ಎರಡು ಲಕ್ಷ ಮೌಲ್ಯದ ಶ್ರೀಗಂಧ ಕಳ್ಳತನ
ಹೂವಿನಹಡಗಲಿ 06: ತಾಲ್ಲೂಕಿನ ಮುದೇನೂರು ಗ್ರಾಮದ ಪಕ್ಕದಲ್ಲಿರುವ ಎಸ್.ಎಂ.ಜಾನ್ ಎಂಬುವವರಿಗೆ ಸೇರಿದ ತೋಟದಲ್ಲಿ ಈಚೆಗೆ ಬೆಳಗಿನ ಜಾವ ಶ್ರೀಗಂಧದ ಗಿಡಗಳನ್ನು ಕಡಿದು ಕಳವು ಮಾಡಲಾಗಿದೆ. ಎರಡು ಲಕ್ಷ ರೂ.ಮೌಲ್ಯದ 16ವರ್ಷದ ಶ್ರೀಗಂಧದ ಗಿಡವನ್ನು ಕಡಿದು ಹಾಕಲಾಗಿದ್ದು ಅವುಗಳಲ್ಲಿ ಶ್ರೀಗಂಧದ ತಿರುಳು (ಹಾಟ್‌ಉಡ್) ಬಲಿತ ಒಂದು ಗಿಡವನ್ನು ಹೊತ್ತೊಯ್ದಿದ್ದಾರೆ. ಈ ಬಗ್ಗೆ ಹೂವಿನಹಡಗಲಿ ಪೊಲೀಸ್ ಠಾಣೆ ಗೆ ದೂರು ನೀಡಲಾಗಿದೆ.