ಮೌಲ್ಯಯುತ ಸಂದೇಶ ನೀಡಿದ ರೇವಣಸಿದ್ಧರು: ಸಿದ್ಧರಾಮಾನಂದ ಸ್ವಾಮಿಜಿ
Revanasiddhas gave a valuable message: Siddharamananda Swamiji
ವಿಜಯಪುರ 15: ರೇವಣಸಿದ್ಧರು 12ನೇ ಶತಮಾನಕ್ಕಿಂತ ಪೂರ್ವದಲ್ಲಿದ್ದವರು. ಜನಸಾಮಾನ್ಯರೊಂದಿಗೆ ಬೆರೆತು ನೋವು-ನಲಿವುಗಳನ್ನು ಹಂಚಿಕೊಂಡು ಕಾಲಮಾನಕ್ಕೆ ತಕ್ಕಂತೆ ಸಮುದಾಯದ ಸ್ಥಿತಿಗತಿಯನ್ನು ಅರಿತು ಜನರಲ್ಲಿ ಸದ್‌ವಿಚಾರಗಳನ್ನು ಮೂಡಿಸಿ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಿದ ಕೀರ್ತಿ ಇತಿಹಾಸ ಪುರುಷ ರೇವಣಸಿದ್ಧರಿಗೆ ಸಲ್ಲಬೇಕು ಎಂದು ತಿಂಥಿಣಿ ಬ್ರಿಡ್ಜ್, ವೀರಗೋಟ, ಕಲಬುರ್ಗಿ ವಿಭಾಗದ ಕಾಗಿನೆಲೆ ಕನಕ ಗುರುಪೀಠದ ಸಿದ್ಧರಾಮಾನಂದ ಮಹಾಸ್ವಾಮಿಗಳು ಹೇಳಿದರು.
ನಗರದ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರ ಹಾಗೂ ತುಮಕೂರಿನ ಶಾಲ್ಮಲೀ ಪ್ರಕಾಶನದ ಸಹಯೋಗದಲ್ಲಿ ಡಾ. ಗಂಗಾಧರ ಕೊಡ್ಲಿಯವರ ‘ರೇವಣಸಿದ್ಧ ಪರಂಪರೆ : ಸಾಂಸ್ಕೃತಿಕ ಅಧ್ಯಯನ ಗ್ರಂಥ ಲೋಕಾರೆ್ಣ ಕಾರ‌್ಯಕ್ರಮದಲ್ಲಿ ಆಶೀರ್ವಚನ ನೀಡುತ್ತ ರೇವಣಸಿದ್ಧರು ಉಳಿದ ಧರ್ಮಗಳ ಕಟ್ಟುನಿಟ್ಟಿನ ನಿಯಮಗಳಿಗೆ ಒಳಪಡದೇ ಉತ್ತರದಿಂದ ದಕ್ಷಿಣದವರೆಗೆ ಸಾಮಾನ್ಯನಿಗೆ ಯಾವುದು ಯೋಗ್ಯ ಎಂಬುದನ್ನು ಅರಿತು ಜಾತಿ, ಧರ್ಮ, ಲಿಂಗ ಬೇಧರಹಿತ ಮೌಲ್ಯಯುತ ಸಂದೇಶಗಳನ್ನೊಳಗೊಂಡ ಸಿದ್ಧಪರಂಪರೆಯನ್ನು ನಾಡಿಗೆ ನೀಡಿದ್ದರಿಂದ ಇಂದಿಗೂ ಅವರು ಲೋಕಮಾನ್ಯರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದು ಸಂಶೋಧನ ಕೇಂದ್ರ ನಿರ್ದೇಶಕ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಮಾತನಾಡಿ ಧರ್ಮದ ಪರಂಪರೆ ಆಯಾ ಕಾಲಘಟ್ಟಕ್ಕನುಗುಣವಾಗಿ ಸತ್ಯ ನಿಲುವುಗಳನ್ನು ಪ್ರತಿಪಾದಿಸುತ್ತ ಶರಣರು, ದಾಸರು, ರೇವಣಸಿದ್ಧರು ಗುರುಮನೆ ಮತ್ತು ಅರಮನೆಗಳಿಂದ ಹೊರಬಂದು ಸಮಾಜಮುಖಿಯಾಗಿ ಸಾತ್ವಿಕ ಜೀವನವನ್ನು ಸಾಗಿಸಿದ್ದರು. ಅಲ್ಲದೇ ಅವರ ವಿವಿಧ ಸಾಧನೆಗಳನ್ನು ಸಮಾಜಮುಖಿಯಾಗಿ ಮನೆ ಮನೆಗೆ ತಲುಪಿಸಿ ಸಾಂಸ್ಕೃತಿಕ ಪ್ರಜ್ಞೆಯ ಅರಿವು ಮೂಡಿಸಿ, ಜಾಗೃತಿಯನ್ನುಂಟು ಮಾಡಿದರು ಎಂದರು.
ಗ್ರಂಥ ಲೋಕಾರೆ್ಣ ಮಾಡಿದ ಜಾನಪದ ವಿದ್ವಾಂಸ ಡಾ. ಎಂ.ಎಂ.ಪಡಶೆಟ್ಟಿ ಮಾತನಾಡಿ ಹಾಲುಮತದವರು ಮತ್ತು ಲಿಂಗಾಯತ ಸಮುದಾಯದವರು ರೇವಣಸಿದ್ಧರ ವಿಚಾರಗಳನ್ನು ಅನುಷ್ಠಾನಗೊಳಿಸುವಲ್ಲಿ ಜಾತಿಭೇದವನ್ನು ಹೋಗಲಾಡಿಸಿ ಸಮಾನತೆಯನ್ನು ಅಳವಡಿಸಿಕೊಂಡ ಶ್ರೇಯಸ್ಸು ರೇವಣಸಿದ್ಧರಿಗೆ ಸಲ್ಲುತ್ತದೆ ಎಂದರು.
ಗ್ರಂಥ ಪರಿಚಯ ಮಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಎಫ್.ಟಿ.ಹಳ್ಳಿಕೇರಿ ಮಾತನಾಡಿ ರೇವಣಸಿದ್ಧ ಪರಂಪರೆಯ ಅಧ್ಯಯನದ ಆಕರಗಳು, ಚಾರಿತ್ರಿಕ ಹಿನ್ನೆಲೆ, ಅವರ ನೆಲೆಗಳು ಮತ್ತು ಸಾಂಸ್ಕೃತಿಕ ಅನನ್ಯತೆಗಳನ್ನು ಸಂಶೋಧಿಸಿ ಮತ್ತು ಬೇರೆಬೇರೆ ಕಾವ್ಯಗಳನ್ನು ಅಭ್ಯಸಿಸಿ ಕ್ಷೇತ್ರ ಅಧ್ಯಯನ ಮಾಡಿದ್ದಾರೆ. ಅಲ್ಲಿಯ ಸಂಸ್ಕೃತಿ, ಸಮಾನತೆ, ಜನಪರ ಕಾರ‌್ಯಗಳನ್ನು ಮಾಡಿದ್ದ ರೇವಣಸಿದ್ಧ ಸಾಧನೆಯನ್ನು ಡಾ. ಗಂಗಾಧರ ಕೊಡ್ಲಿಯವರು ಮಾಡಿದ ಸಂಶೋಧನೆ ಇಂದಿನ ಪ್ರಸ್ತುತ ಸಮಾಜಕ್ಕೆ ಹೊಳಹು ನೀಡುತ್ತದೆ ಮತ್ತು ಮುಂದಿನ ಅಧ್ಯಯನಕ್ಕೆ ಈ ಗ್ರಂಥ ಸಹಕಾರಿಯಾಗಲಿದೆ ಎಂದರು.
ಮಾರ್ಗದರ್ಶಕರಾದ ಡಾ. ಎಸ್.ಕೆ.ಕೊಪ್ಪ ಮಾತನಾಡಿ 11ನೇ ಶತಮಾನದ ಕೊನೆಯ ಮತ್ತು 12ನೇ ಶತಮಾನದ ಕೊನೆಯವರೆಗೆ ಮತ್ತು 13ನೇ ಶತಮಾನದ ಹರಿಹರ ಹಿ ರಾಘವಾಂಕರ ಕಾಲದಲ್ಲಿಯೂ ರೇವಣಸಿದ್ಧ ಪರಂಪರೆಯ ಕುರಿತು ಉಲ್ಲೇಖಗಳು ಇವೆ ಎಂದು ವಿಸ್ತೃತವಾಗಿ ಸಂಶೋಧಕ ಕೊಡ್ಲಿಯವರು ಆ ಕಾರ‌್ಯ ಮಾಡಿದ್ದಾರೆ ಎಂದರು.
ಗ್ರಂಥ ಕರ್ತೃ ಡಾ. ಗಂಗಾಧರ ಕೊಡ್ಲಿಯವರ ಮಾತನಾಡಿ ನಾನು 6500 ಕಿ.ಮೀ. ಕ್ರಮಿಸಿ ಈ ಸಂಶೋಧನೆಯು ಒಂದು ಆಕರ ಗ್ರಂಥವಾಗಲು ಪುಷ್ಠಿ ನೀಡಿದವರು ಡಾ. ಎಂ.ಎಂ.ಕಲಬುರ್ಗಿಯವರು. ಮಾರ್ಗದರ್ಶಕರಾದ ಡಾ. ಕೊಪ್ಪ ಅವರು ಮೇಲಿಂದ ಮೇಲೆ ನನ್ನ ಸಂಶೋಧನ ಕಾರ‌್ಯವನ್ನು ಯಶಸ್ವಿಗೊಳಿಸುವಲ್ಲಿ ಕಾರಣಿಕರ್ತರಾದ್ದರಿಂದಲೇ ಈ ಗ್ರಂಥ ರಚನೆಗೆ ಕಾರಣವಾಯಿತು ಎಂದರು.
ಬಿ.ಆರ್.ಬನಸೋಡೆ ಪ್ರಾರ್ಥಿಸಿದರು. ಡಾ. ಎಂ.ಎಸ್.ಮದಭಾವಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ವಿ.ಡಿ.ಐಹೊಳ್ಳಿ ನಿರೂಪಿಸಿದರು. ಸುಭಾಸ ಕನ್ನೂರ ವಂದಿಸಿದರು.
ಕನಕಶ್ರೀ ಪ್ರಶಸ್ತಿ ಪುರಸ್ಕೃತ ಚಂದ್ರಕಾಂತ ಬಿಜ್ಜರಗಿ, ಚಿತ್ರದುರ್ಗದ ಗೋವಿಂದಪ್ಪ ಗುರಮ್, ವಿ.ಸಿ.ನಾಗಠಾಣ, ಸುಭಾಸ ಯಾದವಾಡ, ಡಾ. ಸೋಮಶೇಖರ ವಾಲಿ, ಡಾ. ಆರ್.ಕೆ.ಕುಲಕರ್ಣಿ, ಸಂಗಮೇಶ ಬದಾಮಿ, ಬಿ.ಕೆ.ಗೋಟ್ಯಾಳ, ಎಸ್.ಬಿ.ದೊಡಮನಿ, ಎಸ್.ಎಚ್.ಶಿವಣಗಿ, ಎಂ.ಎಸ್.ಝಳಕಿ, ಡಾ. ಎಂ.ಎಸ್.ಮಾಗಣಗೇರಿ, ಮ.ಗು.ಯಾದವಾಡ, ಎಂ.ಆಯ್.ಮದಭಾವಿ, ಡಾ. ಎಂ.ಎಸ್.ಚಾಂದಕವಠೆ, ವೀರ್ಪ ಜುಮನಾಳ, ಸದಾಶಿವ ಪೂಜಾರಿ, ರವಿ ಕಿತ್ತೂರ, ಮಲ್ಲಣ್ಣ ಶಿರಶ್ಯಾಡ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 