ಲೋಕದರ್ಶನ ವರದಿ
ಲಕ್ಷ್ಮೇಶ್ವರ 24: ಪಟ್ಟಣದಲ್ಲಿ ದಿ. 24ರಂದು ಸ್ಕೂಲ್ ಚಂದನ ಕ್ಯಾಂಪಸ್ನಲ್ಲಿ ನಡೆದ ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಕಮಿಟಿ ಹಾಗೂ ಸ್ಕೂಲ್ ಚಂದನ ಹಳೆಯ ವಿದ್ಯಾಥರ್ಿಗಳು ಸ್ಕೂಲ್ ಚಂದನ ಆವರಣದಲ್ಲಿ ಬೆಳಿಗ್ಗೆ 10:30 ರಿಂದ 3:00 ಗಂಟೆಯವರೆಗೆ ನಿರಂತರ ರಕ್ತದಾನ ಶಿಬಿರ ನಡೆಯಿತು. ರಕ್ತದಾನ ಶಿಬಿರದಲ್ಲಿ 131 ಜನರು ರಕ್ತದಾನ ಮಾಡಿದ್ದು ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿದದ್ದು ವಿಶೇಷವಾಗಿತ್ತು.
ರಕ್ತದಾನ ಶಿಬಿರ ಉದ್ಘಾಟಿಸಿದ ಗದಗ ಜಿಲ್ಲಾ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾದ ಜಿ .ಎಸ್. ಪಾಟೀಲ ಇಂತಹ ಕಠಿಣ ಕೊರೊನಾ ರೋಗ ಭೀತಿಯ ಪರಿಸ್ಥಿತಿಯಲ್ಲಿ 131 ಜನ ದಾನಿಗಳು ರಕ್ತ ನೀಡಿದ್ದು, ಅತ್ಯಂತ ಪವಿತ್ರ ಕೆಲಸ ನಮ್ಮ ಪಕ್ಷದ ಆದೇಶದಂತೆ ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಿಂದ ರಕ್ತದಾನದಲ್ಲಿ ಪಾಲ್ಗೊಂಡು ಎಲ್ಲರೂ ಗುಣಮುಖರಾಗಿ ಬದುಕೋಣ ಎಂದು ರಕ್ತದಾನಿಗಳನ್ನು ಶ್ಲಾಘಿಸಿದರು. ಈ ಶಿಬಿರದಲ್ಲಿ ಮಹಿಳೆಯರು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.ಇವರೆಲ್ಲರ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ ಎಂದು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರು ಅಭಿಪ್ರಾಯಪಟ್ಟರು.
ದಾನಿಗಳಿಗೆ ಗದಗ ವೈದ್ಯಕೀಯ ಸಂಸ್ಥೆಯಿಂದ ಹಾಗೂ ಚಂದನ ಶಿಕ್ಷಣ ಸಂಸ್ಥೆಯಿಂದ ಪ್ರಮಾಣಪತ್ರ ವಿತರಿಸಿದ ಮುಂಡರಗಿ ಎಪಿಎಂಸಿ ಅಧ್ಯಕ್ಷ ಶಿವಕುಮಾರ್ ಗೌಡ ಪಾಟೀಲ್ ಮಾತನಾಡಿದರು.ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ್ ಮಹಾಜನ್ ಶೆಟ್ಟರ್, ದಾದಾಪೀರ ಮುಚ್ಚಾಲೆ ಮಾತನಾಡಿದರು. ರಕ್ತದಾನ ಶಿಬಿರದಲ್ಲಿ ಅಧ್ಯಕ್ಷತೆಯನ್ನು ಮಾಜಿ ಶಾಸಕರಾದ ಎಸ್.ಎನ್. ಪಾಟೀಲ ವಹಿಸಿದ್ದರು. ಶಾಲಾ ಆವರಣದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಪ್ರತಿಯೊಬ್ಬರು ಸ್ಯಾನಿಟರಿ ಯಿಂದ ಕೈ ತೊಳೆದುಕೊಂಡು ಶಿಸ್ತಿನಿಂದ ರಕ್ತದಾನ ಮಾಡಿದ್ದು ವಿಶೇಷವಾಗಿ ಎದ್ದು ಕಾಣುತ್ತಿತ್ತು. ಎಲ್ಲಾ ದಾನಿಗಳಿಗೆ ವೈದ್ಯಕೀಯ ಸಿಬ್ಬಂದಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಸರಳ ಶಿಸ್ತುಬದ್ಧ ಈ ಪುಟ್ಟ ಕಾರ್ಯಕ್ರಮದಲ್ಲಿ ಮಾಜಿ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷರಾದ ಟಿ.ಈಶ್ವರ್ ಪ್ರಸ್ತಾವನೆ ಮಾಡಿ ಸ್ವಾಗತಿಸಿದರು.ರಕ್ತದಾನ ಶಿಬಿರದ ರೂವಾರಿ, ಕಾಂಗ್ರೆಸ್ ಮುಖಂಡ, ಮಾಜಿ ಪುರಸಭೆ ಅಧ್ಯಕ್ಷ ವಿರೂಪಾಕ್ಷಪ್ಪ ಪಡಿಗೇರಿ ಎಲ್ಲರಿಗೂ ವಂದನೆ ಅಪರ್ಿಸಿದರು. ಬಸವರಾಜ ಉಂಡೇನಹಳ್ಳಿ ಶೆಟ್ಟರಿಗೆ ಪಕ್ಷದ ವತಿಯಿಂದ ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ರೋಣ ಮತಕ್ಷೇತ್ರದ ಮಾಜಿ ಶಾಸಕರಾದ ಜಿ.ಎಸ್. ಪಾಟೀಲ್ ರವರು ಔಷಧ ಕಿಟ್ ವಿತರಿಸಿದರು. ಎಲ್ಲರಿಗೂ ಉಚಿತ ಮಾಸ್ಕ್ ವಿತರಿಸಲಾಯಿತು. ಹಾಗೂ ಶಿರಹಟ್ಟಿ ಮತಕ್ಷೇತ್ರದ ಮಾಜಿ ಶಾಸಕರಾದ ಎಸ್ ಎನ್ ಪಾಟೀಲ ಅವರು ಭಾಗವಹಿಸಿದ್ದರು.