ಲೋಕದರ್ಶನ ವರದಿ
ಕೊಪ್ಪಳ 30: ಇತ್ತೀಚಿಗೆ ನಗರದ ಸಾಹಿತ್ಯ ಭವನದಲ್ಲಿ ಸಿರಿಗನ್ನಡ ವೇದಿಕೆಯ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನ ಜರುಗಿತು.
ಮಧ್ಯಾಹ್ನ 12 ಗಂಟೆಗೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕವಿ, ಶಿಕ್ಷಕ ಗವಿಸಿದ್ದಪ್ಪ ಎಸ್. ಬಾರಕೇರ ಇವರು ಬರೆದ 'ಸಾನ್ವಿ ಮಕ್ಕಳ ಕವನ ಸಂಕಲನವನ್ನು ಮಕ್ಕಳ ಸಾಹಿತಿಗಳಾದ ಡಾ. ರಾಜೇಂದ್ರ ಎಸ್. ಗಡಾದ ಗದಗ ಇವರು ಬಿಡುಗಡೆಗೊಳಿಸಿ ಮಾತನಾಡಿ, 'ಸಾನ್ವಿ ಮಕ್ಕಳ ಕವನ ಸಂಕಲನದಲ್ಲಿ ಒಟ್ಟು 68 ಕವಿತೆಗಳಿವೆ ಇದರಲ್ಲಿ ತಿರುಳ್ಗನ್ನಡ ನಾಡನ್ನು, ಗವಿಮಠವನ್ನು, ಕೊಪ್ಪಳವನ್ನು ತಮ್ಮ ಕುಟುಂಬದವರನ್ನು ಕನ್ನಡ ನಾಡು ನುಡಿ ಸಂಸ್ಕೃತಿ ಬಿಂಬಿಸುವ ಕವಿತೆಗಳು, ಇಸ್ರೋ, ಅಬ್ದುಲ್ ಕಲಾಂ, ಹಾರುವ ತಟ್ಟೆ, ವಿಜ್ಞಾನ, ತಂತ್ರಜ್ಞಾನ, ಅಂತರೀಕ್ಷದ ಕೌತುಕವನ್ನು, ಕರುನಾಡನ್ನು ಭರತ ಭೂಮಿಯನ್ನು ವಣರ್ಿಸಿದ್ದಾರೆ. ಕವನಕ್ಕೆ ತಕ್ಕಂತೆ ಚಿತ್ರಗಳನ್ನು ಹಾಕಿ ಹೊಸ ಪ್ರಯೋಗದ ಕವನ ಸಂಕಲನವನ್ನು ಬರೆದಿದ್ದಾರೆ, ಮಕ್ಕಳಲ್ಲಿ ನವ ಚೈತನ್ಯ ಜ್ಞಾನ ಅಭಿವೃದ್ದಿಯಾಗುವಲ್ಲಿ ಶ್ರಮಿಸಿದ್ದಾರೆ ಎಂದು ಹೇಳಿದರು.
ನಂತರ ಸಮ್ಮೇಳನಾಧ್ಯಕ್ಷ ಮಹೇಶ ಸುವರ್ೆ ರವರು ಮಾತನಾಡಿ, 'ಸಾನ್ವಿ ಮಕ್ಕಳ ಕವನ ಸಂಕಲನವು ಮಕ್ಕಳ ಮನೋವಿಕಾಸ ಅರಳಿಸಲು ಇವರ ಕವನಗಳು ಮಕ್ಕಳಿಗೆ ಬೇಗಾದ ರುಚಿಸುವ ಹಾಗೂ ವಸ್ತು ವೈವಿದ್ಯಮಯವಾದ ಸಾಹಿತ್ಯವನ್ನು ಈ 'ಸಾನ್ವಿ ಕವನ ಸಂಕಲನದಲ್ಲಿವೆ ಎಂದರು.
ಜಿ.ಎಸ್. ಗೋನಾಳರವರು ಮಾತನಾಡಿ ಗವಿಸಿದ್ದಪ್ಪ ಎಸ್ ಬಾರಕೇರವರು 45 ವರ್ಷಗಳಿಂದ ಕೊಪ್ಪಳದಲ್ಲಿ ವಾಸವಾಗಿದ್ದು, ಕೊಪ್ಪಳ ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದಿರುವರು ಆದರ್ಶ ಶಿಕ್ಷಕರಾಗಿ, ಸಿರಿಗನ್ನಡ ವೇದಿಕೆಯ ತಾಲೂಕ ಅಧ್ಯಕ್ಷರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಹೆಸರು ಉಳಿಸುವಂತ ಸಾಧನೆಯನ್ನು ಮಾಡಿದ್ದಾರೆ. ಗವಿಸಿದ್ದಪ್ಪ ಎಸ್ ಬಾರಕೇರ ಇವರು ತಮಗೆ ವಿದ್ಯಾ ಕಲಿಸಿದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಬಾಹರಪೇಟ ಕೊಪ್ಪಳದ 12ಜನ ಗುರುಗಳಿಗೆ ಗುರುವಂದನೆ ಸಲ್ಲಿಸಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸನ್ಮಾನಿಸಿ ಗುರು ಸ್ಮರಣೆ ಮಾಡಿ ಎಕಲವ್ಯನಂತೆ ಮೆರೆದಿದ್ದಾರೆ ಎಂದು ಹೇಳಿದರು.
ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಿ.ಕಾ. ಬಡಿಗೇರ ವಹಿಸಿದ್ದರು, ಬೆಂಗಳೂರಿನ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷರಾದ ಎಂ.ಎಸ್. ವೆಂಕಟರಾಯ್ಯ, ಈಶ್ವರ ಹತ್ತಿ, ಅಡವಿರಾವ, ಎಸ್.ಎಂ. ಕಂಬಾಳಿಮಠ, ಫಕೀರಪ್ಪ ವಜ್ರಬಂಡಿ, ನಾಗಪ್ಪ ಉಂಕಿ, ಈರಣ್ಣ ಹುರಕಡ್ಲಿ, ಉಮೇಶ ಪೂಜಾರ, ತಿಮ್ಮನಗೌಡ್ರು, ಎಂ.ಬಿ. ಅಳವಂಡಿ, ಪಾರ್ವತಿ ದೇವಿ ಹೊಂಬಳ, ವಿಮಲಾ ಇನಾಮದಾರ, ರತ್ನಾ ಜಿ ಗೋನಾಳ, ದೇವಮ್ಮ ಬಾರಕೇರ, ವಿದ್ಯಾನರೆಗಲ್ಲ, ಕುಮಾರ ಅಭಿಷೇಕ ಬಾರಕೇರ, ಕುಮಾರ ಅಭಿಲಾಷ ಬಾರಕೇರ, ಕುಮಾರಿ ಸಾನ್ವಿ, ನೀಲಪ್ಪ ನೆರೆಗಲ್ಲ, ಮಹೇಶ ಮನ್ನಾಪೂರ, ಸುಶೀಲ ಸುವರ್ೇ ಮುಂತಾದವರು ಉಪಸ್ಥಿತರಿದ್ದರು.ಮೈಲಾರಪ್ಪ ಉಂಕಿ ನಿರೂಪಿಸಿದರು, ಶಿವಕುಮಾರ ಹಿರೇಮಠ ವಂದಿಸಿದರು.