ಬೀದಿ ಬದಿ ವ್ಯಾಪಾರಸ್ಥರ ಹಕ್ಕುಗಳು ರಕ್ಷಣೆಯಾಗಬೇಕು: ಬಾಲು ರಾಠೋಡ್
Rights of street vendors should be protected: Balu Rathod
ಗಜೇಂದ್ರಗಡ 24: ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಸ್ಥರ ಸಂಘ ಸಿಐಟಿಯು ಸಂಯೋಜಿತ ಗಜೇಂದ್ರಗಡ ತಾಲೂಕ ಸಮಿತಿಯ ಇಂದು ಬೀದಿಬದಿ ವ್ಯಾಪಾರಸ್ಥರ ಹಕ್ಕುಗಳ ರಕ್ಷಣೆಗಾಗಿ ಹಾಗೂ ವಿವಿಧ ಬೇಡಿಕೆಗಾಗಿ ಬೃಹತ್ ಮೆರವಣಿಗೆ ಮಾಡಿ ನಂತರ ಬಹಿರಂಗ ಸಭೆ ಮತ್ತು ತಾಲೂಕು ಸಮ್ಮೇಳನ ಹಮ್ಮಿಕೊಂಡಿತು. ಮೆರವಣಿಗೆಯು ದುರ್ಗಾ ಸರ್ಕಲ್ ನಿಂದ ಪ್ರಾರಂಭಗೊಂಡು ಜೋಡ ರಸ್ತೆ ಮೂಲಕ ಕೆ, ಕೆ ಸರ್ಕಲ್ ನಂತರ ಕುಷ್ಟಗಿ ರೋಡ್ ಮೂಲಕ ಸಿಐಟಿಯನ ಕಚೇರಿ ಆವರಣಕ್ಕೆ ತಲುಪಿಬಹಿರಂಗ ಸಭೆ ಮತ್ತು ಸಮ್ಮೇಳನ ನಡೆಸಲಾಯಿತು. ಬಹಿರಂಗ ಸಭೆಯನ್ನು ಸಂಘದ ಗೌರವ ಅದ್ಯಕ್ಷರು ಮತ್ತು ಕೃಷಿ ಕೂಲಿಕಾರರ ಸಂಘದ ತಾಲ್ಲೂಕು ಅಧ್ಯಕ್ಷರಾದ ಬಾಲು ರಾಠೋಡ ಉದ್ಘಾಟಿಸಿ ಮಾತನಾಡಿ ಇಂದು ನಡೆದ ಬೃಹತ್ ಮೆರವಣಿಗೆಯು ನಮ್ಮ ಹಕ್ಕುಗಳಿಗಾಗಿ ಜನರ ಮಧ್ಯೆ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ
ಈ ಮೂಲಕ ಜನರ ಮಧ್ಯೆ ಚರ್ಚೆಯನ್ನು ಹುಟ್ಟುಹಾಕಿದ ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಸ್ಥರ ಸಂಘವು ಗಜೇಂದ್ರಗಡದಲ್ಲಿ 2014 ರಿಂದಲೆ ಪ್ರಾರಂಭಗೊಂಡಿದ್ದು ಅನೇಕ ಹೋರಾಟಗಳನ್ನ ಮಾಡಿದೆ ಕೆಲವು ಗೊಂದಲಗಳ ಕಾರಣದಿಂದಾಗಿ ಸಂಘಟನೆಯ ನಾಯಕರು ಬೇರೆಬೇರೆ ಕಡೆ ಹೋದ ಕಾರಣ ಮಧ್ಯ ಕುಂಠಿತಗೊಂಡಿತು ಮತ್ತೆ ಅದು ಕರೋನ ನಂತರ ಗಜೇಂದ್ರಗಡದ ಮಾರುಕಟ್ಟೆ ಬದಲಾವಣೆ ಆದ ನಂತರ ಬೀದಿಬದಿ ವ್ಯಾಪಾರಸ್ಥರ ಹಕ್ಕುಗಳ ರಕ್ಷಣೆಗಾಗಿ ಹಲವಾರು ಬಳಿ ಬೇಡಿಕೊಂಡರು ಸಮಸ್ಯೆ ಇತರ್ಥ ಆಗದ ಕಾರಣ ಮತ್ತೆ ಬೀದಿಬದಿ ವ್ಯಾಪಾರಸ್ಥರು ಕೆಂ ಬಾವುಟ ಹಿಡಿದು ದೊಡ್ಡ ಮಟ್ಟದ ಚಳುವಳಿ ಮಾಡಿ ತಮ್ಮ ಮಾರುಕಟ್ಟೆ ಪ್ರದೇಶವನ್ನು ಮರಳಿ ಪಡೆಯಲು ಸಾಧ್ಯವಾಯಿತು ಇನ್ನೂ ಹಲವಾರು ಸೌಲಭ್ಯಗಳನ್ನು ಸ್ಥಳೀಯ ಆಡಳಿತ ಮಂಡಳಿಯವರು ನೀಡಬೇಕಿದೆ ಆದರೆ ಇಂದು ನಮ್ಮ ಸಮ್ಮೇಳಕ್ಕೆ ಅತಿಥಿಗಳಾಗಿ ನಗರಸಭೆಯ ಪುರಸಭೆಯ ಪೌರಾಡಳಿತರು ಬರಬೇಕಿತ್ತು ಬಂದಿಲ್ಲ
ಈ ವೇದಿಕೆ ಮೂಲಕ ನಾನು ಒತ್ತಾಯ ಮಾಡುತ್ತೇನೆ ಬೀದಿಬದಿ ವ್ಯಾಪಾರಸ್ಥರ ಹಕ್ಕುಗಳು ರಕ್ಷಣೆ ಆಗಬೇಕು ಅವರಿಗೆ ನೀಡಬೇಕಾದ ಸೌಲಭ್ಯಗಳು ದೊರೆಯಬೇಕು ಆ ಮೂಲಕ ಬೀದಿಬದೆ ಸಂರಕ್ಷಣಾ ಕಾಯ್ದೆಯ ಜಾರಿಗೆ ಮುಂದಾಗಬೇಕೆಂದು ಮತ್ತು ಕುಂದು ಕೊರತೆಗಳ ಬಗ್ಗೆ ಹರಿಸಲು ಸಮಿತಿಗಳ ರಚನೆ ಆಗಬೇಕೆಂದು ಒತ್ತಾಯಿಸುತ್ತೇನೆ ಮತ್ತು ಬೀದಿಬದಿ ವ್ಯಾಪಾರಸ್ಥರು ಕೆಂ ಬಾವುಟ ದಾಡಿಯಲಿ ಹೋರಾಟಗಳನ್ನ ಮಾಡಿ ಹಕ್ಕುಗಳನ್ನು ಪಡೆದಿದ್ದೀರಿ ಅವುಗಳ ರಕ್ಷಣೆ ಮಾಡಿಕೊಂಡು ಸಂಘಟನೆಯನ್ನು ಬಲಪಡಿಸಿಕೊಂಡು ಸಾಗಬೇಕು ಸಮಾಜದಲ್ಲಿ ಜಾತಿ ಮತ ಧರ್ಮಗಳ ಹೆಸರಿನಲ್ಲಿ ಅನ್ಯಾಯಗಳು ನಡೆದರೆ ನಾವು ಪ್ರೀತಿ ವಿಶ್ವಾಸದಿಂದ ಸಮಾಜ ಮತ್ತು ಸಮುದಾಯಗಳನ್ನ ಕಟ್ಟಬೇಕಿದೆ ಈ ವೇದಿಕೆ ಮೇಲೆ ಮೂಲಕ ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಿಗೇಡು ಹತ್ತೆ ಪ್ರಕರಣವನ್ನು ಖಂಡಿಸುತ್ತೇನೆ ನಾವೆಲ್ಲರೂ ಸೇರಿ ಇಂತಹ ಸಮಾಜಘಾತಕ ಕೃತ್ಯಗಳನ್ನ ಖಂಡಿಸೋಣ ಎಂದರು. ಪ್ರಾಸ್ತಾವಿಕವಾಗಿ ತಾಲ್ಲೂಕು ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ ಗಜೇಂದ್ರಗಡ ನಗರವು ವ್ಯಾಪಾರಸ್ಥರ ಕೇಂದ್ರವಾಗಿದ್ದು ದಿನ ದಿನ ವ್ಯಾಪಾರ ಬೆಳೆಯುತ್ತಲೇ ಇದೆ. ನಗರದಲ್ಲಿನ ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರ ಬದುಕು ಕಷ್ಟಕರವಾಗಿದೆ.
ಈ ಹಿನ್ನಲೆಯಲ್ಲಿ ಸರ್ಕಾರಗಳು ಅವರಿಗೆ ನೀಡಬೇಕಾದ ಕಾನೂನು ಬದ್ಧ ಸೌಲಭ್ಯಗಳನ್ನು ನೀಡದಿದ್ದಾಗ ಬೀದಿಗೆ ಇಳಿದು ನ್ಯಾಯಯುತವಾಗಿ ಹೋರಾಟ ಮಾಡಿ ಕೆಲವು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಸಾಧ್ಯ ಆಗಿದ್ದರೂ ಕೂಡ ಇನ್ನು ಹಲವಾರು ಬೇಡಿಕೆಗಳು ಈಡೇರಿಲ್ಲ ಅವುಗಳ ಕುರಿತು ಸಾರ್ವಜನಿಕರಲ್ಲಿ ಚರ್ಚಿಸಲು ಮತ್ತು ಸರ್ಕಾರ ಮಟ್ಟದಲ್ಲಿ ಒತ್ತಡ ಹೇರಿ ಸ್ಥಳೀಯ ಆಡಳಿತ ಮಂಡಳಿಗಳು ನಮಗೆ ನೀಡಬೇಕಾದ ಸೌಲಭ್ಯಗಳನ್ನು ನೀಡಲು ಒತ್ತಾಯಿಸಲು ಜೊತೆಗೆ ಚಿಲ್ಲರೆ ವ್ಯಾಪಾರ ಎಂದರೆ ವಿದೇಶಿ ಬಂಡವಾಳದ ಕಂಪನಿಗಳು ದೇಶಿಯ ವ್ಯಾಪಾರಸ್ಥರನ್ನು ಚಿಲ್ಲರೆ ಎಂದು ಪರಿಗಣಿಸುತ್ತಿವೆ ಅದರಲ್ಲಿ ಕಿರಾಣಿ, ಬಟ್ಟೆ, ಬೇಕರಿ, ಟಿವಿ ಪ್ರೀಜ್, ಪುಟವೇರ್, ಹಾರ್ಡವೇರ್, ಸ್ಟೇನರಿ, ಹೋಟಲ್, ಜ್ಯೂವಲೇರಿ,ರಸಗೊಬ್ಬರ, ಅಕ್ಕಡಿಕಾಳು, ಬೀದಿಬದಿ ವ್ಯಾಪಸ್ಥರು ಸೇರಿದಂತೆ ಈ ವ್ಯಾಪಾರಸ್ಥರನ್ನು ದಿವಾಳಿ ಮಾಡಿ ವಿದೇಶಿಯ ಕಂಪನಿಗಳು ದೊಡ್ಡ ದೊಡ್ಡ ಮಾಲಗಳನ್ನು ನಿರ್ಮಿಸುವ ಹುನ್ನಾರು ಹೊಂದಿವೆ ಹಾಗಾಗಿ ಗಜೇಂದ್ರಗಡ ನಗರದ ಬೀದಿ ಬದಿ ವ್ಯಾಪಾರಸ್ಥರ ಎಲ್ಲ ಸೇರಿ ಗಜೇಂದ್ರಗಡ ನಗರದ ಬೀದಿ ಬದಿ ವ್ಯಾಪಾರಸ್ಥರ ಸಮ್ಮೇಳನವನ್ನು ಹಮ್ಮಿಕೊಂಡಿದ್ದೆವೆ ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 