ಎಸಡಿಪಿಐ ಮುಖಂಡ ಹುಜೂರ್ ಅಹಮದ್ ರಿಂದ ವಕ್ಫ್‌ ಆಸ್ತಿ ಅಕ್ರಮ, ಕಬಳಿಕೆ : ಯಾಖೂಬ್ ಹುಸೇನಿ ಆರೋಪ

SADPI leader Huzur Ahmed's illegal acquisition of Waqf property: Yakub Hussaini alleges

ಎಸಡಿಪಿಐ ಮುಖಂಡ ಹುಜೂರ್ ಅಹಮದ್ ರಿಂದ ವಕ್ಫ್‌ ಆಸ್ತಿ ಅಕ್ರಮ, ಕಬಳಿಕೆ : ಯಾಖೂಬ್ ಹುಸೇನಿ ಆರೋಪ

ಕೊಪ್ಪಳ 2 : ಕೊಪ್ಪಳ ಜಿಲ್ಲಾ ಎಸ್‌.ಡಿ.ಪಿ.ಐ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಮುಖಂಡ ಹುಜೂರ್ ಅಹ್ಮದ್ ನಾಯ್ಕ ರವರು ಕೊಪ್ಪಳ ನಗರದ ಜವಾಹರ್ ರಸ್ತೆ ಮತ್ತು ಹಸನ್ ರಸ್ತೆಯ ಕೂಡು ರಸ್ತೆಗೆ ಹೊಂದಿಕೊಂಡ (ಹಜರತ್ ರಾಜಾಬಾಗ್ಸವಾರ್ ದರ್ಗಾ ಹಿಂದುಗಡೆ) ವಕ್ಸ್‌ ನೊಂದಾಯಿತ ಸರಕಾರಿ ಮತ್ತು ಮರ್ದಾನ್ ಆಲಿ ಸಂಸ್ಥೆಯ ಒಡೆತನದ 13 ಕೋಟಿ ಬೆಲೆಬಾಳುವ ವಾಣಿಜ್ಯ ಸ್ಥಿರಾಸ್ತಿ ಮತ್ತು 1 ಕೋಟಿ ಬೆಲೆಬಾಳುವ ವಸತಿ ಆಸ್ತಿಯನ್ನು ಅಕ್ರಮವಾಗಿ, ಕಾನೂನು ಬಾಹಿರವಾಗಿ ತಮ್ಮ ಮತ್ತು ತಮ್ಮ ಕುಟುಂಬದ ಒಟ್ಟು 7 ಜನ ಸದಸ್ಯರ ಹೆಸರಿನಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಂಡು ಮೆರೆಯುತ್ತಿದ್ದು ಮತ್ತು ಕೊಪ್ಪಳ ಜಿಲ್ಲೆಯ ವಕ್ಸ್‌ ಆಸ್ತಿಯ ಹಗರಣಗಳ ಬಗ್ಗೆ ಎಸ್‌.ಡಿ.ಪಿ.ಐ ಪಕ್ಷದ ವತಿಯಿಂದ ಹೋರಾಟ ಮಾಡುತ್ತಿರುವುದು ಹಾಸ್ಯಾಸ್ಪದ ಮತ್ತು ಸಂಶಯಾಸ್ಪದವಾಗಿದೆ ಎಂದು ಪ್ರಗತಿಪರ ಹೋರಾಟಗಾರರಾದ ಸೈಯ್ಯದ್ ಯಾಖೂಬ್ ಹುಸೇನಿಯವರು ಆರೋಪಿಸಿದರು.  ರವಿವಾರದಂದು ನಗರದ ಪತ್ರಿಕಾ ಭವನ ದಲ್ಲಿ ಏರಿ​‍್ಡಸಿದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ದಾಖಲೆ ತೋರಿಸಿ ನೇರ ಆರೋಪ ಮಾಡಿ ವಿವರಣೆ ಪ್ರಕಟಿಸಿದರು ,ಸದರಿ ವಕ್ಸ್‌ ಆಸ್ತಿಯ ಸ್ಥಿರಾಸ್ತಿಯ ಅಕ್ರಮ ಖಾತಾ ವರ್ಗಾವಣೆಯನ್ನು ರದ್ದುಗೊಳಿಸಿ. ಮರ್ದಾನ್ ಅಲಿ ಮಸೀದಿ ಹೆಸರಿನಲ್ಲಿ ಪುನಃ ಖಾತೆ ಮಾಡಲು ಕಳೆದ ಬಾರಿ  ಅಂದಿನ  ಜಿಲ್ಲಾಧಿಕಾರಿಗಳು ಕೊಪ್ಪಳ ರವರು ಲಿಖಿತವಾಗಿ  ಪೌರಾಯುಕ್ತರು ನಗರಸಭೆ ಕೊಪ್ಪಳ ಮತ್ತು  ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರುರವರಿಗೆ ದಾಖಲೆ ಸಮೇತ ನಿರ್ದೇಶಿಸಿ ತಕ್ಷಣ ತಮ್ಮ ಆದೇಶವನ್ನು ಜಾರಿಗೊಳಿಸಲು ಸೂಚನೆ ನೀಡಿದ್ದರೂ ಸಹ ಸೂಮಾರು 19 ವರ್ಷ ಗತಿಸಿದರೂ ನಗರ ಸಭೆ ಕೊಪ್ಪಳರವರು  ಜಿಲ್ಲಾಧಿಕಾರಿ ಕೊಪ್ಪಳರವರ ಆದೇಶವನ್ನು ಜಾರಿಗೊಳಿಸದೇ ಇರುವುದು ನಗರಸಭೆಯ ಕಾರ್ಯವೈಖರಿಗೆ ಅತೀವ ಬೇಸರವಾಗಿದೆ. ಎಂದು ಟೀಕಿಸಿದರು,ಇತ್ತೀಚಿಗೆ ನಾನು ಸಲ್ಲಿಸಿರುವ ದೂರಿನನ್ವಯ ಕೊಪ್ಪಳ ಜಿಲ್ಲಾ ವಕ್ಸ್‌ ಅಧಿಕಾರಿಗಳು ಕಳೆದ ವರ್ಷ ಅಕ್ಟೋಬರ್ ತಿಂಗಳ ದಲ್ಲಿ  ಪುನಃ ಪೌರಾಯುಕ್ತರು ನಗರಸಭೆ ಕೊಪ್ಪಳರವರಿಗೆ ದಾಖಲೆ ಸಮೇತ ಎಲ್ಲಾ ಆಸ್ತಿಯ ಅಕ್ರಮ ಖಾತಾ ವರ್ಗಾವಣೆಯನ್ನು ರದ್ದುಗೊಳಿಸಿ ವಕ್ಸ್‌ ಆಸ್ತಿಯಾಗಿರುವ ಮರ್ದಾನ ಅಲಿ ಮಸೀದಿ ಹೆಸರಿನಲ್ಲಿ ಪುನಃ ಖಾತೆ ಮಾಡಲು ಹಾಗೂ ಸದರಿ ವಕ್ಸ್‌ ಪ್ರದೇಶ ಪರಿಸರಲ್ಲಿರುವ ಅನಧಿಕೃತವಾಗಿ ವಕ್ಸ್‌ ಸ್ಥಿರಾಸ್ತಿಯಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ವಾಣಿಜ್ಯ ವ್ಯವಹಾರಗಳಿಗಾಗಿ ಪಡೆದಿರುವ ಆನಧಿಕೃತ ವಿದ್ಯುತ್ ಸಂಪರ್ಕಗಳನ್ನು ನಿಲುಗಡೆ/ಕಡಿತಗೊಳಿಸಲು ಆದೇಶ ಮಾಡಿರುತ್ತಾರೆ ಎಂದು ವಿವರಣೆ ನೀಡಿದರುಸದರಿ ವಿಷಯವಾಗಿ ಇಲ್ಲಿನ ಜೆಸ್ಕಾಂ ಇಲಾಖೆಯು ವಕ್ಸ್‌ ಅಧಿಕಾರಿಗಳ ಆದೇಶದನ್ವಯ ಸದರಿ ಪ್ರದೇಶದ ಎಲ್ಲಾ ಅಕ್ರಮ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಲು ನಿಯಮಾನುಸಾರ ಕಳೆದ ವರ್ಷ ಸ್ಥಳಕ್ಕೆ ಹೋದಾಗ ಮತ್ತು ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯು ಸಹ ಉಪಸ್ಥಿತರಿದ್ದರೂ ಎಸ್‌.ಡಿ.ಪಿ.ಐ ಮುಖಂಡರಾದ ಹೂಜೂರ್ ಅಹ್ಮದ್ ಮತ್ತು ಅವರ ಕುಟುಂಬದ ಇತರೆ 6 ಜನ ಸದಸ್ಯರು ಗುಂಡಾಗಿರಿ ಮಾಡಿ ವಿದ್ಯುತ್ ಸಂಪರ್ಕಗಳನ್ನು ನಿಲುಗಡೆಗೊಳಿಸುವ ಸರಕಾರಿ ಕಾರ್ಯಚರಣೆಯನ್ನು ವಿಫಲಗೊಳಿಸಿದ್ದು ನಂತರ ಈ ವಿಷಯವಾಗಿ ಜೆಸ್ಕಾಂ ಇಲಾಖೆಯ ಶಾಖಾಧಿಕಾರಿ ಘಟಕ-01, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕಾರ್ಯ ಮತ್ತು ಪಾಲನೆ ಉಪ-ವಿಭಾಗ ಕೊಪ್ಪಳರವರು  ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಿಗೆ ಲಿಖಿತ ವರದಿಯನ್ನು ಸಲ್ಲಿಸಿ. ಈ ಒಂದು ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕದೇ ಕೈ ಚೆಲ್ಲಿ ಸುಮ್ಮನೆ ಕುಳಿತಿರುವುದು ಕಾನೂನು ಬಾಹಿರವಾಗಿದೆ.ಸದರಿ ವಕ್ಸ್‌ ಸ್ಥಿರಾಸ್ತಿಯ ಅಕ್ರಮ ಖಾತಾ ವರ್ಗಾವಣೆಯು 1980 ರ ವರ್ಷದಲ್ಲಿ ನಡೆದಿದ್ದು, ಈ ಸಂಸ್ಥೆಗೆ ವಕ್ಸ್‌ ಮಂಡಳಿಯಿಂದ ಮುತವಲ್ಲಿಯಾಗಿ ನೇಮಕವಾಗಿದ್ದ  ದಿ, ನೂರ್ ಆಹ್ಮದ್ ತಂದೆ/ಮಹ್ಮದ್ ಮರ್ದಾನ್ ಅಲಿಸಾಬ ಪೆಷ ಇಮಾಮ್ ಬಹಾರ​‍್ೇಟ್ ಓಣಿ ಕೊಪ್ಪಳರವರನ್ನು ಅಂದಿನ ವಕ್ಸ್‌ ಇಲಾಖೆ 1954 ರಲ್ಲಿ ಮುತವಲ್ಲಿಯನ್ನಾಗಿ ನೇಮಿಸಿ ಇವರ ಹೆಸರಲ್ಲಿ ವಕ್ಸ್‌ ಗೆಜೆಟ್ನಲ್ಲಿ ನಮೂದಿಸಿದ್ದು. ಇವರ ನಿಧನದ ನಂತರ ಅವರ ಮರಣ ಸಮರ್ಥನಾ ಪತ್ರದ ಮೇರೆಗೆ ಸದರಿ ವಕ್ಸ್‌ ಆಸ್ತಿಯನ್ನು ಹುಜೂರ್ ಅಹ್ಮದ್ರವರ ತಂದೆ ಮತ್ತು ಅವರ ಸಹೋದರರು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಅಂದಿನ ಪುರಸಭೆ ಕೊಪ್ಪಳ ಕಛೇರಿಯ ಅಧಿಕಾರಿಗಳಿಗೆ ಯಾಮಾರಿಸಿ ಅಕ್ರಮವಾಗಿ ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಖಾತಾ ವರ್ಗಾವಣೆ ಮಾಡಿಸಿಕೊಂಡಿದ್ದು, ಅದರಂತೆ ವಕ್ಸ್‌ ಇಲಾಖೆಯ ಕಾಯಿದೆ ಪ್ರಕಾರ ಒಮ್ಮೆ ಆಸ್ತಿ ವಕ್ಸ್‌ ಇಲಾಖೆಗೆ ನೊಂದಣಿಯಾದ ಮೇಲೆ ಪರಭಾರೆ ಖಾತೆ ಮಾಡಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ.ಅಕ್ರಮ ಆಸ್ತಿಯ ವಿವರಗಳುಪ್ಲಾಟ್ ನಂಬರ್‌-1220 ಇದು ಮರ್ದಾನ್ ಅಲಿ ಖಬರಸ್ತಾನ್ ಹೆಸರಿನಲ್ಲಿರುವ 26.955 ಚದರ ಅಡಿಯ ವಾಣಿಜ್ಯ ನಿವೇಶನ ಆಗಿದ್ದು, ಇಲ್ಲಿ ಹುಜೂರ್ ಅಹ್ಮದ್ ನಾಯ್ಕ್‌ ರವರು ಬೃಹತ್ ವಾಣಿಜ್ಯ ಮಳಿಗೆ ಸಂಕೀರ್ಣವನ್ನು ನಿರ್ಮಿಸಿಕೊಂಡು ಮಾಸಿಕವಾಗಿ ರೂ. 50,000/- ಬಾಡಿಗೆ ಪಡೆದಿದ್ದಾರೆ. ಮತ್ತು ಅವರ ಕುಟುಂಬದ 6 ಜನ ಸದಸ್ಯರು ವಾಣಿಜ್ಯ ಶೆಡ್ ಗಳನ್ನು ನಿರ್ಮಿಸಿಕೊಂಡು ಮಾಸಿಕವಾಗಿ ಸುಮಾರು 1 ಲಕ್ಷ ಬಾಡಿಗೆಯನ್ನು ಪಡೆಯುತ್ತಿದ್ದಾರೆ. ನಿಯಮಾನುಸಾರ ಈ ಆದಾಯ ವಕ್ಸ್‌ ಸಂಸ್ಥೆಗೆ ಸೇರಬೇಕಾದ ಆದಾಯ ದಿ, ಮುತವಲ್ಲಿಯವರ ಕುಟುಂಬಸ್ಥರು ತಮ್ಮ ಸ್ವಂತ ಆಸ್ತಿಯಂತೆ ಬಾಡಿಗೆ ಪಡೆಯುತ್ತಿದ್ದಾರೆ.ಮುಂದುವರೆದು ಪ್ಲಾಟ್ ನಂಬರ್‌: 1237, 1238, 1239, 1236, 1246 ಇವುಗಳು ವಸತಿ ಮನೆಗಳಿದ್ದು, ಇದರಲ್ಲಿ ಹುಜೂರ್ ಅಹ್ಮದ್ ನಾಯ್ಕ ಸೇರಿ ಅವರ ಕುಟುಂಬದ ಎಲ್ಲಾ ಸದಸ್ಯರು ರಾಜಾರೋಷವಾಗಿ ಈ ವಕ್ಸ್‌ ಸ್ಥಿರಾಸ್ತಿಯಲ್ಲಿ ಯಾರಿಗೂ ಬಾಡಿಗೆ, ತೆರಿಗೆ ಪಾವತಿಸದೇ ಮಜಾ ಉಡಾಯಿಸುತ್ತಿದ್ದಾರೆ.ಕೊಪ್ಪಳ ನಗರದ ಮಧ್ಯೆ ಭಾಗದಲ್ಲಿರುವ 14 ಕೋಟಿ ಬೆಲೆಬಾಳುವ ವಕ್ಸ್‌ ಸ್ಥಿರಾಸ್ತಿಯನ್ನು ವಕ್ಸ್‌ ಇಲಾಖೆಯ ಸುಪರ್ದಿಗೆ ವಾಪಸ್ ಪಡೆಯುವವರೆಗೆ ಮುಂದಿನ ದಿನಗಳಲ್ಲಿ ಅನೇಕ ಪ್ರಗತಿಪರಹೋರಾಟಗಾರರೊಂದಿಗೆ ಉಗ್ರಹೋರಾಟಮಾಡಲಾಗುವುದೆಂದು ಪತ್ರಿಕಾಗೋಷ್ಠಿಯಲ್ಲಿ ಸೈಯ್ಯದ್ ಯಾಖೂಬ್ ಹುಸೇನಿಯವರು ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಹೋರಾಟಗಾರರಾದ ಎಂಡಿ ಯೂಸುಫ್ ಖಾನ್, ಸೈಯದ್ ಹಬೀಬ್ ಹುಸೇನಿ ಮತ್ತು ಕಾಶಿಮ ಅಲಿ ಉಪಸ್ಥಿತರಿದ್ದರು