ಎಸ್‌.ಎಂ.ಕೃಷ್ಣ ಆಧುನಿಕ ಕರ್ನಾಟಕ ನಿರ್ಮಾಣದ ಮಹಾಶಿಲ್ಪಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

SM Krishna is the master architect of modern Karnataka construction: Deputy Chief Minister DK Shiva

ಎಸ್‌.ಎಂ.ಕೃಷ್ಣ ಆಧುನಿಕ ಕರ್ನಾಟಕ ನಿರ್ಮಾಣದ  ಮಹಾಶಿಲ್ಪಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್     

ಸುವರ್ಣಸೌಧ ಡಿ.12: ಡಿಸೆಂಬರ್ 10ರಂದು  ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರೊಂದಿಗಿನ ಒಡನಾಟದ ಕುರಿತು ಗುರುವಾರ ಸದನದಲ್ಲಿ ಮಾತನಾಡಿದ  ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್,  ಎಸ್‌.ಎಂ.ಕೃಷ್ಣ ಅವರನ್ನು ಆಧುನಿಕ ಕರ್ನಾಟಕ ನಿರ್ಮಾಣದ ಮಹಾಶಿಲ್ಪಿ ಎಂದು ಬಣ್ಣಿಸಿದರು.  

ನಾನು ರಾಜಕೀಯವಾಗಿ ಗುರುತಿಸಿಕೊಂಡಿದ್ದರು, ಮಾಜಿ ಮುಖ್ಯಮಂತ್ರಿ ಬಂಗಾರ​‍್ಪನವರ ಜೊತೆಗೆ, ಬಂಗಾರ​‍್ಪನವರು ಮುಖ್ಯಮಂತ್ರಿ ಸ್ಥಾನದಿಂದ ರಾಜೀನಾಮೆ ನೀಡಿದ ನಂತರ ನನ್ನನ್ನು ಎಸ್‌.ಎಂ.ಕೃಷ್ಣ ಅವರ ಬಳಿ ಹೋಗುವಂತೆ ಸೂಚಿಸಿದರು. ಅಂದಿನಿಂದ ಎಸ್‌.ಎಂ.ಕೃಷ್ಣ ತಂದೆ ಸ್ಥಾನದಲ್ಲಿ ನಿಂತು ರಾಜಕೀಯವಾಗಿ ನನ್ನ ಬೆಳವಣಿಗೆ ಕಾರಣರಾದರು. ನಂತರ ಸಂದರ್ಭದಲ್ಲಿ ಅವರ ಕುಟುಂಬದೊಂದಿಗೆ ಸಂಬಂಧವು ಬೆಳೆಯಿತು. 

92 ವರ್ಷಗಳ ತುಂಬು ಜೀವನ ಸಾಗಿಸಿ ಎಸ್‌.ಎಂ.ಕೃಷ್ಣ ಅವರು ನಿಧನರಾಗಿದ್ದಾರೆ. ವಿವೇಕಾನಂದರ ವಾಣಿಯಂತೆ, ಸಾಧನೆ ಇಲ್ಲದೆ ಸಾಯುವುದು ಸಾವಿಗೆ ಅವಮಾನ, ಆದರ್ಶ ಇಲ್ಲದೇ ಬದುಕುವುದು ಬದುಕಿಗೆ ಅವಮಾನ. ರಾಜ್ಯದ ಅಭಿವೃದ್ಧಿಗೆ ಎಸ್‌.ಎಂ.ಕೃಷ್ಣ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತಾದ ಬೃಹತ್ ಸಾಕ್ಷಿಗಳು ನಮ್ಮ ಕಣ್ಮುಂದಿದೆ. 

ದೇಶಕ್ಕೆ ಮಾದರಿಯಾದ ಐಟಿ ನೀತಿ, ಗ್ರಾಮ ಪಂಚಾಯಿತಿಗಳ ಅನುದಾನವನ್ನು ರೂ.1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ, ಜಿಲ್ಲಾ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಬೇಲೂರು ಘೋಷಣೆ, ರೈತರಿಗೆ ಶ್ರೀಗಂಧ ಬೆಳೆಯಲು ಅವಕಾಶ, ಕರ್ನಾಟಕ ರಾಜ್ಯ ಪಾನೀಯ ನಿಗಮ ಸ್ಥಾಪನೆ, ಮಧ್ಯಾಹ್ನದ ಬಿಸಿಯೂಟ, ಬೆಂಗಳೂರು ಮೆಟ್ರೋ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಸೇರಿದಂತೆ ಹಲವು ಮಹತ್ತರ ಸಾಧನೆಗಳಿಗೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕಾರಣೀಕರ್ತರಾಗಿದ್ದಾರೆ. ಶಿಕ್ಷಣ ಸುಸಂಸ್ಕೃತ ಬದುಕಿಗೆ ನಾಂದಿಯಾಗುತ್ತದೆ ಎಂದು ನಂಬಿದ್ದರು ಅವರು, ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಣೆ ಮುಂದಾದರು. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರಂತೆ, ವಿಕಾಸ ಹಾಗೂ ಉದ್ಯೋಗ ಸೌಧಗಳನ್ನು ಸಹ ನಿರ್ಮಿಸಿದರು ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಹೇಳಿದರು.