ಸಾಗರಮಾಲಾ ಯೋಜನೆ ಕೈಬಿಡಲು ಆಗ್ರಹ
ಕಾರವಾರ: ಇಲ್ಲಿನ ಬೈತಖೋಲ್ ವಾಣಿಜ್ಯ ಬಂದರಿನ ಸಮುದ್ರದಲ್ಲಿ ಸಾಗರಮಾಲಾ ಎರಡನೇ ಹಂತದ ವಿಸ್ತರಣಾ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ, ಜಯ ಕನರ್ಾಟಕ ಸಂಘಟನೆಯ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಪ್ರಿಯಾಂಗ ಅವರಿಗೆ ಮನವಿ ಸಲ್ಲಿಸಿದರು.
ಸೀಬಡರ್್ ಯೋಜನೆಗೆ ಈಗಾಗಲೇ ಬಹುತೇಕ ಕಡಲತೀರಗಳು ಭಾರತೀಯ ನೌಕಾಪಡೆಯ ಪಾಲಾಗಿದೆ. ಇನ್ನು ಸಾಗರಮಾಲಾ ಯೋಜನೆಯ ಅಡಿ ಬಂದರು ವಿಸ್ತರಣೆ ಕಾಮಗಾರಿಯಿಂದ ಇನ್ನುಳಿದ ಕಡಲತೀರವನ್ನೂ ಕಳೆದುಕೊಳ್ಳುವ ಆತಂಕ ಕಾಡುತ್ತಿದೆ.
ಕಾರವಾರ ಬಂದರು ಇಡೀ ದೇಶಕ್ಕೆ ಮಾದರಿಯಾಗಿದೆ. ಪ್ರಕೃತಿ ವಿಕೋಪವಾದರೆ ಎಲ್ಲಾ ರಾಜ್ಯದ ದೋಣಿಯು ಇದೇ ಬಂದರಿನಲ್ಲಿ ಸುರಕ್ಷತೆಯ ದೃಷ್ಟಿಯಲ್ಲಿ ಲಂಗರು ಹಾಕುತ್ತವೆ. ಈ ಯೋಜನೆಯಿಂದ ಮೀನುಗಾರಿಕೆಯನ್ನೇ ಮೂಲ ಕಸುಬನ್ನಾಗಿ ಮಾಡಿಕೊಂಡು, ಅತ್ಯಂತ ಕಷ್ಟದ ಜೀವನ ಸಾಗಿಸುತ್ತಿರುವ ಮೀನುಗಾರರ ಬದುಕು ಅತಂತ್ರವಾಗುವ ಸಂಭವವಿದೆ. ಸಾವಿರಾರು ಕುಟುಂಬಗಳು ಬೀದಿಪಾಲಾಗುವ ಸಾಧ್ಯತೆ ಇದೆ. ಅಭಿವೃದ್ಧಿಯ ಹೆಸರಿನಲ್ಲಿ ಬಡಜನರ ಬದುಕಿನ ಜೊತೆಗೆ ಚೆಲ್ಲಾಡವಾಡುವುದು ಸೂಕ್ತವಲ್ಲ. ಜತೆಗೆ, ಕಾರವಾರದ ಹಾಗೂ ಜಿಲ್ಲೆಯ ಹೃದಯಭಾಗವಾಗಿರುವ ಟ್ಯಾಗೋರ ಕಡಲತೀರದ ಸೌಂದರ್ಯಕ್ಕೆ ಧಕ್ಕೆ ತರುವ ಯಾವುದೇ ಯೋಜನೆಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ದಿಲೀಪ್ ಅಗರ್ೇಕರ್, ಜಿಲ್ಲಾ ಕಾಯರ್ಾಧ್ಯಕ್ಷ ದೇವಿದಾಸ್ ನಾಯ್ಕ, ಜಿಲ್ಲಾ ಮಹಿಳಾಧ್ಯಕ್ಷೆ ದಿವ್ಯಾ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ರೋಶನ್ ಹರಿಕಂತ್ರ, ಜಿಲ್ಲಾ ಉಪಾಧ್ಯಕ್ಷ ಸತೀಶ್ ಅಗರ್ೇಕರ್, ಜಿಲ್ಲಾ ಯುವಾಧ್ಯಕ್ಷ ಸುಭಾಷ್ ಗುನಗಿ, ಜಿಲ್ಲಾ ಕಾರ್ಯದಶರ್ಿ ರಾಜೇಶ ಹರಿಕಂತ್ರ ಹಾಗೂ ಇನ್ನಿತರರು ಇದ್ದರು.