ಲೋಕದರ್ಶನ ವರದಿ
ಮುಧೋಳ20: ಆರೋಗ್ಯವನ್ನು ಕಳೆದುಕೊಂಡರೆ ಎಲ್ಲವನ್ನು ಕಳೆದುಕೊಂಡಂತೆ ಆರೋಗ್ಯವೆಂಬುದೊಂದು ದೈವಿ ಸಂಪತ್ತು. ಭೌತಿಕ ಸಂಪತ್ತನ್ನು ಕಳೆದುಕೊಂಡರೆ ಚಿಂತೆ ಇಲ್ಲಾ.ಆದರೆ ಶಾರೀರಕ ಸಂಪತ್ತನ್ನು ಕಳೆದುಕೊಳ್ಳಲಾಗದು ಎಂದು ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನ (ರಿ)ದ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ಮುಗಳಖೋಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಮನ್ ನಿಜಗುಣಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನ ಹಾಗೂ ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆ (ರಿ) ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳು ಬಾಗಲಕೋಟ, ತಾಲೂಕಾ ಆರೋಗ್ಯ ಅಧಿಕಾರಿಗಳು ಮುಧೋಳ ಮತ್ತು ಪ್ರಾಥಮಿಕ ಆರೋಗ್ಯ ಅಧಿಕಾರಿಗಳು ಮಳಲಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಉಚಿತ ಕಣ್ಣಿನ ಆರೋಗ್ಯ ತಪಾಸಣಾ ಶಿಬಿರ ಮತ್ತು ಶಸ್ತ್ರ ಚಿಕಿತ್ಸೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಬಡವರ, ದಿನದಲಿತರ, ಹಿಂದುಳಿದವರ, ಅಸಹಾಯಕರ ಅನುಕೂಲಕ್ಕಾಗಿ ಶಿಬಿರವನ್ನು ಏರ್ಪಡಿಸಲಾಗಿದೆ. ಇಂತಹ ಸಮಾಜದ ಸೇವಾ ಕಾರ್ಯಗಳಲ್ಲಿ ಸಂತೃಪ್ತಿ
ಇದೆ ಎಂದು ಹೇಳಿದರು.
ಮುಗಳಖೋಡ, ಮಳಲಿ, ನಾಗರಾಳ, ಮಹಾಲಿಂಗಪೂರ, ತೇರದಾಳ, ಕುಳಲಿ, ಮಂಟೂರ, ಸಂಗಾನಟ್ಟಿ ಮುಂತಾದ ಗ್ರಾಮಗಳಿಂದ 200ಕ್ಕೂ ಹೆಚ್ಚು ಶಿಬಿರಾಥರ್ಿಗಳು ಪಾಲ್ಗೊಂಡಿದರು. 32 ಜನ ಶಸ್ತ್ರ ಚಿಕಿತ್ಸೆಗೆ ಆಯ್ಕೆಗೊಂಡರು.
ಗ್ರಾ.ಪಂ. ಅಧ್ಯಕ್ಷ ಮಂಜುನಾಥ ಮಂಟೂರ,ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶಾಮಲಾ ಲಕ್ಷ್ಮೇಶ್ವರ, ಉತ್ತರ ಕನರ್ಾಟಕ ಹೋರಾಟ ಸಮೀತಿ ರಾಜ್ಯ ಪ್ರಧಾನ ಕಾರ್ಯದಶರ್ಿ ನಾಗೇಶ ಗೋಲಶೆಟ್ಟಿ ಪಿ.ಕೆ.ಪಿ.ಎಸ್. ಸದಸ್ಯ ಪರಮಾನಂದ ಸುತಗುಂಡಿ, ಎಸ್.ಡಿ. ಎಮ್.ಸಿ. ಅಧ್ಯಕ್ಷ ಹಣಮಂತ ಚಿನಗುಂಡಿ, ಕರಿಯಪ್ಪ ಕಬ್ಬೂರ, ಡಾ|| ಕ್ರಾಂತಿ ಲೋಕರೆ, ಬಾಗಲಕೋಟ ಕುಮಾರ ಆಸ್ಪತ್ರೆ ವೈಧ್ಯಾಧಿಕಾರಿ ಗಳು ಹಾಗೂ ಸಿಬ್ಬಂದಿ ಹಿರಿಯ ಆರೋಗ್ಯ ಸಹಾಯಕ ಐ. ಎಸ್ ಕೋರಿಶೆಟ್ಟಿ, ಕಿರಿಯ ಆರೋಗ್ಯ ಸಹಾಯಕ ಲಕ್ಷ್ಮಣ ಕುಳೋಳಿ, ರಿಜ್ವಾನ ಮುಚ್ಚಾಲಿ ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು. ಆರ್.ಎಸ್.ಸೋಲೊಣಿ, ಮುತ್ತಪ್ಪ, ಪೋಳ ಕಾರ್ಯಕ್ರಮ ನಿರ್ವಹಿಸಿದರು.