ಸಂಡೂರು: ನಾರಿಹಳ್ಳ ಜಲಾಶಯದಿಂದ 0.244 ಟಿಎಂಸಿ ನೀರು ಹೊರಗಡೆ
Sandur: 0.244 TMC of water released from Narihalla reservoir
ಸಂಡೂರು: ನಾರಿಹಳ್ಳ ಜಲಾಶಯದಿಂದ 0.244 ಟಿಎಂಸಿ ನೀರು ಹೊರಗಡೆ
ಬಳ್ಳಾರಿ 01: ಸಂಡೂರು ತಾಲ್ಲೂಕಿನ ನಾರಿಹಳ್ಳ ಜಲಾಶಯದ ಕ್ರಸ್ಟ್ ಗೇಟ್ ನ ಸಿಲ್ ಲೆವೆಲ್ ಮಟ್ಟ 536.219 ಮೀ(ಒಟ್ಟು 0.409 ಟಿಎಂಸಿ ಸಂಗ್ರಹ) ಇದ್ದು, ನಿವ್ವಳ ಸಂಗ್ರಹಣೆ 0.336 ಟಿಎಂಸಿ ಇದೆ. ಈಗಾಗಲೇ ಜಲಾಶಯದಲ್ಲಿ ನೀರಿನ ಮಟ್ಟ 540.76 ಮೀ(ಒಟ್ಟು 0.653 ಟಿಎಂಸಿ ಸಂಗ್ರಹ) ಮತ್ತು ನಿವ್ವಳ ಸಂಗ್ರಹಣೆ 0.580 ಟಿಎಂಸಿ ಇದ್ದು, ಪ್ರಸ್ತಕ ಸಾಲಿನ ಮುಂಗಾರಿನ ಮುಂಚಿತವಾಗಿ ದುರಸ್ಥಿ ಕಾಮಗಾರಿ ಕೈಗೊಳ್ಳಲು ಹಾಗೂ ಕ್ರಸ್ಟ್ ಗೇಟ್ ನ ಸಿಲ್ ಲೆವೆಲ್ ನ ವರೆಗೆ ನೀರನ್ನು ಹೊರತೆಗೆಯಬೇಕಾಗಿರುವುದರಿಂದ 0.244 ಟಿಎಂಸಿ ನೀರನ್ನು ಸ್ಪಿಲ್‌ವೇ ಮೂಲಕ ಹೊರಬಿಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ತಿಳಿಸಿದ್ದಾರೆ.
ಪೂರ್ತಿ ಪ್ರಮಾಣದ ವಿಮಾ ಪರಿಹರ ಮೊತ್ತ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಬಳ್ಳಾರಿ 01: ಸಿರುಗುಪ್ಪ ತಾಲ್ಲೂಕಿನ ಅರಳಿಗನೂರು ಗ್ರಾಮದ ಡಿ.ರಾಮಲಿಂಗ ಆಚಾರಿ ಅವರ ಶೆಡ್‌ಗೆ ಬೆಂಕಿ ತಗುಲಿ ಸುಟ್ಟು ಭಸ್ಮವಾದ ಹಾನಿಗೆ ಬಳ್ಳಾರಿಯ ಮೆ.ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿ ಲಿಮಿಟೆಡ್ ವಿಭಾಗೀಯ ವ್ಯವಸ್ಥಾಪಕರಿಗೆ ಪೂರ್ತಿ ಪ್ರಮಾಣದ ವಿಮಾ ಪರಿಹಾರ ಮೊತ್ತ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.
ದೂರುದಾರ ಡಿ.ರಾಮಲಿಂಗ ತಮ್ಮ ಶೆಡ್ ಗೆ ರೂ.8,00,000/- ಗಳ ವಿಮೆ ಪಾಲಿಸಿ ಮಾಡಿಸಿದ್ದು, ವಿಮೆಯು 2023 ರ ಮೇ 11 ರಿಂದ 2024 ರ ಮೇ 10 ರವರೆಗೆ ಚಾಲ್ತಿಯಲ್ಲಿದ್ದು, 2024 ರ ಮೇ 04 ರಂದು ಶೆಡ್ಡಿನ ಮೇಲೆ ಹಾದುಹೋದ ಹೈಟೆನ್ಷನ್ ವಿದ್ಯುತ್ ತಂತಿಗಳ ಶಾರ್ಟ್ ಸರ್ಕ್ಯೂಟ್‌ನಿಂದ ದೂರುದಾರರ ಶೆಡ್ಡಿಗೆ ಬೆಂಕಿ ತಗುಲಿ ಅದರಲ್ಲಿದ್ದ ದಾಸ್ತಾನು ವಸ್ತುಗಳು, ಯಂತ್ರೋಪಕರಣಗಳು, ಪೀಠೋಪಕರಣಗಳು, ಶೇ.75 ರಷ್ಟು ಸುಟ್ಟು ಭಸ್ಮವಾಗಿ ರೂ.31,25,000/- ಮೊತ್ತದ ಹಾನಿಯಾಗಿರುತ್ತದೆ. ಈ ಪ್ರಕರಣವನ್ನು ವಿಮೆ ಕಂಪನಿಗೆ ಹಾಗೂ ಸಾಲ ಪಡೆದ ಬ್ಯಾಂಕ್ ಗೆ ಮಾಹಿತಿ ನೀಡಿದ್ದರು. ನಷ್ಟ ಪರಿಹಾರ ಮೊತ್ತ ಕೋರಿ ವಿಮಾ ಕಂಪನಿಗೆ ಕ್ಲೈಮ್ ಸಲ್ಲಿಸಿದ್ದರು.ನಂತರ ಕ್ಲೈಮ್ ಪರಿಹಾರ ನೀಡದ ಕಾರಣ ಕಾನೂನಿನ ಅನ್ವಯ ನೋಟಿಸ್‌ನ್ನು ಸಹ ಜಾರಿ ಮಾಡಿದ ನಂತರ ದೂರುದಾರರ ಖಾತೆಗೆ ವಿಮಾ ಕಂಪನಿಯು ರೂ. 60,664/-ಮಾತ್ರ ಪಾವತಿ ಮಾಡಿತ್ತು. ವಿಮಾ ಪಾಲಿಸಿಯ ಮೊತ್ತವು ರೂ.8,00,000/- ಇದ್ದು ಬಾಕಿ ರೂ.7,39,336/- ಗಳನ್ನು ಶೇ.9 ಬಡ್ಡಿಯೊಂದಿಗೆ ಪರಿಹಾರ ನೀಡಲು ಒದಗಿಸುವಂತೆ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಆಯೋಗದ ಅಧ್ಯಕ್ಷ ಎನ್.ತಿಪ್ಪೇಸ್ವಾಮಿ ಹಾಗೂ ಮಹಿಳಾ ಸದಸ್ಯರಾದ ಮಾರ್ಲಾ ಶಶಿಕಲ ಇವರು ಉಭಯ ಪಕ್ಷಗಾರರ ವಾದ ವಿವಾದ ಆಲಿಸಿದ ನಂತರ ಪ್ರಕರಣದಲ್ಲಿ ದೂರುದಾರರ ಶೆಡ್ಡಿಗೆ ಬೆಂಕಿ ತಗುಲಿ ಅವಘಡ ನಡೆದಿದ್ದು, ಎದುರುದಾರರು ಘಟನಾ ಸ್ಥಳದಲ್ಲಿ ತಪಾಸಣೆ ಮಾಡಿ ಪೂರ್ಣ ಪ್ರಮಾಣದ ವರದಿ ನೀಡದಿರುವುದು. ದೂರುದಾರರ ಶೆಡ್ಡಿನಲ್ಲಿ ಪಾಲಿಸಿಗೆ ಒಳಪಟ್ಟ ದಾಸ್ತಾನು ಹಾಗೂ ಕರಕುಶಲ ವಸ್ತುಗಳು ಸುಟ್ಟಿರುತ್ತದೆ ಎಂದು ಸಾಬೀತುಪಡಿಸಿರುವುದರಿಂದ ದೂರನ್ನು ಭಾಗಶಃ ಪುರಸ್ಕರಿಸಿ ಎದುರುದಾರರು ಬಾಕಿ ವಿಮಾ ಮೊತ್ತ ರೂ.1,11,250/- ಪರಿಹಾರ, ಮಾನಸಿಕ ಹಿಂಸೆಗೆ ರೂ.10,000/- ಹಾಗೂ ದೂರಿನ ವೆಚ್ಚ ರೂ.5000/- ಗಳನ್ನು ದೂರುದಾರಿಗೆ ಪಾವತಿಸುವಂತೆ ಆದೇಶಿಸಿದ್ದಾರೆ.
ಈ ಪರಿಹಾರ ಮೊತ್ತವನ್ನು 45 ದಿನಗಳೊಳಗೆ ಪಾವತಿಸಬೇಕು. ತಪ್ಪಿದಲ್ಲಿ ಪರಿಹಾರದ ಮೊತ್ತ ರೂ.1,11,250/- ಶೇ.6 ಬಡ್ಡಿ ಮೊತ್ತವನ್ನು ಆದೇಶ ಹೊರಡಿಸಿದ ದಿನದಿಂದ ಪಾವತಿಸಲೂ ಅವರು ಆದೇಶಿದ್ದಾರೆ.
ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿ ಕೊರಕರ ನಿರ್ವಹಣೆ ಕುರಿತು ತರಬೇತಿರೈತರು ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಿ: ಎಸ್.ಎನ್.ಮಂಜುನಾಥಬಳ್ಳಾರಿ 01: ರೈತರು ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಆದಾಯ ದ್ವಿಗುಣಗೊಳಿಸಿಕೊಳ್ಳಬೇಕು ಎಂದು ಉಪ ಕೃಷಿನಿರ್ದೇಶಕ ಎಸ್.ಎನ್.ಮಂಜುನಾಥ ಅವರು ತಿಳಿಸಿದರು.
ಕೃಷಿ ಇಲಾಖೆ ವತಿಯಿಂದ ಆತ್ಮ ಯೋಜನೆಯಡಿ ಬಳ್ಳಾರಿ ತಾಲ್ಲೂಕಿನ ಸಂಜೀವರಾಯನಕೋಟೆ ಗ್ರಾಮದಲ್ಲಿ ಶುಕ್ರವಾರ ಏರಿ್ಡಸಿದ್ದ ರೈತರ ತರಬೇತಿ ಕಾರ್ಯಕ್ರಮ, ರೈತ ಕ್ಷೇತ್ರ ಪಾಠಶಾಲೆ, ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿ ಕೊರಕದ ನಿರ್ವಹಣೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿ ಕೊರಕ ಎಂಬ ಕೀಟ ಅತಿಯಾಗಿ ಹಾನಿಯನ್ನುಂಟು ಮಾಡುತ್ತದೆ. ಇದರ ನಿರ್ವಹಣೆಗೆ ರೈತರು ಬೇವಿನ ಕಶಾಯ ಅಥವಾ ಥಯೋಡಿಕಾರ್ಬ್‌ನ್ನು ಸಿಂಪಡಿಸಬೇಕು ಎಂದು ತಿಳಿಸಿದರು.ರೈತರು ಒಂದೇ ಬೆಳೆಯನ್ನು ಅವಲಂಬಿಸದೇ ಬೆಳೆ ಪರಿವರ್ತನೆಯನ್ನು ಕೈಗೊಳ್ಳಬೇಕು. ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಬಳಕೆಯನ್ನು ರೈತರು ಉಪಯೋಗಿಸುವುದರಿಂದ ಬೇಸಾಯದ ಖರ್ಚನ್ನು ತಗ್ಗಿಸಬಹುದು ಎಂದು ರೈತರಿಕೆ ಮನವರಿಕೆ ಮಾಡಿಕೊಟ್ಟರು.ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ ಅವರು ಮಾತನಾಡಿ, ರೈತರು ತಾವು ಬೆಳೆದ ಬೆಳೆಗಳಿಗೆ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು. ಅತಿವೃಷ್ಟಿ ಅಥವಾ ಅನಾವೃಷ್ಟಿ ಸಂಭವಿಸಿ ಬೆಳೆ ಹಾನಿಯಾದರೆ ವಿಮಾ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.ಹತ್ತಿ ಬೆಳೆಯಲ್ಲಿ ರಸ ಹೀರುವ ಕೀಟಗಳನ್ನು ನಿರ್ವಹಣೆ ಮಾಡಲು ಬೇವು ಆಧಾರಿತ ಕೀಟನಾಶಕಗಳನ್ನು ಸಿಂಪಡಣೆ ಮಾಡಬೇಕು. ಗುಲಾಬಿ ಕಾಯಿ ಕೊರಕದ ನಿರ್ವಹಣೆಗೆ ಪ್ರತಿ ಎಕರೆಗೆ 2 ರಂತೆ ಲಿಂಗಾಕರ್ಷಕ ಬಲೆಗಳನ್ನು ನೆಡಬೇಕು ಎಂದು ಹೇಳಿದರು.ಹಗರಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರ ವಿಜ್ಞಾನಿಗಳಾದ ಮಲ್ಲೇಶ್ ಅವರು ಮಾತನಾಡಿ, ರೈತರು ಎಕರೆಗೆ 2 ರಿಂದ 3 ಪ್ಯಾಕೆಟ್ ಹತ್ತಿ ಬೀಜವನ್ನು ಉಪಯೋಗಿಸದೆ, ಒಂದು ಪ್ಯಾಕೆಟ್ ಬೀಜವನ್ನು ಉಪಯೋಗಿಸಬೇಕು. ಗಿಡದಿಂದ ಗಿಡಕ್ಕೆ ಅಂತರ ಕಾಪಾಡುವುದರಿಂದ ಇಳುವರಿಯನ್ನು ಹೆಚ್ಚಿಸಬಹುದು ಎಂದು ತಿಳಿಸಿದರು.ಬಿಟಿ ಹತ್ತಿ ಬೆಳೆಯಲು ಅನುಮತಿ ನೀಡಿದಾಗಿನಿಂದಲೂ ಇಲ್ಲಿಯವರೆಗೆ ಬಿಟಿರಹಿತ ಹತ್ತಿ (ರೆಫ್ಯೂಜಿ)ಯನ್ನು ಬೆಳೆಯದಿರುವುದು ಗುಲಾಬಿ ಕಾಯಿ ಕೊರಕದ ಉಲ್ಬಣಕ್ಕೆ ಕಾರಣವಾಗಿದೆ ಎಂದರಲ್ಲದೇ ಕೀಟನಾಶಕಗಳನ್ನು ಶಿಫಾರಸ್ಸು ಮಾಡಿರುವುದಕ್ಕಿಂತ ಹೆಚ್ಚಿನ ಬಳಕೆ ಮಾಡಿರುವುದರಿಂದ ಈ ಕೀಟವು ಹಲವು ಕೀಟನಾಶಕಗಳಿಗೆ ನಿರೋಧಕಶಕ್ತಿಯನ್ನು ಬೆಳೆಸಿಕೊಂಡಿದೆ ಎಂದರು.
ಗುಲಾಬಿ ಕಾಯಿ ಕೊರಕ ಕಂಡುಬಂದಲ್ಲಿ 3 ಮಿ.ಲೀ. ಬೇವಿನ ಮೂಲದ ಕೀಟನಾಶಕ ಅಥವಾ 1 ಗ್ರಾಂ ಥಯೋಡಿಕಾರ್ಬ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಕೀಟನಾಶಕವನ್ನು ಸಿಂಪಡಿಸಬೇಕು ಎಂದು ಮಾಹಿತಿ ನೀಡಿದರು.ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸವರಾಜ್ ಸಿಂಧಿಗೇರಿ, ಕೃಷಿ ಇಲಾಖೆಯಡಿ ಲಭ್ಯವಿರುವ ವಿವಿಧ ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ನೀಡಿದರು.
ಇಫ್ಕೊದವರಿಂದ ರೈತ ಕ್ಷೇತ್ರ ಪಾಠಶಾಲೆಯಡಿ ಹತ್ತಿ ಬೆಳೆಗೆ ನ್ಯಾನೋ ಯೂರಿಯಾ ಹಾಗೂ ಸಾಗರಿಕಾ ಎಂಬ ದ್ರಾವಣವನ್ನು ಡ್ರೋನ್ ಮೂಲಕ ಸಿಂಪಡಿಸಲಾಯಿತು.ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಗುರುಸಿದ್ದಮೂರ್ತಿ, ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕಿ ಕವಿತಾ ಕುಮಾರಿ, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕಿ ವಾಣಿ ಕೋರ್ಪಳ, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಶಿಲ್ಪಾ, ರೇಣುಕಾರಾದ್ಯ, ಕೃಷಿ ಸಂಜೀವಿನಿ ಮಣಿಕೃಷ್ಣ, ಇಫ್ಕೊ ಕಂಪನಿಯ ಕ್ಷೇತ್ರಾಧಿಕಾರಿಗಳಾದ ಸಾಗರ್, ಸಚಿನ್ ಸೇರಿದಂತೆ ಇತರೆ ಸಿಬ್ಬಂದಿಗಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.
ವಿಮಾ ಮೊತ್ತ ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರುಬಳ್ಳಾರಿ 01: ಆಂಧ್ರ್ರದೇಶದ ಕರ್ನೂಲ್ ಜಿಲ್ಲೆಯ ಬಪೂರಮ್ ಕೌತಳಂ ಮಂಡಲದ ನಿವಾಸಿಯಾದ ಚಲುವಾದಿ ಈರಮ್ಮ ಅವರು ಕರ್ನೂಲ್‌ನ ಚೋಲಮಂಡಲಂ ಎಂ.ಎಸ್.ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ವ್ಯವಸ್ಥಾಪಕರ ವಿರುದ್ಧ, ಕಳ್ಳತನವಾದ ಟ್ರಾಕ್ಟರ್ ಟ್ರೈಲರ್ ಗೆ ವಿಮಾ ಪರಿಹಾರ ಮೊತ್ತ ರೂ.9,08,000/- ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರುದಾರರು ಎದುರುದಾರರ ವಿಮಾ ಕಂಪನಿಯಿಂದ ತಮ್ಮ ವಾಹನ ಟ್ರಾಕ್ಟರ್ ನೋಂದಣಿ ಸಂಖ್ಯೆ:ಎ.ಪಿ-39/ಟಿ.ಎಸ್-7421ನೇ ಸಂಬಂಧಿಸಿದಂತೆ ಪಾಲಿಸಿ ಪಡೆದಿದ್ದು, ಈ ಪಾಲಿಸಿಯು 2022ರ ನವೆಂಬರ್ 22 ರಿಂದ 2023ರ ನವೆಂಬರ್ 24 ರ ವರೆಗೆ ಚಾಲ್ತಿಯಲ್ಲಿತ್ತು. ಬೊಬ್ಬನಹಾಳ್ ಗ್ರಾಮದ ಅವರ ಸ್ನೇಹಿತರಾದ ಮೋಹನ್ ರೆಡ್ಡಿ ಜಮೀನಿನ ಶೆಡ್ಡಿನಲ್ಲಿ 2023 ರ ಜೂನ್ 10 ರಂದು ಟ್ರಾಕ್ಟರ್ ಟ್ರೈಲರ್‌ನ್ನು ನಿಲ್ಲಿಸಿರುತ್ತಾರೆ.ಮಾರನೇ ದಿನ ನೋಡಿದಾಗ ವಾಹನವು 2023ರ ಜೂನ್11 ರಂದು ಕಳ್ಳತನವಾಗಿದ್ದು, ಈ ಕುರಿತು ಸಂಬಂಧಪಟ್ಟ ವ್ಯಾಪ್ತಿಯ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಪೋಲಿಸ್ ಇಲ್ಲಾಖೆಯಿಂದ ವಾಹನ ಪತ್ತೆಯಾಗದ ಬಗ್ಗೆ ಸಂಬಂಧಪಟ್ಟ ಕೊರ್ಟ್ ಗೆ “ಸಿ” ವರದಿ ಸಹ ಸಲ್ಲಿಸಿದ್ದರು.ನಂತರ ಪಿರ್ಯಾದುದಾರರು ವಿಮಾ ಕಂಪನಿಗೆ ಮಾಹಿತಿ ನೀಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದಾಗ್ಯೂ ಸಹ ಪರಿಹಾರ ಮೊತ್ತ ನೀಡಿದಿರುವ ಕಾರಣ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು. ಎದುರುದಾರರು ಪ್ರಕರಣದಲ್ಲಿ ಹಾಜರಾಗಿ ತಕರಾರು ಸಲ್ಲಿಸಿ, ವಾಹನ ಕಳ್ಳತನವಾದ 12 ದಿನಗಳ ನಂತರ ವಿಮಾ ಕಂಪನಿಗೆ ಹಾಗೂ ಪೋಲಿಸ್ ಠಾಣೆಗೆ ದೂರು ನೀಡಿರುವುದರಿಂದ ವಿಮಾ ಪಾಲಿಸಿಯ ಷರತ್ತನ್ನು ಉಲ್ಲಂಘಿಸಿದ್ದರು. ಅಲ್ಲದೇ ಕಳ್ಳತನವಾದ ವಾಹನ ದಾಖಲೆಗಳ ಪತ್ರಗಳನ್ನು ಸಲ್ಲಿಸಲು ಸೂಚಿಸಿದರೂ ದೂರುದಾರರು ಸಲ್ಲಿಸದೇ ಇರುವುದರಿಂದ ನೋ ಕ್ಲೈಮ್ ಎಂದು ವಿಲೇಗೊಳಿಸಿರುತ್ತಾರೆ ಎಂದು ಆಯೋಗಕ್ಕೆ ತಕರಾರು ಸಲ್ಲಿಸಿದ್ದರು.ಆಯೋಗದ ಅಧ್ಯಕ್ಷರಾದ ಎನ್.ತಿಪ್ಪೇಸ್ವಾಮಿ ಹಾಗೂ ಮಹಿಳಾ ಸದಸ್ಯರಾದ ಮಾರ್ಲಾ ಶಶಿಕಲಾ ಇವರು ಉಭಯ ಪಕ್ಷಗಾರರ ವಾದ ವಿವಾದ ಆಲಿಸಿದ ನಂತರ ದೂರುದಾರರ ವಾಹನವು ಕಳ್ಳತನವಾದ ಬಗ್ಗೆ ಸಂಬಂಧಪಟ್ಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಬಳ್ಳಾರಿ ಜೆ.ಎಮ್.ಎಫ್.ಸಿ. ನ್ಯಾಯಲಯಕ್ಕೆ ಸಿ ವರದಿ ಸಲ್ಲಿಸಿರುವುದನ್ನು ಪರೀಶೀಲಿಸಿತು. ಎದುರುದಾರರು ಟ್ರಾಕ್ಟರ್ ಟ್ರೈಲರ್ ವಿಮಾ ಮೊತ್ತದ ಪರಿಹಾರ ನೀಡುವಲ್ಲಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಪರಿಗಣಿಸಿ
ತಡವಾಗಿ ವಿಮಾ ಕಂಪನಿಗೆ ಮಾಹಿತಿ ಸಲ್ಲಿರುವುದು ಷರತ್ತು ಉಲ್ಲಂಘಿಸಿದಂತೆ ಆಗುವುದಿಲ್ಲ ಎಂಬ ಆಧಾರದಲ್ಲಿ ಪ್ರಕರಣವನ್ನು ಭಾಗಶ: ಪುರಸ್ಕರಿಸಿ ಎದುರುದಾರರು ಟ್ರಾಕ್ಟರ್ ಇಂಜಿನ್‌ನ ವಿಮಾ ರಕ್ಷಣೆಯ ಐ.ಡಿ ಮೊತ್ತ ರೂ.4,56,000, ಮಾನಸಿಕ ಹಿಂಸೆಗೆ ರೂ.10,000 ಮತ್ತು ಪ್ರಕರಣದ ವೆಚ್ಚ ರೂ.5000 ಆದೇಶದ ದಿನದಿಂದ 45 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸಲು, ತಪ್ಪಿದಲ್ಲಿ ರೂ.4,56,000/-ಗಳಿಗೆ ವಾರ್ಷಿಕ ಶೇ.6 ರಷ್ಟು ಬಡ್ಡಿ ಪಾವತಿಸಲು ಸಹ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 