ಹಾವೇರಿ02:- ಆಧ್ಯಾತ್ಮದ ಆಗರವಾಗಿರುವ ಕನ್ನಡನಾಡಿನಲ್ಲಿ ಧರ್ಮ ಪ್ರಚಾರ ಹಾಗೂ ರಕ್ಷಣೆಗಾಗಿ ಮಠ ಮಾನ್ಯಗಳು ತಲೆ ಎತ್ತಿರುವದು ಸರ್ವವಿಧಿತ. ಧರ್ಮ ರಕ್ಷಣೆಯ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಚಟುವಟಿಕೆಗಳಿಗೆ ಸ್ಪಂದಿಸಿ ತಮ್ಮ ಕೀತರ್ಿಯ ದಿಗಂತವನ್ನು ವಿಸ್ತರಿಸಿಕೊಂಡಿವೆ ಎಂದು ಹಿರೇಮಾಗಡಿಯ ಮುರುಘಾಮಠದ ಶಿವಮೂತರ್ಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ನಗರದ ಸಿಂದಗಿಮಠದಲ್ಲಿ ಹಮ್ಮಿಕೊಂಡಿರುವ ಲಿಂ. ಶಾಂತವೀರ ಪಟ್ಟಾಧ್ಯಕ್ಷರ 39 ನೇ ಪುಣ್ಯ ಸ್ಮರಣೋತ್ಸವದ 2 ನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸತ್ಯ ಶುದ್ಧ ನಿರ್ಮಲ ಮನಸ್ಸಿನಲ್ಲಿ ಸದಾ ಭಗವಂತ ನೆಲೆಸುತ್ತಾನೆ. ಅಂತಹ ನಿರ್ಮಲ ಮನಸ್ಸು ಪಡೆಯಬೇಕಾದರೆ ಆಧ್ಯಾತ್ಮಿಕ ಅನುಭಾವದ ಅನುಸಂಧಾನ ಅವಶ್ಯವಾಗಿದೆ. ಪುಣ್ಯ ಸ್ಮರಣೋತ್ಸವದಂತ ಅನುಭಾವದ ನುಡಿಗಳು ಮನುಷ್ಯನನ್ನು ಮಹಾ ಮಹಿಮರನ್ನಾಗಿಸುತ್ತವೆ ಎಂದು ಹೇಳಿದರು.
ಅಂಧಕಾರದಲ್ಲಿದ್ದ ಸಮಾಜದ ಅಭ್ಯುದಯಕ್ಕೆ ತಮ್ಮನ್ನೇ ತಾವು ಅಪರ್ಿಸಿಕೊಂಡು ಮಠವನ್ನು ಸಮಾಜಮುಖಿಯಾಗಿಸಿ ಭಕ್ತರಲ್ಲಿ ಭಗವಂತನನ್ನು ಕಂಡ ಹಾನಗಲ್ಲ ಕುಮಾರ ಸ್ವಾಮಿಗಳು ಮತ್ತು ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು ಭುವಿಗಿಳಿದ ನಕ್ಷತ್ರಗಳು ಎಂದು ಹೇಳಿದರು.
ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಮಹಾಂತ ದೇವರು ಶೇಗುಣಸಿ ಮಾತಾಡಿ, ಆಧ್ಯಾತ್ಮಿಕ ಲೋಕದಲ್ಲಿ ಇಂದ್ರಿಯಗಳನ್ನು ನಿಗ್ರಹಿಸಿಕೊಂಡವನು ಶೂರ ಎನಿಸಿಕೊಳ್ಳುತ್ತಾನೆ. ಮಾತು ಬೆಳ್ಳಿ, ಮೌನ ಬಂಗಾರ ಎನ್ನುವಂತೆ, ಮೌನದ ಮೂಲಕ ಮನಸ್ಸನ್ನು ಹಿಡಿದಿಟ್ಟುಕೊಂಡು ತನ್ನನ್ನು ತಾನು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಆ ಮೂಲಕ ಧಾಮರ್ಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ರಾಂತಿಗೆ ಪ್ರೇರೇಪಣೆಗೊಳ್ಳಲು ದಾರಿದೀಪವಾಗುತ್ತದೆ. ಸಿಂದಗಿಯ ಶಾಂತವೀರ ಶ್ರೀಗಳು ಮಾತು ಕಡಿಮೆ ಕಾಯಕ ಹೆಚ್ಚು ಎಂದು ಬದುಕಿದ್ದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೀಳಗಿಯ ಜಾನಪದ ಕವಿ ಸಿದ್ದಪ್ಪ ಬಿದರಿ ಮಾತನಾಡಿ, ಸಾಮಾಜಿಕ ತಾಣಗಳ ಭರಾಟೆಯಲ್ಲಿ ನಮ್ಮ ಯುವ ಜನಾಂಗ ಜನಪದದ ಭವ್ಯ ಸಂಸ್ಕೃತಿ, ಸಾಹಿತ್ಯ, ಪರಂಪರೆಯನ್ನು ಮರೆಯುತ್ತಿದ್ದು, ಜನಪದ ಸಾಹಿತ್ಯವು ನಮ್ಮ ಮೂಲ ಸಾಂಸ್ಕೃತಿಕ ಪರಂಪರೆಯಾಗಿದ್ದು ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳಿದ ಅವರು ಹಲವಾರು ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಿದರು.
ಸಮಾರಂಭದಲ್ಲಿ ಹೋತನಹಳ್ಳಿ ಶಂಭುಲಿಂಗ ಶ್ರೀಗಳು, ಬೈರನಹಟ್ಟಿಯ ಶಾಂತಲಿಂಗ ಸ್ವಾಮಿಜಿ, ಹನುಮಂತಪ್ಪ ಕಾಮನಹಳ್ಳಿ, ಎಂ.ಎಸ್ ಹಿರೇಮಠ, ಶಿವಯೋಗಿಸ್ವಾಮಿ ಹಿರೇಮಠ, ಅಂಕಲಗಿ ಶಾಸ್ತ್ರೀಜಿ ಮತ್ತಿತರರು ಉಪಸ್ಥಿತರಿದ್ದರು. ಆರಂಭದಲ್ಲಿ ಆಕಾಶವಾಣಿ ಕಲಾವಿದ ಗುರುನಾಥ ಸುತಾರ ಪ್ರಾಥರ್ಿಸಿದರು. ಜಿ.ಎಸ್ ಭಟ್ ಸ್ವಾಗತಿಸಿದರು. ಶ್ರೀಮಠದ ವ್ಯವಸ್ಥಾಪಕ ಶಿವಬಸಯ್ಯ ಆರಾಧ್ಯಮಠ ಕಾರ್ಯಕ್ರಮ ನಿರ್ವಹಿಸಿದರು.