ಪಾರದರ್ಶಕತೆಗೆ ಮಾಹಿತಿ ಹಕ್ಕು ಅಧಿನಿಯ ಸಹಕಾರಿ: ಪಾಟೀಲ

ಬಾಗಲಕೋಟೆ 17: ಆಡಳಿತದಲ್ಲಿ ಪಾರದರ್ಶಕತೆ ತರಲು ಮಾಹಿತಿ ಹಕ್ಕು ಅಧಿನಿಯಮ ಸಹಕಾರಿಯಾಗಿದೆ ಎಂದು ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ಎಸ್.ಎಲ್.ಪಾಟೀಲ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿರುವ ನೂತನ ಆಡಿಟೋರಿಯಂ ಹಾಲ್ನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಹಮ್ಮಿಕೊಂಡ ಮಾಹಿತಿ ಹಕ್ಕು ಅಧಿನಿಯಮ ಕಾಯರ್ಾಗಾರದಲ್ಲಿ ಮಾತನಾಡಿದ ಅವರು ಮಾಹಿತಿ ಹಕ್ಕು ಒಂದು ಸಂವಿಧಾನಿಕ ಹಕ್ಕಾಗಿದ್ದು, ಮಾಹಿತಿಯ ನೇರ ಹಾಗೂ ನಿರಂತರ ಹರಿವು ಪ್ರಜಾಪ್ರಭುತ್ವದ ಮುಖ್ಯ ಉದ್ದೇಶವಾಗಿದೆ. ಪ್ರಜಾಪ್ರಭುತ್ವದಲ್ಲಿ ಮಾಹಿತಿಯು ಒಂದು ಸಬಲವಾದ ಅಸ್ತ್ರವಾಗಿದೆ ಎಂದರು. 

ಮಾಹಿತಿ ಹಕ್ಕು ಅಧಿನಿಯಮದ ಅನುಷ್ಠಾನದಿಂದ ರಾಜ್ಯ ಹಾಗೂ ದೇಶದಲ್ಲಿ ಹಲವಾರು ದೊಡ್ಡ ದೊಡ್ಡ ಹಗರಣಗಳು ಹಾಗೂ ಸೂಕ್ಷ್ಮ ಹಗರಣಗಳು ಬಯಲಿಗೆ ಬಂದಿವೆ. ಈ ಮಾಹಿತಿ ಹಕ್ಕನ್ನು ಬಹಳ ಪ್ರಭಾವಶಾಲಿಯಾಗಿ ಉಪಯೋಗಿಸಿಕೊಂಡು ಸರಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕು. ಎಲ್ಲ ಇಲಾಖೆಗಳು ಸ್ವಯಂ ಪ್ರೇರಿತರಾಗಿ ತಮ್ಮ ಕಚೇರಿಗೆ ಸಂಬಂಧಪಟ್ಟ ಮಾಹಿತಿಯನ್ನು ಕಚೇರಿಯ ಅಂತಜರ್ಾಲದಲ್ಲಿ ಪ್ರಕಟಿಸುವುದು ಅವಶ್ಯವಿದೆ ಎಂದರು.

ಸರಕಾರಿ ಅಧಿಕಾರಿಗಳು ಪದೇ ಪದೇ ಕಡತ ಲಭ್ಯವಿಲ್ಲ ಎಂಬ ಕಾರಣ ನೀಡಿ ಮಾಹಿತಿ ನೀಡದೇ ಇರುವ ವಿಷಯ ಬೇಸರ ತಂದಿದ್ದು, ಈ ರೀತಿ ಕಾರಣ ನೀಡುವುದು ಸರಿಯಲ್ಲ. ಹೊಣೆಗಾರಿಕೆಯಿಂದ ಮಾಹಿತಿ ನೀಡಬೇಕು. ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಸಕಾಲಕ್ಕೆ ಮಾಹಿತಿ ಪೂರೈಸುವ ಮೂಲಕ ದಂಡ ಮತ್ತು ಇತರೆ ಕ್ರಮಕ್ಕೆ ಅವಕಾಶ ನೀಡಬಾದೆಂದರು. ಅಲ್ಲದೇ ಸಾರ್ವಜನಿಕರು ಮಾಹಿತಿ ಕೋರುವ ನೆಪದಲ್ಲಿ ಈ ಹಕ್ಕನ್ನು ದುರ್ಬಳಕೆ ಮಾಡಿಕರ್ೊಳ್ಳಲು ಅವಕಾಶವಿಲ್ಲ. ಪ್ರಾಮಾಣಿಕವಾದ ಸಾರ್ವಜನಿಕ ಹಿತಾಶಕ್ತಿ ಉದ್ದೇಶವಿರಬೇಕು. ಸೇಡಿನ ಉದ್ದೇಶ ಮತ್ತು ವೈಯಕ್ತಿಕ ದ್ವೇಶದಿಂದ ಮಾಹಿತಿಯನ್ನು ಕೇಳುವುದರಿಂದ ಅಧಿನಿಯಮ ದುರ್ಬಳಕೆ ಮಾಡಿದಂತಾಗುತ್ತದೆ ಎಂದರು.

ಈ ಕಾರ್ಯದಲ್ಲಿ ದಕ್ಷತೆಯಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು. ಬೇಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ತಗೆದುಕೊಳ್ಳಲಾಗುವುದೆಂದು ಎಚ್ಚರಿಸಿದರು. ಮಾಹಿತಿ ಹಕ್ಕು ಅಧಿನಿಯಮ 2005ರಲ್ಲಿ ಅನುಷ್ಠಾನಗೊಂಡು 12 ವರ್ಷ ಕಳೆದರೂ ಸಹ ಇದರ ಮೂಲ ಉದ್ದೇಶಗಳಾದ ಪಾರದರ್ಶಕತೆ, ಹೊಣೆಗಾರಿಕೆ ಇನ್ನು ಪೂರ್ಣ ಪ್ರಮಾಣದಲ್ಲಿ ತಲುಪಿಸಬೇಕಾಗಿದೆ ಎಂದರು. 

ಜಿಲ್ಲಾಧಿಕಾರಿಗಳಾದ ಕೆ.ಜಿ.ಶಾಂತಾರಾಮ ಮಾತನಾಡಿ ಸರಕಾರದ ಕಾರ್ಯಗಳಲ್ಲಿ ಸಾಮಾನ್ಯರು ಕೂಡಾ ಆಡಳಿತ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಲು ಇದೊಂದು ಅಸ್ತ್ರವಾಗಿದ್ದು, ಹಿಂದೆ ಜನ ಹೆದರಿಕೆ ಹಾಗೂ ಭಯದಿಂದ ಅಧಿಕಾರಿಗಳನ್ನು ಕೇಳಲು ಹೇಳಲು ಹೆದರುತ್ತಿದ್ದರು. ಇದು ನಮ್ಮ ಜವಾಬ್ದಾರಿ ಅಲ್ಲವೆಂದು ತಿಳಿದಿದ್ದರು. ಆದರೆ ಸರಕಾರದ ಕಾರ್ಯಗಳಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಇದೆ ಎಂಬುದು ಹಾಗೂ ಅವರು ಕೇಳಿದ ಪ್ರಶ್ನೆಗೆ ಉತ್ತರ ಕೊಡುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದರು. ಅಧಿಕಾರಿಗಳಾದವರು ತಮ್ಮ ಇಲಾಖೆ ಕಾರ್ಯಗಳನ್ನು ಹಾಗೂ ಪ್ರಗತಿಯನ್ನು ಸಾರ್ವಜನಿಕರಿಗೆ ತಿಳಿಸಲು ವಿಫಲವಾಗಿದ್ದಲ್ಲಿ ಈ ಮಾಹಿತಿ ಹಕ್ಕು ಮಾಹಿತಿಯನ್ನು ದೊರಕಿಸಿ ಕೊಡುವಲ್ಲಿ ಪರಿಣಾಮಕಾರಿ ಅಸ್ತ್ರವಾಗಿದೆ ಎಂದರು.

ಕಾಯರ್ಾಗಾರದಲ್ಲಿ ಆಯುಕ್ತರ ಇಲಾಖೆಯ ಡಾ.ಆರ್.ಸಿ.ಜಗದೀಶ, ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.