ಶರಣ ಸಂಸ್ಕೃತಿ ಉತ್ಸವ ಯಶಸ್ವಿಗೋಳಿಸಿ-ಅಂದಪ್ಪ ಜವಳಿ
ಕುಕನೂರ 20 : ಪಟ್ಟಣದ ಅನ್ನದಾನೀಶ್ವರ ಶಾಖಾಮಠದಲ್ಲಿ ಶ್ರೀಮಠದ ಪೂಜ್ಯರ 2ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ 10 ದಿನಗಳ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಅಂದಪ್ಪ ಜವಳಿ ಹೇಳಿದರು.
ಅವರು ಕುಕನೂರ ಪಟ್ಟಣದ ಅನ್ನದಾನೇಶ್ವರ ಶಾಖಾಮಠದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡುತ್ತಾ ಕುಕನೂರ ಪಟ್ಟಣದಲ್ಲಿ ಇದೆ ಜನವರಿ 21 ಜನವರಿ 30 ರವರೆಗೆ ವಿಶೇಷವಾಗಿ ಶರಣರ ಚರಿತಾಮೃತ ಪ್ರವಚನ, ವಿಶೇಷ ಚೇತನರ ಸಾಮೂಹಿಕ ವಿವಾಹಗಳು, ರೈತರ ಸಮಾವೇಶ, ಸಾಂಸ್ಕೃತಿಕ ಸಂಭ್ರಮ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ ಇಂತಹ ಕಾರ್ಯಕ್ರಮಕ್ಕೆ ಭಕ್ತರ ಸಹಕಾರ ನೀಡಿ ಯಶಸ್ವಿಗೋಳಿಸಬೇಕೆಂದು ಕರೆ ನೀಡಿದರು.
ನಂತರ ಮಾತನಾಡಿದ ಸಮಿತಿ ಕಾರ್ಯದರ್ಶಿ ವೀರಣ್ಣ ಅಣ್ಣಿಗೇರಿ ಶರಣರ ಚಿಂತನೆಗಳನ್ನ ಸಮಾಜ ಜನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ಬಸವವಾದಿ ಶರಣರು ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಅಂತಹ ಶರಣರ ಚಿಂತನಾ ಕಾರ್ಯಕ್ಕೆ ಭಕ್ತರು ತುಂಬಾ ಜನ ಸೇರಬೇಕು ಎಂದರು. ರಶೀಧ ಸಾಬ್ ಅಣಜೀಗೇರಿ ಮಾತನಾಡಿ ಎಲ್ಲಾರು ಒಂದಾಗಿ ಮಾಡಿದಾಗ ಮಾತ್ರ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಸಾಧ್ಯ ಭಕ್ತರು ಜಾತಿ ಮತ ಪಂಥ ಹೊಂದಾಗಬೇಕು ಎಂದರು.
ನಂತರ ಸಮಿತಿಯ ಉಪಾದ್ಯಕ್ಷರಾಗಿ ಕಳಕಪ್ಪ ಕಂಬಳಿ, ಸ ಕಾರ್ಯದರ್ಶಿಯಾಗಿ ರಶೀದಸಾಬ್ ಅಣಜಿಗೇರಿ, ಕಾರ್ಯಾಧ್ಯಕ್ಷರಾಗಿ ಡಾ ಜಂಬಣ್ಣ ಅಂಗಡಿ, ಖಚಾಂಚಿಯಾಗಿ ಈರಣ್ಣ ಶಿವಶಕ್ತಿ, ಸಂಚಾಲಕರಾಗಿ ದೇವಪ್ಪ ಸೋಬಾನದ, ಮಹೇಶ ಕಲ್ಮಠ, ಸದಸ್ಯರಾಗಿ ಚಂದ್ರಯ್ಯ ಹಿರೇಮಠ, ಭರಮಪ್ಪ ಕಳ್ಳಿಮನಿ. ಭರಮಪ್ಪ ತಳವಾರ, ಬಸವರಾಜ ಈಬೇರಿ, ಈಶಪ್ಪ ಮಡಿವಾರಳ ಅವರನ್ನ ಮಾಡಲಾಗಿದೆ.
ಸಂಧರ್ಭದಲ್ಲಿ ಗದಿಗೆಪ್ಪ ಪವಾಡಶೆಟ್ಟಿ, ವೀರಯ್ಯ ತೋಂಟದಾರ್ಯಮಠ, ಸಂಗಮೆಶ ಕಲ್ಮಠ, ರಾಮನಗೌಡ ಹುಚನೂರ, ಕಾಳಿ ಲಕ್ಷ್ಮಣ, ಪ್ರಭು ಶಿವಸಿಂಪರ ಸೇರಿದಂತೆ ಹಲವಾರು ಜನ ಇದ್ದರು.