ಸಮಾಜಮುಖಿ ಮೇತ್ರಿ ಕಾಕಾ ಅವರ ಗ್ರಂಥ ಬಿಡುಗಡೆ ಸಮಾರಂಭ
ಇಂಡಿ 21: ತಾಲ್ಲೂಕಿನ ತಡವಲಗಾ ಗ್ರಾಮದ ಜೋಡಗುಡಿಯ ಮರುಳಸಿದ್ದೇಶ್ವರ ಮಂಗಲಕಾರ್ಯಾಲಯದ ಆವರಣದಲ್ಲಿ ಇದೆ ದಿನಾಂಕ 29-12-2024 ರಂದು ಮಧ್ಯಾಹ್ನ 02-30 ಕ್ಕೆ ನಮ್ಮ ತಂದೆಯವರಾದ ದಿ!! ಶಿವಗೊಂಡಪ್ಪ ರಾಮಚಂದ್ರ ಮೇತ್ರಿ ಇವರ ಸಮಾಜಮುಖಿ ಮೇತ್ರಿ ಕಾಕಾ ಸಂಸ್ಮರಣೆ ಗ್ರಂಥ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಬಾಬುಸಾಹುಕಾರ ಮೇತ್ರಿ ಅವರು ತಿಳಿಸಿದ್ದಾರೆ ಅವರು ಇಂಡಿ ನಗರದ ರೇವಣಸಿದ್ದೇಶ್ವರ ಬ್ಯಾಂಕ್ ಸಭಾಂಗಣದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮಕ್ಕೆ ಬಂಥನಾಳ ವೃಷಭಲಿಂಗ ಶಿವಾಚಾರ್ಯರು, ಚಿತ್ರದುರ್ಗ ಮುರುಘಾಮಠದ ಆಡಳಿತ ಅಧಿಕಾರಿ ಜಯಬಸವ ಕುಮಾರ್ ಸ್ವಾಮಿಗಳು, ನಾಗಠಾಣದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು, ತಡವಲಗಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು,ಹತ್ತಹಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು,ಗೋಳಸಾರದ ಅಭಿನವ ಪುಂಡಲಿಂಗ ಶಿವಯೋಗಿಗಳು,ತಿಂಥಣಿ -ಶಿರಕನಹಳ್ಳಿಯ ಅಡವಿಲಿಂಗ ಮಾಹಾರಾಜರು,ಹೀರೆರೂಗಿ ಸುಗಲಾದೇವಿ ಅಮ್ಮನವರು, ಖ್ಯಾತ ಪುರಾಣಿಕರಾದ ಶಿವಾನಂದ ಶಾಸ್ತ್ರಿಗಳು ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಡಿ ಮತಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ವಹಿಸಿದ್ದರು. ಉದ್ಘಾಟನೆಯನ್ನು ವಿಜಯಪೂರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ ಬಿ ಪಾಟೀಲ ಅವರು ನೆರವೇರಿಸುವರು. ಗ್ರಂಥ ಬಿಡುಗಡೆಯನ್ನು ಮಾಜಿ ಸಚಿವರು ಹಾಗೂ ಹಾಲಿ ವಿಜಯಪೂರ ಲೋಕಸಭಾ ಸದಸ್ಯರಾದ ಶ್ರೀ ರಮೇಶ ಜಿಗಜಿಣಗಿ ಹಾಗೂ ಬಾಗಲಕೋಟೆ ಸಂಸದರಾದ ಪಿ ಸಿ ಗದ್ದಿಗೌಡರ ಅವರು ಬಿಡುಗಡೆ ಮಾಡಲಿದ್ದಾರೆ.ಕವನ ಸಂಕಲನ ಸಂಚಿಕೆ ಬಿಡುಗಡೆ ಚಿತ್ರದುರ್ಗ ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ ಹಾಗೂ ಮಾಜಿ ಸಚಿವರು ಹಾಲಿ ಶಾಸಕರಾದ ಲಕ್ಷ್ಮಣ ಸವದಿ ಅವರು ನೇರವೆರಿಸಲ್ಲಿದ್ದು,ಈ ಕಾರ್ಯಕ್ರಮದಲ್ಲಿ ವಿಜಯಪೂರ ನಗರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕರಾದ ಅಪ್ಪಾಜಿ ನಾಡಗೌಡ, ಅಶೋಕ ಮನಗೂಳಿ,ವಿಠೋಲ ಕಟಕದೊಂಡ,ರಾಜುಗೌಡ ಪಾಟೀಲ, ಮಾಜಿ ಶಾಸಕರಾದ ರಮೇಶ ಬೊಸನೂರ, ಎಸ್ ಕೆ ಬೆಳ್ಳುಬ್ಬಿ, ರಾಜು ಆಲಗೂರ,ಆನಂದ ನ್ಯಾಮಗೌಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುತ್ತಾರೆ ಆದ ಕಾರಣ ಸಮಸ್ತ ಮೇತ್ರಿ ಕಾಕಾ ಅವರ ಹಿತೈಷಿಗಳು, ಅಭಿಮಾನಿಗಳು ಬಂದು ಮಿತ್ರರು ಹಾಗೂ ಸಮಸ್ತ ತಡವಲಗಾ ಗ್ರಾಮದ ಗುರು ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಬಾಬುಸಾಹುಕಾರ ಮೇತ್ರಿ ಅವರು ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಎಸ್ ಎಸ್ ಮಜ್ಜಿಗಿ, ವಿ ಎಚ್ ಬಿರಾದಾರ,ಬಿ ಬಿ ಪಾಟೀಲ, ತಮ್ಮಣ್ಣ ಪೂಜಾರಿ,ಎ ಎಸ್ ಗಾಣಿಗೇರ, ಶಿವಾನಂದ ಪತಂಗಿ ಎಸ್ ಆರ್ ಗಿಡಗಂಟಿ,ಬಿ ಎನ್ ಪಾಟೀಲ,ಬಿ ಸಿ ಬಿರಾದಾರ ಸುಭಾಷ್ ಹಿಟ್ನಳ್ಳಿ ಧರೇಪ್ಪ ತೇಲಿ, ಮುದುಕಪ್ಪ ಮದರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.