ಮರಳು ಸಮಸ್ಯೆ : ಕಾಳಿ ನದಿ ಉಸುಕು ತೆಗೆಯಲು ಅನುಮತಿ ನಿರಾಕರಣೆ ಸಮಸ್ಯೆ ನಿವಾರಿಸಲು ಅಧಿಕಾರಿಗಳಿಗೆ ಠರಾವು ಕಳುಹಿಸಿದ ತಾ.ಪಂ.

ಕಾರವಾರ 16: ತಾಲೂಕಿನಲ್ಲಿ ಮರಳು ಸಮಸ್ಯೆಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗಿದ್ದು,ತಕ್ಷಣ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಬೇಕೆಂದು ತಾಲೂಕು ಪಂಚಾಯತಿ ಸದಸ್ಯರು  ಠರಾವು ಕೈಗೊಂಡರು. ಠರಾವನ್ನು ತುತರ್ಾಗಿ  ಜಿಲ್ಲಾಡಳಿತಕ್ಕೆ ಕಳುಹಿಸಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾ.ಪಂ.ಅಧ್ಯಕ್ಷೆ ಪ್ರಮೀಳಾ ನಾಯ್ಕ  ತಾ.ಪಂ.ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿದರು.

ಇಲ್ಲಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಸಮಸ್ಯೆಗಳ ಚಚರ್ೆಯಲ್ಲಿ ಭಾಗವಹಿಸಿ, ಅಧಿಕಾರಿಗಳಿಗೆ ಸೂಕ್ತ ನಿದರ್ೇಶನ ನೀಡಿದರು. 

ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಸರಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಮರಳಿನ(ಉಸುಕು) ಕೊರತೆ ಸಮಸ್ಯೆಯಾಗಿದೆ ಎಂದು ಕದ್ರಾ ತಾ.ಪಂ.ಕ್ಷೇತ್ರದ ಸದಸ್ಯೆ ಅಶ್ವಿನಿ ಪೆಡ್ನೇಕರ ಸಭೆಯ ಗಮನಕ್ಕೆ ತಂದರು.ಬಳಿಕ ಈ ಬಗ್ಗೆ ಚಚರ್ೆ ನಡೆದು,ಅಂಕೋಲಾ,ಹೊನ್ನಾವರ ತಾಲೂಕುಗಳಿಗೆ ಮರಳು ತೆಗೆಯಲು ಪರವಾನಗಿ ಸಿಕ್ಕಿದೆ. ಆದರೆ ಕಾರವಾರ ತಾಲೂಕಿನ ಕಾಳಿ ನದಿಯಲ್ಲಿ ಮಾತ್ರ ಉಸುಕು ತೆಗೆಯಲು ಅನುಮತಿ ನೀಡದೇ ದೂರ ಇಡಲಾಗಿದೆ. ಕೇಂದ್ರ ಸಕರ್ಾರ ಮರಳು ತೆಗೆಯಲು ಅಡ್ಡಗಾಲು ಹಾಕಿದೆ ಎಂದು ಪರಿಸರ ಇಲಾಖೆ ಹೇಳುತ್ತಿದೆ. ಇದರ ಬಗ್ಗೆ ಸಂಬಂಧಪಟ್ಟ ಇಲಾಖೆ ಮರುಪರಿಶೀಲನೆ ನಡೆಸಬೇಕು.ಈ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಂಡು ಸಂಬಂಧಪಟ್ಟ ಇಲಾಖೆಗೆ ಕಳುಹಿಸಬೇಕು ಎಂದು ಶಿರವಾಡ ಕ್ಷೇತ್ರದ ಸದಸ್ಯ ಮಾರುತಿ ನಾಯ್ಕ,ವೈಲವಾಡಾ ಸದಸ್ಯ ಪ್ರಶಾಂತ್ ಗೋವೇಕರ ಸೇರಿದಂತೆ ಬಹುತೇಕ ಸದಸ್ಯರು ಒತ್ತಾಯಿಸಿದರು.

ತಾಲೂಕಿನ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅವ್ಯವಸ್ಥೆಯಿಂದ ಕೂಡಿದ್ದು,ಸಂಬಂಧಪಟ್ಟ ತಾಲೂಕು ಆರೋಗ್ಯ ಅಧಿಕಾರಿಗಳು ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ. ಅಲ್ಲದೇ ತಾ.ಪಂ.ಸಭೆಗೂ ಬಂದಿಲ್ಲ. ಅವರ ಬದಲಿಗೆ ಬೇರೆ ಸಿಬ್ಬಂದಿಯನ್ನು ಕಳುಹಿಸಿರುವುದರಿಂದ ಸಭೆಗೆ ಸರಿಯಾದ ಮಾಹಿತಿ ಸಿಗುವುದಿಲ್ಲ ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಗೌಡ ಆಕ್ಷೇಪ ವ್ಯಕ್ತಪಡಿಸಿದರು.

ಅಮದಳ್ಳಿ ತಾ.ಪಂ.ವ್ಯಾಪ್ತಿಯ ಜಡಿಗದ್ದೆ ಗ್ರಾಮದ ಗಭರ್ಿಣಿ ಸ್ತ್ರೀಯರು ದೂರದ ತೋಡುರು ಗ್ರಾಮಕ್ಕೆ ಹೋಗಿ ತಾಯಿ ಕಾಡರ್್ನ ಸೌಲಭ್ಯ ಪಡೆಯಬೇಕಾಗಿದೆ. ತೋಡೂರಿನ ಬದಲಾಗಿ ಅಮದಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲಿಯ್ಲೇ ಎಲ್ಲ ಸೌಲಭ್ಯ ಸಿಗುವ ವ್ಯವಸ್ಥೆಯಾಗಬೇಕು ಎಂದರು.

ಅದೇ ರೀತಿ ತಾಲೂಕಿನ ಎಸ್ಬಿಐ ಬ್ಯಾಂಕ್ನಲ್ಲಂತೂ ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಬಹಳ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹಿರಿಯ ನಾಗರೀಕರು ವೃದ್ಧಾಪ್ಯ ವೇತನ,ನಿವೃತ್ತಿ ವೇತನ ಪಡೆಯಲು ಹೆಣಗಾಡಬೇಕಾಗಿದೆ. ಇಲ್ಲಿ 200 ರಿಂದ 300 ಸಂಖ್ಯೆಯ ವಿಕಲಚೇತನರು,ಹಿರಿಯ ನಾಗರೀಕರು ದಿನವೀಡಿ ಸರದಿ ಸಾಲಿನಲ್ಲಿ ನಿಂತು ಹಣ ಪಡೆಯಬೇಕಾಗಿದೆ.ಬ್ಯಾಂಕ್ನಲ್ಲಿ ಟೋಕನ್ ಸಿಸ್ಟಂ ಬಂದ್ ಮಾಡಿರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ ಎಂದು ಸದಸ್ಯ ಮಾರುತಿ ನಾಯ್ಕ ಸಭೆಯ ಗಮನಸೆಳದರು.

ಲೀಡ್ ಬ್ಯಾಂಕ್ನ ಅಧಿಕಾರಿ ಪಿಂಜಾರಾ ಅವರು ಮಾತನಾಡಿ,ಟೋಕನ್ ಸಿಸ್ಟಂನ್ನು ಸದ್ಯ ಬ್ಯಾಂಕ್ ಆಫ್ ಬರೋಡಾದಲ್ಲಿ ಮಾತ್ರ ಚಾಲನೆಯಲ್ಲಿದೆ. ಸುಧಾರಿತ ಟೋಕನ್ ಪದ್ಧತಿಯನ್ನು ಹಂತ ಹಂತವಾಗಿ ಎಲ್ಲ ಬ್ಯಾಂಕ್ಗಳಿಗೆ ವಿಸ್ತರಿಸಲಾಗುವುದು. ಎಸ್ಬಿಐ ನಲ್ಲಿ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಹಾಗೂ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹಳಗೇಜೂಗ್ನ ಮಾಜಿ ಸೈನಿಕನಿಗೆ 25 ಗುಂಟೆ ಬದಲಾಗಿ 5 ಗುಂಟೆ ನಿವೇಶನ ಮಂಜೂರಿಯಾಗಿದ್ದು,ಇನ್ನೂ ತನಕ ಹಸ್ತಾಂತರವಾಗಿಲ್ಲ ಎಂದು ಪ್ರಶಾಂತ್ ಗೋವೇಕರ ಸಭೆಯ ಗಮನಕ್ಕೆ ತಂದಾಗ,  ಸೈನಿಕ ಬೋಡರ್್ನಿಂದ ಯುದ್ಧದಲ್ಲಿ ಮಡಿದ ವೀರಯೋಧರು ಹಾಗೂ ಅಂಗವಿಕಲರಾದವರಿಗೆ ಉಚಿತವಾಗಿ ನಿವೇಶನ ನೀಡಲಾಗುತ್ತದೆ.ಆದರೆ ಇತರೆ ಸೈನಿಕರಿಗೆ ನಿವೇಶನ ನೀಡಲು 2 ಲಕ್ಷ ರೂ. ದೊಳಗಿನ ಆದಾಯದ ಮಿತಿ ಇದೆ.ಅಲ್ಲದೇ ಕೆಲವು ನಿಯಮಾವಳಿ ಪ್ರಕಾರ ನಿವೇಶನ ಮಂಜೂರಿ ಮಾಡಲಾಗುತ್ತದೆ ಎಂದು ಸೈನಿಕ ಬೋಡರ್್ನ ಸಹಾಯಕ ಅಧಿಕಾರಿ ವಿವರಿಸಿದರು.

ಕೆಲವು ವಾಹನ ಸವಾರರು ಮೂಲ ಬಲ್ಬ್ಗಳನ್ನು ತೆರುವುಗೊಳಿಸಿ, ಎಲ್ಇಡಿ, ಎಲೋಜಿನ್ ಬಲ್ಬ್ಗಳನ್ನು ವಾಹನಗಳಿಗೆ ಅಳವಡಿಸಿ ಓಡಾಡುತ್ತಾರೆ.ಇದರಿಂದ ರಸ್ತೆ ಅಪಘಾತ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆರ್ಟಿಓ ಅಧಿಕಾರಿಗಳಿಗೆ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ  ಆಗ್ರಹಿಸಿದರು.

ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಡಾ.ಬಾಲಪ್ಪನವರ್ ಆನಂದಕುಮಾರ್,ದೇವಿದಾಸ್ ಬೇಳೂರಕರ,ಗಂಗಾ ನಾಯ್ಕ,ಅಶ್ವಿನಿ ಗುನಗಿ,ಶ್ರೀಧರ್ ತಾಮಸೆ,ಇನಾಸಿನ್ ಡಿಕೋಸ್ತಾ,ನಾಗವೇಣಿ ಗೊಂಡ,ಸರೋಜಿನಿ ಗೌಡ,ಲಕ್ಷ್ಮಿ ಪರಶುರಾಮ್ ಭಜಂತ್ರಿ ಇದ್ದರು.