ಗೋಟೂರ-ವಿಜಯಪುರ ರಸ್ತೆಯಲ್ಲಿ ಹೆಚ್ಚಿದ ತಗ್ಗು-ಗುಂಡಿಗಳ ದರ್ಬಾರ್ ಸಂತೋಷ್ ಕುಮಾರ್ ಕಾಮತ್
Santosh Kumar Kamath, a court of increasing potholes on the Gotura-Vijayapura road
ಗೋಟೂರ-ವಿಜಯಪುರ ರಸ್ತೆಯಲ್ಲಿ ಹೆಚ್ಚಿದ ತಗ್ಗು-ಗುಂಡಿಗಳ ದರ್ಬಾರ್ ಸಂತೋಷ್ ಕುಮಾರ್ ಕಾಮತ್
ಮಾಂಜರಿ, 19 : ಹೌದು, ಗೋಟೂರ-ಕಾಗವಾಡ ಅಂಕಲಿ ಮಾಂಜರಿ ಭಾಗದಲ್ಲಿ ತಗ್ಗು-ಗುಂಡಿಗಳ ದರ್ಬಾರ್‌ಹೆಚ್ಚಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರು ಪ್ರತಿದಿನ ಸಂಕಷ್ಟ ಅನುಭವಿಸುತ್ತಿದ್ದಾರೆ. ಗೋಟೂರದಿಂದ ಚಿಕ್ಕೋಡಿ ಮಾರ್ಗವಾಗಿ ವಿಜಯಪುರ ಸೇರುವ ಈ ಹೆದ್ದಾರಿ ಭಾಗದಲ್ಲಿ ಈಗಾಗಲೇ ವಿಜಯಪುರದಿಂದ ಹಾಗೂ ಅಥಣಿವರೆಗೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಗೋಟೂರ-ಚಿಕ್ಕೋಡಿ ಚಿಕ್ಕೋಡಿ-ಕಾಗವಾಡ ಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ಧೂಳು ಹಾಗೂ ಗುಂಡಿಗಳಿಂದ ಜನರ ಸಂಚಾರವೇ ದುಸ್ಥರವಾಗಿದೆ. ಮಳೆಯಾದರೆ ನೀರು ತುಂಬಿ ಮಾರ್ಗ ಮುಚ್ಚಿ ಅಪಘಾತಕ್ಕೆ ಆಹ್ವಾನ ನೀಡುತ್ತದೆ.
ಆಂಬ್ಯುಲೆನ್ಸ್ ವಾಹನಗಳು ಸಮಯಕ್ಕೆ ಚಿಕ್ಕೋಡಿಯಿಂದ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರೋಗಿಗಳನ್ನು ಸಾಗಿಸಲು ಬಂದರೂ ರಸ್ತೆ 'ಹದಗೆಟ್ಟಿರುವ ಕಾರಣ ಪರದಾಡಬೇಕಾಗುತ್ತಿದೆ. ಈ ಕಾರಣದಿಂದ ಪ್ರಾಣಾಪಾಯದ ಪರಿಸ್ಥಿತಿ ಜನರಲ್ಲಿಆತಂಕವನ್ನುಂಟು ಮಾಡಿದೆ. ನಿತ್ಯ ಸಂಚರಿಸುವ ವಾಹನಗಳು ಹಾನಿಯಾಗುತ್ತಿವೆ. ಶಾಲಾ ಮಕ್ಕಳ ಬಸ್‌ಗಳಿಗೆ ಅಪಾಯವಿದೆಅಧಿಕಾರಿಗಳು ಸ್ಥಳಕ್ಕೆ ಬಂದು ಸ್ಥಿತಿಗತಿ ಪರೀಶೀಲಿಸಿ ತಾತ್ಕಾಲಿಕ ದುರಸ್ತಿ ಕಾರ್ಯ ಪ್ರಾರಂಭಿಸುವಂತೆ ಜನರು ಆಗ್ರಹಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 