ನಿವೃತ್ತ ನೌಕರರ ದಿನಾಚರಣೆ: ವೃತ್ತಿಯಿಂದ ನಿವೃತ್ತಿ ಆದರೆ ಬದುಕಿನಿಂದ ಅಲ್ಲ - ಅಣ್ಣಿಗೇರಿ
ರಾಣೀಬೆನ್ನೂರು 22: ಇಂದಿನ ನಿವೃತ್ತ ನೌಕರರು ಅಂದು ತಮ್ಮ ವೃತ್ತಿ ಬದುಕಿನಲ್ಲಿ ಸರ್ಕಾರಿ ಸೇವೆಯ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಅಂಥವರು ವೃತ್ತಿ ಬದುಕಿನಿಂದ ದೂರವಾಗದೇ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಮತ್ತಷ್ಟು ನವ ಚೈತನ್ಯ ವಂತರಾಗಬೇಕಾದ ಎಂದು ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಅಗತ್ಯವಿದೆ ಎಂದು ಎಸ್ ಬಿ. ಅಣ್ಣಿಗೇರಿ ಕರೆ ನೀಡಿದರು.
ಅವರು, ಗೌರಿಶಂಕರ್ ನಗರದ ಸಂಘದ ಸಭಾಭವನದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ತಾಲೂಕ ಘಟಕವು ಆಯೋಜಿಸಲಾಗಿದ್ದ, ಪಿಂಚಣಿದಾರ ದಿನಾಚರಣೆ ಮತ್ತು ಹಿರಿಯ ಪಿಂಚಣಿದಾರರ ಅಭಿನಂದನಾ ಸನ್ಮಾನ, ವಾರ್ಷಿಕ ಸಾಧಾರಣ ಸಭೆ ಕಾರ್ಯಕ್ರಮ. ಉದ್ಘಾಟಿಸಿ ಮಾತನಾಡಿದರು.
ಪಿಂಚಣಿದಾರರುತಮ್ಮ ಮುಂದಿನ ಜೀವನಕ್ಕೆ ಬೇಕಾಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಇಂದಿನಿಂದಲೇ ಮುಂಜಾಗೃತಾ ಕ್ರಮವನ್ನು ವಹಿಸಬೇಕು. ವೃತ್ತಿಯಿಂದ ನಿವೃತ್ತಿ ಹೊರತು, ಬದುಕಿನಿಂದ ಅಲ್ಲ ಎನ್ನುವ ವಾಸ್ತವಿಕತೆ ಅರಿತುಕೊಂಡರೆ ಪ್ರತಿಯೊಬ್ಬರು ಆರೋಗ್ಯಯುತ ಜೀವನವನ್ನು ಸಾಗಿಸಬಹುದಾಗಿದೆ ಎಂದರು. ಸರ್ಕಾರದ ಮಟ್ಟದಲ್ಲಿ ಪಿಂಚಣಿದಾರರ ಪರಿಷ್ಕೃತ ವೇತನ ಕುರಿತಂತೆ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಅವರು ಸವಿಸ್ತಾರವಾಗಿ ವಿವರಿಸಿ ಮಾಹಿತಿ ನೀಡಿದರು.ಮುಖ್ಯ ಅತಿಥಿಗಳಾಗಿದ್ಧ ಎಸ್ಬಿಐ ವ್ಯವಸ್ಥಾಪಕ ನಾಗೇಂದ್ರರಾವ್ ಸಿ, ಅವರು ಮಾತನಾಡಿ, ಹಿರಿಯ ಪಿಂಚಣಿ ದಾರರಿಗೆ ಬ್ಯಾಂಕಿನಲ್ಲಿ ಅನೇಕ ಸೌಲಭ್ಯಗಳಿದ್ದು ಅಗತ್ಯಕ್ಕೆ ಅನುಗುಣವಾಗಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಕರೆ ನೀಡಿದರು. ಪಿಂಚಿಣಿ ವೇತನ ಪಡೆಯುವರು ಬ್ಯಾಂಕಿಗೆ ಬಂದಾಗ ಅವರ ಯಾವುದೇ ತೊಂದರೆಗಳು ಇದ್ದರೂ ಸಹ ಅವುಗಳನ್ನು ಯಾವುದೇ ರೀತಿಯ ವಿಳಂಬವಿಲ್ಲದೆ ಬಗೆಹರಿಸಿಕೊಡುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಜನ ಹಿರಿಯ ಪಿಂಚಣಿದಾರರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿ.ಎಂ . ಕರ್ಜಗಿ ಆವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಬೆಳವಣಿಗೆ ಮತ್ತು ಕಾರ್ಯ ಚಟುವಟಿಕೆಗಳು ಕುರಿತಂತೆ ಮಾತನಾಡಿದರು. ಲೀಲಾವತಿ ಕೂಗುನೂರುಮಠ ಸಂಗಡಿಗರು ಪ್ರಾರ್ಥಿಸಿದರು. ಸುಗಮ ಸಂಗೀತ ಕಲಾವಿದೆ ಮಂಜುಳಾ ಮಾಜಿ ಗೌಡ್ರ ಮತ್ತು ಕುಮಾರ್ ಹಿರೇಮಠ ಸಂಗೀತ ಸೇವೆ ಸಲ್ಲಿಸಿದರು.ಎಂ.ಬಿ. ಬೆನಕಣ್ಣನವರ ಸ್ವಾಗತಿಸಿ, ಮೃತ್ಯುಂಜಯ ಮುದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು.