ಅಪಾಯ ಮಟ್ಟ ಮೀರಿದ ನದಿಗಳು: ಜನ ಸುರಕ್ಷಿತ ಸ್ಥಳಕ್ಕೆ

ಮಾಂಜರಿ-ಇಂಗಳಿ ಮಾರ್ಗದ ಮಧ್ಯೆ ಕೃಷ್ಣಾ ನದಿಯ ಹಿನ್ನಿರು ಬಂದಿರುವುದರಿಂದ ರೈತರು ಜಾನುವಾರುಗಳ ಜೊತೆಗೆ ಸುರಕ್ಷಿತ ಸ್ಥಳಕ್


ಮಾಂಜರಿ 20: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿನ ಮಳೆ, ವಾರಣಾ ಮತ್ತು ಕೊಯ್ನಾ ಜಲಾಶಯದಿಂದ ಹೆಚ್ಚಿಗೆ ನೀರು ಹರಿದು ಬರುತ್ತಿರುವುದರಿಂದ  ಪ್ರಮುಖ ನದಿಗಳಾದ ಕೃಷ್ಣಾ ಮತ್ತು ದೂಧಗಂಗಾ ನದಿಗಳಿಗೆ 1,69,943 ಕ್ಯೂಸೆಕ್ಸ್ ಹರಿದು ಒಳಹರಿವಿನಿಂದಾಗಿ ಗುರುವಾರ ನದಿಗಳ ನೀರಿನ ಮಟ್ಟ ಮತ್ತೆ ಒಂದು ಅಡಿ ಎರಿಕೆಯಾಗಿದ್ದರಿಂದ ನದಿಯ ದಂಡೆಯ ಮೇಲಿದ್ದ ರೈತರು ತಮ್ಮ ಜಾನುವಾರುಗಳ ಜೊತೆಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ. 

    ದಿ. 19ರಂದು 20600 ಕ್ಯೂಸೆಕ್ಸ್ ಹರಿದು ನೀರು ಹೆಚ್ಚಾಗಿದ್ದರಿಂದ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುತ್ತಿರುವುದರಿಂದ ಬೆಳೆಗಳು ಜಲಾವೃತಗೊಂಡಿವೆ, ಮಾಂಜರಿ-ಇಂಗಳಿ ಮಾರ್ಗದ ಮಧ್ಯದ ರಸ್ತೆಯ ಮೇಲೆ ಕೃಷ್ಣಾ ನದಿಯ ನೀರು ಬಂದಿರುವುದರಿಂದ ಸಂಚಾರ ಸ್ಥಗಿತಗೊಂಡಿದೆ.

ಸದಲಗಾ-ಬೋರಗಾಂವ ಮತ್ತು ಯಕ್ಸಂಬಾ-ದಾನವಾಡ ಸೇತುವೆ ಮೇಲಿಂದ ಸಂಚಾರ ಸುಗಮವಾಗಿ ಸಾಗಿದ್ದರೂ ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಮುಳುಗುವ ಹಂತ ತಲುಪಿದ್ದು. ಅಂಕಲಿ-ಮಾಂಜರಿ ಸೇತುವೆ ಮೇಲಿಂದ ಅಂತರರಾಜ್ಯ ಸಂಪರ್ಕ ಸುಗಮವಾಗಿ ಸಾಗಿದೆ.

ಇಂದು ಕೋಯ್ನಾ-66 , ರಾಧಾನಗರಿ-40 , ಕಾಳಮ್ಮಾವಾಡಿ-43, ಮಹಾಬಳೇಶ್ವರ-75 , ನವಜಾ-86, ,ವಾರಣಾ-37, ಪಾಟಗಾಂವ-30, ಕೊಲ್ಲಾಪೂರ-10 ಮತ್ತು ಸಾಂಗಲಿಸಾಂಗಲಿ-11 ಮಿಮಿ ಮಳೆ ಸುರಿದಿದ್ದು, ನಿನ್ನೆಗಿಂತ ಕೊಯ್ನಾ, ರಾಧಾನಗರ, ಕಾಳಮ್ಮಾವಾಡಿ ಮತ್ತು ನವಜಾ ಪರಿಸರದಲ್ಲಿ ಮಳೆ ಕ್ಷಿಣಿಸಿದೆ. 

ಚಿಕ್ಕೋಡಿ-8 , ಸದಲಗಾ-5, ನಿಪ್ಪಾಣಿ(ಪಿ.ಡಬ್ಲು,ಡಿ) 0.6, ನಿಪ್ಪಾಣಿ(ಎ.ಆರ್,ಎಸ್)1.4, ಗಳತಗಾ-3, ನಾಗರಮುನ್ನೋಳಿ-1.2, ಮತ್ತು ಸೌಂದಲಗಾ-2.1 ಮಿಮಿ ಮಳೆಯಾದ ಬಗ್ಗೆ ವರದಿಯಾಗಿದ್ದು. ಇಂದು ಸಹ ಮಳೆಯ ಪ್ರಮಾಣ ಕುಸಿದಿದೆ.

ಮಹಾರಾಷ್ಟ್ರದಿಂದ ಬಂದ ಕೃಷ್ಣಾ ನದಿಯಿಂದ 1,50,250 ಮತ್ತು ದೂಧಗಂಗಾ ನದಿಯಿಂದ 30,272 ಹೀಗೆ ಒಟ್ಟು 1,80,522 ಕ್ಯೂಸೆಕ್ಸ್ ಹರಿದು ಬರುತ್ತಿರುವ ನೀರು ಇತ್ತ ಹಿಪ್ಪರಗಿ ಬ್ಯಾರೇಜ ಮುಖಾಂತರ 1,85,000 ಮತ್ತು ಆಲಮಟ್ಟಿ ಜಲಾಶಯದಿಂದ 1,73,718 ಕ್ಯೂಸೆಕ್ಸ್ ನೀರು ಹೊರಬಿಡುತ್ತಿದ್ದಾರೆ.