ಎಸ್ಎಫ್ಐ ಧ್ವಜಾರೋಹಣ ಕಾರ್ಯಕ್ರಮ
ಹಾವೇರಿ 30: ಭಾರತ ವಿದ್ಯಾಥರ್ಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿಯು ಎಸ್ಎಫ್ಐ 49ನೇ ವಷರ್ಾಚರಣೆ ಪ್ರಯುಕ್ತ ದೇಶಾದ್ಯಂತ ಸಹಮ್ಮಿಕೊಂಡಿದ್ದ ಎಸ್ಎಫ್ಐ ಧ್ವಜಾರೋಹಣ ಕಾರ್ಯಕ್ರಮದ ಭಾಗವಾಗಿ ಇಂದು ಶಿವಾಜಿ ನಗರದ ಎಸ್ಎಫ್ಐ ಕಚೇರಿಯ ಮುಂದೆ ಶ್ವೇತ ಪತಾಕೆಯ ಧ್ವಜಾ ರೋಹಣ ಕಾರ್ಯಕ್ರಮವನ್ನು ನಡೆಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದಶರ್ಿ ಮಾತನಾಡಿ, ದೇಶದ ವಿದ್ಯಾಥರ್ಿ ಚಳುವಳಿಯು ಸ್ವಾತಂತ್ರ್ಯ ಆಂದೋಲನದ ಭಾಗವಾಗಿ ಬಂದಿರುವಂತಹದ್ದು. ಸ್ವತಂತ್ರ ಸಂಪೂರ್ಣ ಸ್ವಾತಂತ್ರ್ಯದ ಆಶಯವನ್ನು ಹೊಂದಿದ್ದ ಭಗತ್ಸಿಂಗ್ರವರ ಆಶಯಗಳನ್ನು ಮುಂದಕ್ಕೊಯ್ಯುವ ಜವಾಬ್ದಾರಿಯನ್ನು ಇಂದಿನ ವಿದ್ಯಾಥರ್ಿ ಚಳುವಳಿ ಮಾಡಬೇಕಿದೆ. 1970ರಲ್ಲಿ ಕೇರಳದ ತಿರುವನಂತಪುರದಲ್ಲಿ ಎಸ್ಎಫ್ಐನ ಮೊದಲ ಅಖಿಲ ಭಾರತ ಸಮ್ಮೇಳನ ನಡೆದು ದೇಶದ ವಿದ್ಯಾಥರ್ಿಗಳ ಮಧ್ಯ ಬಲಿಷ್ಠ ಚಳುವಳಿಯನ್ನು ಕಟ್ಟುವ, ಸರ್ವರಿಗೂ ಶಿಕ್ಷಣ-ಸರ್ವರಿಗೂ ಉದ್ಯೋಗ ಹಾಗೂ ವಿದ್ಯಾಥರ್ಿ-ಯುವಜನ ಚಳುವಳಿಯಯನ್ನು ದೇಶದಲ್ಲಿ ಬಲಿಷ್ಠಗೊಳಿಸುವ ನಿರ್ಣಯದೊಂದಿಗೆ ಅಂದು ನಡೆಸಿದ ಸಮ್ಮೇಳನ ಇಂದು ದೇಶಾದ್ಯಂತ ಕೋಟ್ಯಾಂತರ ವಿದ್ಯಾಥರ್ಿಗಳ ನಡುವೆ ಎಸ್ಎಫ್ಐ ಬಲಿಷ್ಠವಾಗಿದೆ ಎಂದರು. ಶಿಕ್ಷಣದ ಉಳಿವಿಗಾಗಿ, ಸಂವಿಧಾನದ ರಕ್ಷಣೆಗಾಗಿ ಸಂಘಷರ್ಾತ್ಮಕ ಹೋರಾಟಗಲ ಮೂಲಕ ಚಳುವಳಿ ನಡೆಸುತ್ತಾ ವಿದ್ಯಾಥರ್ಿಗಳ ಆಶಾಕಿರಣವಾಗಿ ಬೆಳೆಯುತ್ತಿದೆ. ಶಿಕ್ಷಣದ ವ್ಯಾಪಾರೀಕರಣ, ಕೋಮುವಾದೀಕರಣ, ವಿದೇಶಿ ವಿವಿ, ಖಾಸಗಿ ವಿವಿಗಳ ಸ್ಥಾಪನೆಯ ವಿರುದ್ದ, ಸಕರ್ಾರಿ ಶಾಲಾ-ಕಾಲೇಜು, ಹಾಸ್ಟೆಲ್ಗಳನ್ನು ಬಲಪಡಿಸಲು ಹಾಗೂ ಸಕರ್ಾರಿ ಶಾಲೆಗಳನ್ನು ಮುಚ್ಚುವುದರ ವಿರುದ್ದ ನಿರಂತರ ಹೋರಾಟಗಳನ್ನು ಎಸ್ಎಫ್ಐ ನಡೆಸುತ್ತಿದೆ. ದೇಶಾದ್ಯಂತ ನಡೆಯುವ ರೈತರ, ಕೂಲಿ-ಕಾಮರ್ಿಕರ, ಶೋಷಣೆಯ ವಿರುದ್ಧದ ಹೋರಾಟಗಳಿಗೆ ಎಸ್ಎಫ್ಐ ನಿರಂತರವಾಗಿ ಬೆಂಬಲ ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಮೋಹನ ಆರ್ಬಿ, ಹನುಮಂತಗೌಡ, ಕೃಷ್ಣ, ಅರುಣ, ಪ್ರಸನ್ನ ಹಾಗೂ ಮುಖಂಡರು ಇತರರು ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 