ತಾಪಂ ಆಡಳಿತಾಧಿಕಾರಿ ನಂದಾ ಹಣಬರಟ್ಟಿ, ಅಧ್ಯಕ್ಷತೆಯಲ್ಲಿ ವಿವಿಧ ವಿಷಯಗಳ ಪರೀಶೀಲನೆ

 ತಾಪಂ ಆಡಳಿತಾಧಿಕಾರಿ  ನಂದಾ ಹಣಬರಟ್ಟಿ, ಅಧ್ಯಕ್ಷತೆಯಲ್ಲಿ ವಿವಿಧ ವಿಷಯಗಳ ಪರೀಶೀಲನೆ Review of various issues under the chairmanship of District Administration Officer Nanda Hanabaratt

ರೋಣ 06 : ರೋಣ ತಾಲೂಕ ಪಂಚಾಯತ್ ಆಡಳಿತಾಧಿಕಾರಿಗಳಾದ ಶ್ರೀಮತಿ ನಂದಾ ಹಣಬರಟ್ಟ, ಉಪ ನಿರ್ದೇಶಕರು ಹಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಗದಗ ಇವರ ಅಧ್ಯಕ್ಷತೆಯಲ್ಲಿ ತಾಲೂಕ ಪಂಚಾಯತ್ ಸಾಮಾನ್ಯ ಸಭೆ ದಿನಾಂಕ 05-02-2026 ರಂದು ಜರುಗಿತು.ಸಭೆಯಲ್ಲಿ ಮಾತನಾಡಿದ ಮಾನ್ಯ ಆಡಳಿತಾಧಿಕಾರಿಗಳು, ತಾಲೂಕ ವ್ಯಾಪ್ತಿಯಲ್ಲಿನ ವಿವಿಧ ಇಲಾಖೆಗಳ ಪ್ರಗತಿ ವರದಿಗಳನ್ನು ಪರೀಶೀಲಿಸಿದರು. ಪ್ರಸ್ತುತ ಆರ್ಥಿಕ ವರ್ಷ ಅಂತ್ಯದ ಹಂತದಲ್ಲಿರುವುದರಿಂದ ಯಾವುದೇ ಯೋಜನೆಯ ಅನುದಾನ ವ್ಯಯವಾಗದೆ ಉಳಿಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ಇದಲ್ಲದೆ, ಎಸ್‌ಎಸ್‌ಎಲ್ಸಿ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿಶೇಷ ಗಮನ ನೀಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಭೂಸೇನಾ ನಿಗಮದ ವತಿಯಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳು ವಿಳಂಬವಾಗುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿರುವುದನ್ನು ಉಲ್ಲೇಖಿಸಿದ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಸಭೆಯಲ್ಲಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶಿ ಚಂದ್ರಶೇಖರ ಬಿ ಕಂದಕೂರ, ತಾಲೂಕ ಪಂಚಾಯತ ವ್ಯವಸ್ಥಾಪಕರಾದ ಶ್ರೀ ದೇವರಾಜ್ ಸಜ್ಜನಶೆಟ್ಟರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಬಾಕ್ಸ್‌ ಸಭೆ ಬಳಿಕ ತಾಲೂಕ ಕ್ರೀಡಾಂಗಣದಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ಸರಕಾರಿ ಈಜುಕೊಳವನ್ನು ಪರೀಶೀಲನೆ ನಡೆಸಿ ಶೀಘ್ರವಾಗಿ ಕಾಮಗಾರಿ ಮುಗಿಸಲು ಸೂಚಿಸಿದರು, ಬಳಿಕ ಪ್ರೌಢ ಶಾಲೆಗೆ ಭೇಟಿ ನೀಡಿ ಮಕ್ಕಳ ವಿಧ್ಯಾಭ್ಯಾಸ ಸೇರಿದಂತೆ ಸ್ಪೆಷಲ್ ಕ್ಲಾಸ್ ತಗೆದುಕೊಳ್ಳಲು ಶಿಕ್ಷಕರಿಗೆ ತಿಳಿಸಿದರು...