ಮಹಾರಾಣಾ ಕಾಲೇಜಿನಲ್ಲಿ ಸರಸ್ವತಿ ಪೂಜೆ ಹಾಗೂ ಬೀಳ್ಕೊಡುವ ಕಾರ್ಯಕ್ರಮ
Saraswati Puja and Farewell Ceremony at Maharana College
ಬೆಟಗೇರಿ 06: ಶ್ರೀ ಮಹಾರಾಣಾ ಪ್ರತಾಪಸಿಂಹ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸರಸ್ವತಿ ಪೂಜಾ ಹಾಗೂ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ಬೆಟಗೇರಿಯ ಹಿರಿಯ ಸಾಮಾಜಿಕ ಕಾರ್ಯಕರ್ತರು, ಹಾಗೂ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಗಣೇಶಸಿಂಗ್ ಬ್ಯಾಳಿಯವರು ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಯ ಸಂದರ್ಭದಲ್ಲಿ ಶ್ರದ್ಧೆ ಪರಿಶ್ರಮ ಪಡಬೇಕು. ನಿಮ್ಮ ಹೆತ್ತವರ ಆಸೆಯನ್ನು ಪೂರೈಸಬೇಕು. ಪರೀಕ್ಷಾ ಸಮಯದಲ್ಲಿ ಮೊಬೈಲ್ ಹಾಗೂ ಟಿ.ವಿ. ಗಳಿಂದ ದೂರವಿದ್ದು, ಅಭ್ಯಾಸ ಮಾಡಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂವನ್ನು ನೀಡುವದರ ಮೂಲಕ ಶುಭ ಹಾರೈಸಿದರು.
ಇನ್ನೋರ್ವ ಅತಿಥಿಗಳಾದ ಎಸ್.ಆರ್. ವಾಲ್ಮೀಕಿ ಉಪನ್ಯಾಸಕರು ವಿದ್ಯಾರ್ಥಿಗಳು ನಿರಂತರ ಅಧ್ಯಯನದ ಜೊತೆಗೆ ಪಾಲಕರಿಗೆ ಕಲಿಸಿದ ಗುರುಗಳಿಗೆ ಗೌರವ ತಂದುಕೊಡಬೇಕು ಎಂದು ನುಡಿಯುವದರೊಂದಿಗೆ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಸಂಜನಾ ಕುಂಬಾರ, ಶಾವಮ್ಮ ಹಳ್ಳೀಕೇರಿ, ಆಶಾಬಿ ನಮಾಜಿ, ಶೃತಿ ಮಡಿವಾಳರ, ಶಿವಕುಮಾರ ಒಲಿ, ಮಂಜುಳಾ ಅಣ್ಣಿಗೇರಿ, ಸಾಗರ ಭಜಂತ್ರಿ ತಮ್ಮ ಎರಡು ವರ್ಷದ ಅನುಭವವನ್ನು ಅನಿಸಿಕೆಯಲ್ಲಿ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಎಸ್.ಎಂ. ಉಳ್ಳಾಗಡ್ಡಿಯವರು ವಹಿಸಿದ್ದರು. ಗುರು ಹಿರಿಯರ ಆಶೀರ್ವಾದ ನಿಮ್ಮ ಮೇಲಿರಲಿ, ಒಳ್ಳೆಯ ಸಂಸ್ಕಾರಗಳನ್ನು ಬೆಳೆಸಿಕೊಳ್ಳಿ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿದರು. ಶೃತಿ ಮಡಿವಾಳರ ಪ್ರಾರ್ಥನೆಗೈದರು, ಎಸ್.ಬಿ.ಚೇಗರಡ್ಡಿ ಉಪನ್ಯಾಸಕರು ಸ್ವಾಗತಿಸಿದರು. ಬಿ.ವೈ. ಕರಿಬಸಣ್ಣವರ ಉಪಸ್ಥಿತರಿದ್ದರು. ಡಿ.ಎಸ್. ನಾಯಕ ಉಪನ್ಯಾಸಕರು ಸಂಯೋಜಿಸಿದ ಕಾರ್ಯಕ್ರಮ ಎಸ್.ವಿ. ಹಿರೇಮಠ ಉಪನ್ಯಾಸಕರ ವಂದನಾರೆ್ಣಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 