ಪತ್ರಿಕೋದ್ಯಮದಲ್ಲಿ ಛಾಯಾಚಿತ್ರದ ಪಾತ್ರ ಪ್ರಮುಖವಾಗಿದೆ : ಪ್ರೋ.ಬಿ.ಕೆ. ರವಿ

Role of photography in journalism is important : Prof. B.K. Ravi

ಪತ್ರಿಕೋದ್ಯಮದಲ್ಲಿ ಛಾಯಾಚಿತ್ರದ ಪಾತ್ರ ಪ್ರಮುಖವಾಗಿದೆ : ಪ್ರೋ.ಬಿ.ಕೆ. ರವಿ 

ಕೊಪ್ಪಳ 20: ವಿಶ್ವ ವಿದ್ಯಾಲಯದಲ್ಲಿ ವಿಶ್ವ ವಿದ್ಯಾಲಯದ ಕುಲಪತಿ ಪ್ರೋ.ಬಿ.ಕೆ. ರವಿ ಅವರು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಹಾಗೂ ಛಾಯಾಚಿತ್ರ ಪತ್ರಿಕೋದ್ಯಮದ ಕುರಿತು ಭೋಧನೆ ಮಾಡಿದರು.ಸಮಾಜದಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ. ಯಾವುದೇ ಪೋಟೋವನ್ನು ಒಳಗೊಂಡಿರುವ ಪತ್ರಿಕೆಯನ್ನು ಕಲ್ಪಿಸಿಕೊಂಡಾಗ ಸುದ್ದಿ ಮಾಡುವಲ್ಲಿ ಸಹಾಯ ವಾಗುವುದರ ಜೊತೆಗೆ ಸುದ್ದಿಯ ಮಾಹಿತಿಯನ್ನು ಆ ಫೋಟೋ ತಿಳಿಸುತ್ತದೆ. ಸುದ್ದಿಯಲ್ಲಿ ಚಿಂತನಶೀಲವಾಗಿ ಸಂಯೋಜಿಸಿದಾಗ, ಫೋಟೋಗಳು ಸಂದರ್ಭ ಮತ್ತು ಗ್ರಹಿಕೆಯನ್ನು ಸೇರಿಸುತ್ತವೆ ಹಾಗಾಗಿ ಪತ್ರಿಕೋದ್ಯಮದಲ್ಲಿ ಛಾಯಾಚಿತ್ರದ ಪಾತ್ರ ಪ್ರಮುಖವಾಗಿದೆ ಎಂದರು.ಛಾಯಾ ಚಿತ್ರಗಳು ಅನೇಕ ವಿಚಾರಗಳನ್ನು ಸರಳವಾಗಿ, ಅರ್ಥಗರ್ಭಿತವಾಗಿ ಹಾಗೂ ಕ್ರೀಯಾತ್ಮಕವಾಗಿ ತಿಳಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ವರದಿ ಮಾಡುವಾಗ, ಲೇಖನ , ನುಡಿ ಚಿತ್ರ ಸೇರಿದಂತೆ ಅನೇಕ ವಿಷಯಗಳಿಗೆ ಛಾಯಾಚಿತ್ರ ಅತಿ ಮುಖ್ಯವಾಗಿದೆ. ವಿದ್ಯಾರ್ಥಿಗಳು ಛಾಯಾಗ್ರಹಣದ ಕಲೆಯನ್ನು ತಿಳಿದುಕೊಳ್ಳಬೇಕು ಎಂದರು.ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಉಪನ್ಯಾಸಕ ಸಂತೋಷಕುಮಾರ, ಹಾಗೂ ವಿದ್ಯಾರ್ಥಿಗಳು ಇತರರು ಇದ್ದರು.