ಶಾಲಾ ಶಿಕ್ಷಕಿಯ ಮೇಲೆ ಹಲ್ಲೆ, ಖಂಡನೆ, ಕ್ರಮಕ್ಕೆ ಒತ್ತಾಯ
School teacher attacked, condemned, action demanded
ಶಾಲಾ ಶಿಕ್ಷಕಿಯ ಮೇಲೆ ಹಲ್ಲೆ, ಖಂಡನೆ, ಕ್ರಮಕ್ಕೆ ಒತ್ತಾಯ
ಕೊಪ್ಪಳ 13: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕ್ಷೇತ್ರನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಜುಳಾ ಎಂಬುವರ ಮೇಲೆ ಚೌಡಪ್ಪ ಎಂಬುವರು ಹಲ್ಲೆ ಮಾಡಿರುವ ಕ್ರಮವನ್ನು ಖಂಡಿಸುವುದರ ಜೊತೆಗೆ ಅಂಥವರ ವಿರುದ್ದ ಸೂಕ್ತ ಕ್ರಮವನ್ನು ಸರಕಾರ ಕೈಗೊಳ್ಳಬೇಕು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಶಿಕ್ಷಕರ ಸಂಘದ ನಿದೇಶಕರಾದ ಬೀರ್ಪ ಅಂಡಗಿ ಚಿಲವಾಡಗಿ ಒತ್ತಾಯಿಸಿದ್ದಾರೆ.
ಈ ವಿಷಯ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶಾಲೆ ಬಿಟ್ಟ ಮಗುವನ್ನು ಯಾವ ಕಾರಣಕ್ಕೆ ಶಾಲೆಯನ್ನು ಬಿಟ್ಟಿರುವುದಾಗಿ ಪ್ರಶ್ನೆ ಮಾಡಿದರ ಹಿನ್ನಲೆಯಲ್ಲಿ ಅವರ ಮಗುವಿನ ತಂದೆ ಏಕಾಏಕಿ ಶಿಕ್ಷಕಿಯ ಮೇಲೆ ಹಲ್ಲೆ ಮಾಡಿರುವುದು ಖಂಡೀನೀಯವಾಗಿದೆ. ಇಂತಹ ಘಟನೆಗಳಿಂದ ಶಿಕ್ಷಕರ ಸಮುದಾಯ ಭಯದ ವಾತಾವರಣೆಯಲ್ಲಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.ಸರಕಾರ ಕೂಡಲೇ ಇಂತವರ ವಿರುದ್ದ ಕಠಿಣವಾದ ಶಿಕ್ಷೆಯನ್ನು ನೀಡುವುದರ ಮೂಲಕ ಶಿಕ್ಷಕಿಗೆ ನ್ಯಾಯ ಒದಗಿಸಿ ಕೊಡುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 