ಲೋಕದರ್ಶನ ವರದಿ
ಕೊಪ್ಪಳ 30: ನಗರದ ವಿವಿಧ ವಾರ್ಡಗಳಲ್ಲಿ ಎಸ್.ಎಫ್.ಸಿ ಯೋಜನೆ ಅನುದಾನದ ಅಡಿಯಲ್ಲಿ ಅಂದಾಜು ಮೊತ್ತ ರೂ.3 ಕೋಟಿ 60 ಲಕ್ಷದ ಸಿಸಿ ರಸ್ತೆ, ಚರಂಡಿ, ಅಂಗನವಾಡಿ ಕಟ್ಟಡದ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿದರು.
ದೂಳನ್ನು ಆವರಿಸಿದ ಕೊಪ್ಪಳ ನಗರವನ್ನು ದೂಳು ಮುಕ್ತಮಾಡಿ ನಗರದ ಮುಖ್ಯ ರಸ್ತೆಗಳ ಅಭಿವೃದ್ಧಿ ಜೋತೆಗೆ ಎಲ್ಲಾ 31 ವಾರ್ಡಗಳಲ್ಲಿಯೂ ಗುಣಮಟ್ಟದ ಸಿಸಿ ರಸ್ತೆಗಳ ನಿರ್ಮಾಣ ಕಾಮಗಾರಿ ಕೈಗೊಂಡು ನಗರದ ಸೌಂದರ್ಯಕರಣಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ದಿನದಿಂದ ದಿನ ತೀರ್ವಘತಿಯಲ್ಲಿ ಬೆಳೆಯುತ್ತಿರುವ ಕೊಪ್ಪಳ ನಗರಕ್ಕೆ 24*7 ಕುಡಿಯುವ ನೀರಿನ ಯೋಜನೆ ಪೈಪಲೈನ ಕಾಮಗಾರಿ ಬರದಿಂದ ಸಾಗಿದ್ದು, ನಗರದ ಜನತೆಗೆ ಶೀಘ್ರವೇ 24 ಘಂಟೆ ನೀರು ಲಭ್ಯವಾಗಲಿದೆ. 130 ಕೋಟಿ ವೆಚ್ಚದ ಅಡಿಯಲ್ಲಿ ನಗರಕ್ಕೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿಮರ್ಾಣ ಕಾಮಗಾರಿಯು ಬರದಿಂದ ಸಾಗಿದ್ದು, ಕ್ಷೇತ್ರದ ಜನತೆಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯ ಲಭ್ಯವಾಗಲಿದ್ದು, ನಗರದಲ್ಲಿ ಸ್ನಾತಕೋತ್ತರ ಪದವಿ ಕೇಂದ್ರ ಆರಂಭಿಸಿದ್ದು, ಶಿಕ್ಷಣ, ಆರೋಗ್ಯ, ನೀರಾವರಿ, ಕ್ಷೇತ್ರಗಳಲ್ಲಿ ಈ 6 ವರ್ಷ ಅವಧಿಯಲ್ಲಿ ಗಣನೀಯ ಸಾಧನೆ ಮಾಡಿದ್ದು, ಈ 20 ವರ್ಷಗಳ ಅವಧಿಯಲ್ಲಿ ಕೊಪ್ಪಳ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಹೇಳಿದರು.
ಜಿ.ಪಂ. ಮಾಜಿ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ಮಾಜಿ ಎ.ಪಿ.ಎಮ್.ಸಿ.ಅಧ್ಯಕ್ಷ ವೆಂಕನಗೌಡ್ರು ಹಿರೇಗೌಡ್ರು, ನಗರಸಭಾ ಸದಸ್ಯರುಗಳಾದ ಅಮ್ಜದ್ ಪಟೇಲ್, ಮಲ್ಲಪ್ಪ ಕವಲೂರು, ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ಅರುಣ ಅಪ್ಪುಶೆಟ್ಟಿ, ಅಕ್ಬರಪಾಷಾ ಪಲ್ಟನ, ವೀರುಪಾಕ್ಷಪ್ಪ ಮೋರನಾಳ, ಶಿವಗಂಗಾ ಬೂಮಕ್ಕನವರು, ದುರುಗವ್ವ ಹೆಚ್.ಬಿ.ಹಳ್ಳಿ, ಮುಖಂಡರುಗಳಾದ ಕಾಟನ್ ಪಾಷಾ, ಮಂಜುನಾಥ ಗಾಳಿ, ಸವರ್ೋಜ್ಞಪ್ಪ, ಮಾನ್ವಿಪಾಷಾ, ಅಕ್ತರ ಫಾರುಕಿ, ಜಾಕೀರ್ ಕಿಲ್ಲೇದಾರ, ಹಾಲೇಶ ಕಂದಾರಿ, ಮಹೇಬುಬ ಅರಗಂಜಿ, ವಾಹೀದ್ ಸೊಂಪುರ, ನಗರಸಭಾ ಅಧಿಕಾರಿಗಳು, ಹಾಗೂ ವಕ್ತಾರ ಕುರಗೋಡ ರವಿ ಯಾದವ್ ಉಪಸ್ಥಿತರಿದ್ದರು.