ರಶ್ಶನ್ ಫೆಡರೇಶನ್ ನೇವಿ ಡ್ಯೆಪುಟಿ ಕಮಾಂಡರ್ ಇನ್ ಛೀಫ್ ವಿಕ್ಟರ್ ಕಾರವಾರ ನೇವಿಗೆ ಭೇಟಿ
ಕಾರವಾರ 20: ರಷ್ಯಾದ ಫೆಡರೇಶನ್ ನೇವಿ ಡ್ಯೆಪುಟಿ ಕಮಾಂಡರ್ ಇನ್ ಚೀಫ್ ವೈಸ್ ಅಡ್ಮಿರಲ್ ವಿಕ್ಟರ್ ಸೋಕಲೋವ್ ರಶ್ಯಾ ರಕ್ಷಣಾ ಸಹಕಾರ ಯೋಜನೆ -2019ರ ಅಂಗವಾಗಿ ಕಾರವಾರ ನೌಕಾನೆಕೆಗೆ ಮಂಗಳವಾರ ಭೇಟಿ ನೀಡಿದ್ದರು.
ಕಾರವಾರ ನೌಕಾನೆಲೆ ಸೌಹಾರ್ದಯುತ ಭೇಟಿ ನೀಡಿದ ವಿಕ್ಟರ್ ಸೋಕಲೋವ್ ಉತ್ತರ ಫ್ಲೀಟ್ ರಶ್ಯಾ ಒಕ್ಕೂಟದ ನೌಕಾಪಡೆಯ ನಾಲ್ವರ ಕಮಾಂಡರ್ಗಳನ್ನು, ರಶ್ಯಾದ ಡೆಪ್ಯೂಟಿ ಕಮಾಂಡ ಇನ್ ಚೀಫ್ನ್ನು ಕನರ್ಾಟಕ ನೌಕಾಪ್ರದೇಶದ ಕಮಾಂಡಿಂಗ್ ಫ್ಲಾಗ್ ಆಫೀಸರ್ ರಿಯರ್ ಆಡ್ಮಿರಲ್ ಮಹೇಶ್ ಸಿಂಗ್ ಅವರು ಸ್ವಾಗತಿಸಿದರು. ನಂತರ ಪ್ರಾಜೆಕ್ಟ ಸೀಬರ್ಡ ಸೇರಿದಂತೆ ಕನರ್ಾಟಕ ನೌಕಾ ಪ್ರದೇಶದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಅಲ್ಲದೇ ಶಿಫ್ಟ್ ಲಿಫ್ಟ್ ಸೌಲಭ್ಯ ವಿವರಿಸಿದರು. ಇದನ್ನು ಕಂಡು ರಶ್ಯಾದ ನೌಕಾ ಅಧಿಕಾರಿಗಳು ಸಂತೋಷ ಪಟ್ಟರು. ಅಲ್ಲದೇ ಸೀಬರ್ಡ ಯೋಜನೆಯ ಎರಡನೇ ಹಂತದ ಸೌಲಭ್ಯಗಳನ್ನು ವಿವರಿಸಿದರು.
ಸೋಕಲೋವ್ ಅವರು ರಶ್ಯ ನೌಕಾಪಡೆಯ ಫೆಸಿಫಿಕ್ ಫ್ಲೀಟ್ನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದು, ಕೋಲ್ಸಿಕ ಪ್ಲೋಟಿಲ್ಲಾದ ಕಮಾಂಡರ್ ಇನ್ ಚೀಫ್ ಆಗಿ ಸಹ ಸೇವೆ ಸಲ್ಲಿಸಿದ್ದಾರೆ. ರಶ್ಯಾಕ್ಕೆ ಹಿಂದಿರುಗುವ ಮೊದಲು ರಶ್ಯಾದ ನಿಯೋಗವು ನವದೆಹಲಿಯಲ್ಲಿ ನಡೆಯುವ ವಿವಿಧ ಸಭೆಗಳಲ್ಲಿ ಭಾಗವಹಿಸಲಿದ್ದಾರೆಂದು ಕಾರವಾರ ನೌಕಾನೆಲೆಯ ಸಾರ್ವಜನಿಕ ಸಂಪಕರ್ಾಧಿಕಾರಿ ಅಜಯ್ ಕಪೂರ್ ತಿಳಿಸಿದ್ದಾರೆ.