ದೈವಜ್ಞ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚ್ಚಿದಾನಂದ ಜ್ಞಾನೇಶ್ವರ್ ಭಾರತೀ ಶ್ರೀಗಳು
Sachidananda Dnyaneshwar Bharati Shri inaugurated the Divine Vision program
ಗದಗ 17: ಮುದ್ರಣ ನಗರಿ ಎಂದೇ ಖ್ಯಾತವಾಗಿರುವ ಅವಳಿ ನಗರವಾದ ಗದಗ ಬೆಟಗೇರಿಯ ಮುಳಗುಂದ ನಾಕಾದಲ್ಲಿರುವ ವಿಠಲಾರೋಢ ಸಮುದಾಯ ಭವನದಲ್ಲಿ ದೈವಜ್ಞ ಸಮಾಜ್ಯೋನ್ನತಿ ಸಂಘ, ದೈವಜ್ಞ ಮಹಿಳಾ ಮಂಡಳಿ, ದೈವಜ್ಞ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ದೈವಜ್ಞ ಬ್ರಾಹ್ಮಣ ಸುಕ್ಷೇತ್ರ ಕರ್ಕಿ ಜ್ಞಾನೇಶ್ವರಿ ಪೀಠದ ಉಭಯ ಪರಮ ಪೂಜ್ಯ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ತತ್ ಕರಕಮಲ ಸಂಜಾತರಾದ ಪರಮ ಪೂಜ್ಯ ಸುಜ್ಞಾನೇಶ್ವರ ಭಾರತೀ ಸ್ವಾಮಿಜಿಗಳವರು ಜ್ಯೋತಿ ಬೆಳಗಿಸುವ ಮೂಲಕ ದೈವಜ್ಞ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಒಂದು ಅವಿಸ್ಮರಣೀಯ ಧಾರ್ಮಿಕ ಕಾರ್ಯಕ್ರಮವು ದೈವಜ್ಞ ಸಮಾಜ್ಯೋನ್ನತಿ ಸಂಘದ ಅಧ್ಯಕ್ಷರಾದ ಅರವಿಂದ ಗಂಗಾಧರ ಪಾಲನಕರ ದಂಪತಿಗಳಿಂದ ಶ್ರೀಗಳ ಪಾದ ಪೂಜೆಯೊಂದಿಗೆ ಪ್ರಾರಂಭವಾಗಿ, ಸೈಕ್ಷಣಿಕವಾಗಿ ಉನ್ನತ ಸಾಧನೆಗೈದ ಸಮಾಜದ ಪ್ರಭಾನ್ವಿತರಿಗೆ ಪೂಜ್ಯರಿಂದ ಸನ್ಮಾನ, ಹಾಗೂ ಗದಗ ಬೆಟಗೇರಿಯಲ್ಲಿನ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜ ಭಾಂಧವರ ಧಾರ್ಮಿಕ, ಸಾಮಾಜಿಕ, ವೈಧಿಕ ಕಾರ್ಯಕ್ರಮಗಳನ್ನು ಸುಧೀರ್ಘವಾಗಿ ಕಳೆದ 52 ವರ್ಷಗಳಿಂದ ನಿರಂತರವಾಗಿ ಪೂಜಾ ಕೈಂಕರ್ಯಗಳಿಗೆ ನೆರವು ನೀಡಿದ ವೇದ ಮೂರ್ತಿ ಸರ್ವೇಶ್ವರ ಭಟ್ಟ ರವರಿಗೆ ಮತ್ತು ವಿಶೇಷವಾಗಿ ಮಠದ ಉತ್ತರಾಧಿಕಾರಿಗಳಾದ ಪರಮ ಪೂಜ್ಯ ಸುಜ್ಞಾನೇಶ್ವರ ಭಾರತೀ ಸ್ವಾಮಿಜಿಗಳವರ ಕುರಿತು ವಿಶೇಷ ಪರಿಚಯಾತ್ಮಕ ಅವಲೋಕನಯುಕ್ತ ಲೇಖನವನ್ನು ಬರೆದು ನೂತನ ಶ್ರೀಮಠದ ಉತ್ತರಾಧೀಕಾರಿಗಳ ಪರಿಚಯವನ್ನು ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜ ಭಾಂದವರಿಗೆ ಉಣಬಡಿಸಿದ ಧಾರ್ಮಿಕ ಲೇಖಕರು ಹಾಗೂ ಹವ್ಯಾಸಿ ಬರಹಗಾರರಾದ ಸಹನಾ ರಾಘವೇಂದ್ರ ಪಾಲನಕರ ರವರಿಗೆ ಅಮೃತ ಹಸ್ತದಿಂದ ಸನ್ಮಾನಿಸಿ ಗೌರವಿಸಲಾಯಿತು.
ದೈವಜ್ಞ ದರ್ಶನ ಕಾರ್ಯಕ್ರಮದ ಭಾಗವಾಗಿ ಶ್ರೀಮಠ ಹಿರಿಯ ಸಮಾಜ ಭಾಂದವರಿಗಾಗಿತಮ್ಮ ಪ್ರವಚನದಲ್ಲಿ ನಮ್ಮ ಪೂರ್ವಜರಿಂದ ನಮಗೆ ದೊರೆತ ಅವಿಸ್ಮರಣೀಯ ಕೊಡುಗೆಯೇ ದೈವಜ್ಞ ಬ್ರಾಹ್ಮಣತ್ವ ನಾವು ಕೇವಲ ಬ್ರಾಹ್ಮಣರು ಮಾತ್ರವಲ್ಲ ನಾವು ದೈವ-ಯಜ್ಞ ಮಾಡುವ ಮೂಲಕ ನಮ್ಮ ಸಮಾಜಕ್ಕೆ ದೈವಜ್ಞ ಬ್ರಾಹ್ಮಣ ಸಮಾಜ ಎಂದು ಸಂಭೋಧೀಸಲ್ಪಡುವುದರಿಂದ ನಾವು ನಮ್ಮ ಸರ್ವ ಶ್ರೇಷ್ಠ ಸಮುದಾಯದ ಕುರಿತು ಹೆಮ್ಮೆ ಪಡುವ ಸಂಗತಿಯಾಗಿರುತ್ತದೆ ಎಂದು ನುಡಿದರು. ಅದರಂತೆ ಕಿರಿಯ ಶ್ರೀಗಳು ತಮ್ಮ ಹಿತವಚನದಲ್ಲಿ ಸಮಾಜ ಭಾಂದವರು ಅಹಂ, ಹಾಗೂ ಸಂಕುಚಿತ ಮನೋಭಾವನೆಯಿಂದ ದೂರವಾಗಿದ್ದು ತಮ್ಮ ಉದಾರತ್ವವನ್ನು ಮೆರೆಯಬೇಕು ಎಂದು ನುಡಿದರು.
ಆನಂತರ ಸಮಸ್ತ ಸಮಾಜ ಭಾಂದವರಿಗೆ ಉಭಯ ಶ್ರೀಗಳ ದರ್ಶನ ಫಲ ಮಂತ್ರಾಕ್ಷತೆ ವಿತರಿಸಲಾಯಿತು. ಸಮಾಜ ಭಾಂದವರಿಗಾಗಿ ಸಂಘದ ಗೌರವಾಧ್ಯಕ್ಷರಾದ ಗಣಪತಿ ನಾಗೇಶ್ ಪಾಲನಕರ ರವರಿಂದ ಅಲ್ಪೊಪಹಾರ, ಫಲ -ಮಂತ್ರಾಕ್ಷತೆ ಹಣ್ಣು ಹಂಪಲ ಮತ್ತು ಸಮಸ್ತ ಭಕ್ತವೃಂದದವರಿಗೆ ಮಹಾ ಪ್ರಸಾದದ ವ್ಯವಸ್ಥೆಯನ್ನು ರಮೇಶ್ ಅನಂತ ವೆರ್ಣೇಕರ್,ಶ್ರೀ ಸುರೇಶ್ ಜಿ ರೇವಣಕರ್ ಮತ್ತು ಪ್ರಭಾಕರ್ ವಿ ರಾಯ್ಕರ್ ಇವರಿಂದ ಮಾಡಲಾಗಿತ್ತು. ಮಹಾದಾನಿಗಳಿಗೆ ಶ್ರೀಗಳಿಂದ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ದೈವಜ್ಞ ದರ್ಶನ ಕಾರ್ಯಕ್ರಮದ ಅಧ್ಯಕ್ಷರಾದ ಅರುಣ ತುಕಾರಾಮ್ ವೇರ್ಣೇಕರ, ದೈವಜ್ಞ ಸಮಾಜ್ಯೋನ್ನತಿ ಸಂಘದ ಅಧ್ಯಕ್ಷರಾದ ಅರವಿಂದ್ ಗಂಗಾಧರ ಪಾಲನಕರ, ದೈವಜ್ಞ ಮಹಿಳಾ ಮಂಡಳಿಯ ಅಧ್ಯಕ್ಷರಾದ ಪದ್ಮಾ, ವೆಂಕಟೇಶ್ ವೇರ್ಣೇಕರ, ದೈವಜ್ಞ ಯುವಕ ಮಂಡಳಿಯ ಅಧ್ಯಕ್ಷರಾದ ಗಣೇಶ, ರಮೇಶ್ ವೇರ್ಣೇಕರ, ರಾಜು ಡಿ ವೆರ್ಣೇಕರ್, ನರಸಿಂಹ ಏಮ್ ಕುಡತರಕರ್, ಸಂಘದ ಉಪಾಧ್ಯಕ್ಷರಾದ ದೇವರಾಜ್ ಡಿ ದೈವಜ್ಞ ಸಂತೋಷ್ ಎಸ್ ಕುರಡೇಕರ್,ಗೌತಮ್ ಡಿ ರೇವಣಕರ್ ಅರುಣ ಸಿ ರಾಯ್ಕರ್, ಕಾರ್ತಿಕ್ ಆರ್ ಪಾಲನಕರ, ಚೇತನ್ ಜಿ ಪಾಲನಕರ್, ರಾಮಚಂದ್ರ ಎಸ್ ಪಾಲನಕರ ಹಾಗೂ ಸಮಸ್ತ ದೈವಾಜ್ಞ ಬ್ರಾಹ್ಮಣ ಸಮಾಜ ಭಾಂಧವರು ಉಪಸ್ಥಿತರಿದ್ದರು. ದೈವಜ್ಞ ಸಮಾಜ್ಯೋನ್ನತಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ರೇವಣಕರ ರವರು ಪ್ರಾಸ್ತಾವಿಕ ನುಡಿಗೈದರು. ಗಜಾನನ ವೇರ್ಣೇಕರರವರು ದೈವಜ್ಞ ದರ್ಶನ ಕಾರ್ಯಕ್ರಮದ ನಿರೂಪಣೆಗೈದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 