿಲ್ಲೆಗೆ ತೃತೀಯ ಸ್ಥಾನ ಮತ್ತು ನೀಲಮ್ಮ ಕಕ್ಕೇರಿ ತಾಲೂಕಿಗೆ ತೃತಿಯ ಸ್ಥಾನವನ್ನು ಪಡೆದುಕೊಂಡಿದ್ದಾರೆ ಹಾಗೂ ಇನ್ನುಳಿದ ಎಲ್ಲ ವಿದ್ಯಾರ್ಥಿಗಳು ಅಗ್ರ ಶ್ರೇಣಿ ಮತ್ತು ಪ್ರಥಮ ಸ್ಥಾನದಲ್ಲಿ ಪಾಸಾಗಿದ್ದಾರೆ.
ಇವರಿಗೆ ಮಾರ್ಗದರ್ಶನ ನೀಡಿದ ಎನ್. ಐ.ಗಾಣಿಗೇರ ಇವರನ್ನು ರಾಷ್ಟ್ರಮಟ್ಟದ ಉತ್ತಮ ವಿಜ್ಞಾನ ಸಂಘಟನಾ ಉಪನ್ಯಾಸಕ ಪ್ರಶಸ್ತಿ ಹಾಗೂ ಉಪನ್ಯಾಸಕಿ ಶೀತಲ್ ಎಂ ಸಜ್ಜನ್ ಇವರಿಗೆ ರಾಷ್ಟ್ರಮಟ್ಟದ ಉತ್ತಮ ವಿಜ್ಞಾನ ಸಂಘಟನಾ ಉಪನ್ಯಾಸಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರಿಗೆ ಸಹಕರಿಸಿದ ಸಹ ಸಂಘಟನಾ ಉಪನ್ಯಾಸಕಿಯಾದ ಟಿ.ಜಿ. ಮಠಪತಿ ಹಾಗೂ ಉಪನ್ಯಾಸಕ ಕೆ ಎಸ್ ಸಜ್ಜನ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವಿದ್ಯಾರ್ಥಿಗಳ ಈ ಉತ್ತಮ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಕಿಶೋರಕುಮಾರ ಕೆ. ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರು, ಸರ್ವ ಸದಸ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು 