ಎಸ್.ಪಾಟೀಲ ಪುತ್ರ ಕಾಂಗ್ರೆಸ್ ಸೇರ್ಪಡೆ

ಎಸ್.ಪಾಟೀಲ  ಪುತ್ರ ಕಾಂಗ್ರೆಸ್  ಸೇರ್ಪಡೆ

ಮುಂಡಗೋಡ ೨೦: ವಾಯುವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷವಿ.ಎಸ್.ಪಾಟೀಲ ಅವರ ಪುತ್ರ ಬಾಪುಗೌಡ ಪಾಟೀಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಮಂಗಳವಾರ ಘೋಷಿಸಿದರು.

ಕಾಂಗ್ರೆಸ್ಅಭ್ಯಥರ್ಿ ಭೀಮಣ್ಣ ನಾಯ್ಕಅವರ ಸಮ್ಮುಖದಲ್ಲಿನಡೆದಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನವಂಬರ್ 22ರಂದುಮಾಜಿ ಸಚಿವಆರ್.ವಿ.ದೇಶಪಾಂಡೆ ಸಮ್ಮುಖದಲ್ಲಿಅಪಾರ ಬೆಂಬಲಿಗರೊಂದಿಗೆಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ. ಈ ನಿಧರ್ಾರದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲಎಂದರು.

ಕಾಂಗ್ರೆಸ್ ಪಕ್ಷಕ್ಕೆತಾನು ಸೇರ್ಪಡೆಯಾಗುವುದರಿಂದತನ್ನತಂದೆಗೆ ಮುಜುಗುರ ಆಗುವುದಿಲ್ಲ. ಏಕೆಂದರೆ ಬಿಜೆಪಿಯಿಂದ ವಿ.ಎಸ್.ಪಾಟೀಲ ಸ್ಪಧರ್ಿಸಿಲ್ಲ. ಅವರೂಅಭ್ಯಥರ್ಿಯೂಅಲ್ಲ. ತನ್ನ ನಿಧರ್ಾ ವೈಯಕ್ತಿಕವಾದದುಎಂದರು.

ಇಷ್ಟು ದಿನ ತಾನುಯಾವುದೇ ಪಕ್ಷದಸದಸ್ಯತ್ವ ಪಡೆದಿಲ್ಲ. ಇಲ್ಲಿಯವರೆಗೆಎಲ್ಲ ವರ್ಗದಜನರೊಂದಿಗೆ ಸಾಮಾಜಿಕ ಸೇವೆಯ ಮೂಲಕ ಗುರುತಿಸಿಕೊಂಡಿದ್ದೇನೆ. ಬಿಜೆಪಿಯು ಸಹ ಯಾವುದೇ ಹುದ್ದೆಯನ್ನುತನಗೆ ನೀಡಿಲ್ಲಎಂದರು.

ಜಿಲ್ಲಾಕಾಂಗ್ರೆಸ್ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಯುವಮುಖಂಡ ಬಾಪುಗೌಡಅವರನ್ನು ಪಕ್ಷಕ್ಕೆ ಹಾದರ್ಿಕವಾಗಿ ಸ್ವಾಗತಿಸುತ್ತೇನೆ. ಮುಂದಿನ ದಿನಗಳಲ್ಲಿ ಅವರಿಗೆ ಹೈಕಮಾಂಡ್ಜೊತೆ ಚಚರ್ಿಸಿ ಸೂಕ್ತ ಸ್ಥಾನಮಾನ ನೀಡುವುದಾಗಿ ಹೇಳಿದರು.

ಬ್ಲಾಕ್ಕಾಂಗ್ರೆಸ್ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ದಾಂತ ಮೆಚ್ಚಿ ಪಕ್ಷಕ್ಕೆ ಬಂದಿದ್ದಕ್ಕೆ ಸ್ವಾಗತಿಸುತ್ತೇವೆ. ಅವರಿಂದಕಾಂಗ್ರೆಸ್ ಪಕ್ಷಕ್ಕೆದೊಡ್ಡ ಶಕ್ತಿ ಬಂದಂತಾಗಿದೆಎಂದರು.

 ಮುಖಂಡರಾದ ಎಚ್.ಎಂ.ನಾಯ್ಕ, ಪಿ.ಜಿ.ತಂಗಚ್ಚನ್, ಧರ್ಮರಾಜ ನಡಗೇರಿ, ರಾಜು ಭೋವಿ, ಪ.ಪಂ.ಸದಸ್ಯರಾದ ವಿಶ್ವನಾಥ ಪವಾಡಶೆಟ್ಟರ್, ಮಹ್ಮದಜಾಫರ ಹಂಡಿ, ಮಹ್ಮದಗೌಸ್ ಮಕಾನದಾರ,  ಉಪಸ್ಥಿತರಿದ್ದರು.