ಸಂಶೋಧನೆಗಳು ಸಮಕಾಲೀನ ಸಮಾಜವನ್ನು ಗಮನದಲ್ಲಿಟ್ಟುಕೊಂಡು ಜ್ಞಾನ ಸೃಷ್ಟಿಯತ್ತ ಸಾಗಬೇಕು

ಸಂಶೋಧನೆಗಳು ಸಮಕಾಲೀನ ಸಮಾಜವನ್ನು ಗಮನದಲ್ಲಿಟ್ಟುಕೊಂಡು ಜ್ಞಾನ ಸೃಷ್ಟಿಯತ್ತ ಸಾಗಬೇಕು Research should move towards knowledge creation, keeping contemporary society in mind

ಸವದತ್ತಿ 02 :  ಸಂಶೋಧನೆಗಳು ಸಮಕಾಲೀನ ಸಮಾಜವನ್ನು ಗಮನದಲ್ಲಿಟ್ಟುಕೊಂಡು ಜ್ಞಾನ ಸೃಷ್ಟಿಯತ್ತ ಸಾಗಬೇಕಾಗಿದೆ. ಆಧುನಿಕೋತ್ತರ ಕಾಲಘಟ್ಟದಲ್ಲಿ ಸಾಹಿತ್ಯ, ಸಮಾಜ ವಿಜ್ಞಾನವು ಪ್ರಸಕ್ತ ವಿದ್ಯಮಾನಗಳಿಗೆ ಪ್ರತಿಬಿಂಬವಾಗುತ್ತಿದೆ. ಇದಕ್ಕೆ ಬಹುಶಿಸ್ತೀಯ ಅಧ್ಯಯನವೇ ಪರಿಹಾರ ಒದಗಿಸಬಲ್ಲದು ಎಂದು ಶ್ರೀಲಂಕಾದ ಈಸ್ಟರ್ನ್‌ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾದ ಡಾ.ಕೆ.ಶ್ರೀಕರುಣಾಕರನ್ ಹೇಳಿದರು.

ಇಲ್ಲಿನ ಕೆ.ಎಲ್‌.ಇ. ಸಂಸ್ಥೆಯ ಎಸ್‌. ವ್ಹಿ. ಎಸ್‌. ಬೆಳ್ಳುಬ್ಬಿ ಮಹಾವಿದ್ಯಾಲಯದ ಐಕ್ಯೂಎಸಿ ಘಟಕವು ಏರಿ​‍್ಡಸಿದ “ಸಾಹಿತ್ಯ ಮತ್ತು ಸಮಾಜ ವಿಜ್ಞಾನದಲ್ಲಿ ಆಧುನಿಕೋತ್ತರ ಸಮಸ್ಯೆಗಳು ಕುರಿತ ಬಹುಶಿಸ್ತೀಯ ದೃಷ್ಟಿಕೋನ” ಎಂಬ ವಿಷಯದ ಒಂದು ದಿನದ ಅಂತರಾಷ್ಟ್ರೀಯಸಮ್ಮೇಳನದಲ್ಲಿ ಭಾಗವಹಿಸಿ ದಿಕ್ಸೂಚಿ ಮಾತನಾಡಿದರು. ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎಸ್‌.ಟಿ.ಬಾಗಲಕೋಟಿ ಮಾತನಾಡಿ ಆಧುನಿಕೋತ್ತರವಾದ ಎಂಬ ವಿಚಾರವು ಕೈಗಾರೀಕೀಕರಣ, ಪ್ರಥಮ ವಿಶ್ವಯುದ್ಧ ಮತ್ತು ನಗರೀಕರಣದಂತಹ ಪರಿಣಾಮಗಳಿಂದ ಉದಯಿಸಿತು. ಅದುವರೆಗೆ ಬೆಳೆದು ಬಂದಿರುವ ಪಾರಂಪರಿಕ ಕಲಾ ರೂಪಗಳು ಆಧುನಿಕತೆಯ ಪರಿಣಾಮವನ್ನು ಎದುರಿಸಲು ಅಸಮರ್ಥವಾಗಿದ್ದವು.

ಇದರಿಂದ ಆಧುನಿಕತೆಯ ಶೈಲಿಗಳಲ್ಲಿ ಅಭಿವ್ಯಕ್ತಿಸಲು ಪ್ರಾರಂಭಿಸಿದರು ಎಂದರು.ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾದ ಡಾ.ಎನ್‌.ಎಚ್‌.ಕಲ್ಲೂರ ಮಾತನಾಡಿ ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ ಸಾಂಸ್ಕತಿಕ, ರಾಜಕೀಯ, ತಂತ್ರಜ್ಞಾನ ಮತ್ತು ಜ್ಞಾನ ಸಂಬಂಧಿತ ವಿಷಯಗಳು ವೇಗವಾಗಿ ಬೆಳೆಯುತ್ತಿರುವ ಸಾಮಾಜಿಕ ಬದಲಾವಣೆಗೆ ಪ್ರತಿಕ್ರಿಯೆಯಾಗಿ ಆಧುನಿಕೋತ್ತರವಾದವು ಹುಟ್ಟಿಕೊಂಡಿತು. ಪ್ರಗತಿ, ಸತ್ಯ ಮತ್ತು ಜ್ಞಾನದ ಪರಿಭಾಷೆಯನ್ನು ಇದು ಪ್ರಶ್ನಿಸಿತು ಎಂದರು. ಕಾರ್ಯಕ್ರಮದಲ್ಲಿ ಉದ್ಘಾಟಿಸಿದ ವಿರೂಪಾಕ್ಷ ಮಾಮನಿ ಮಾತನಾಡಿ ಸಾಮಾಜಿಕವಾಗಿ ನಾವು ಪರಿವರ್ತನೆಯಾಗಬೇಕಾದರೆ ಶಿಕ್ಷಣವೇ ನಮಗಿರುವ ಶಕ್ತಿ.

ವಿದ್ಯಾರ್ಥಿಗಳು ಇಂದಿನ ತಂತ್ರಜ್ಞಾನವನ್ನು ಧನಾತ್ಮಕ ರೂಪದಲ್ಲಿ ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು. ತಾಂತ್ರಿಕ ಗೋಷ್ಠಿಯಲ್ಲಿ ಬೇರೆ ಬೇರೆ ರಾಜ್ಯ ಮತ್ತು ವಿವಿಧ ಜಿಲ್ಲೆಗಳ ಪ್ರಾಧ್ಯಾಪಕರು ಮತ್ತು ಸಂಶೋಧನಾರ್ಥಿಗಳು ಒಟ್ಟು 142 ಜನ ಪ್ರಬಂಧ ಮಂಡಿಸಿದರು. ಈ ಸಮ್ಮೇಳನದ ನಿಮಿತ್ತ ಆಹ್ವಾನಿಸಲಾದ ಪ್ರಬಂಧಗಳನ್ನು ಸಂಕಲಿಸಿ ಐದು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ಈ ವೇಳೆ ಪ್ರಾಚಾರ್ಯ ಡಾ.ಎನ್‌.ಆರ್‌.ಸವತಿಕರ, ರವಿ ಹೊಳೆಯಣ್ಣವರ, ಡಾ.ಎನ್‌.ಎ.ಕೌಜಗೇರಿ, ವಿ.ಎಸ್‌.ಮೀಶಿ, ಬಿ.ವಿ.ಮಲಗೌಡರ ಉಪಸ್ಥಿತರಿದ್ದರು, ಸ್ನೇಹಾ ಗಂಗಲ ಸುನಂದಾ ಹಟ್ಟಿ,  ಪ್ರೊಫೆಸರ್ ಕೆ.ರಾಮರೆಡ್ಡಿ, ಡಾ.ಎ.ಎಫ್‌.ಬದಾಮಿ, ಎಸ್‌.ಎಂ.ಹೊಳಿ, ಎ.ಎ.ಹಳ್ಳೂರ, ಎಂ.ಸಿ.ಹಾದಿಮನಿ, ಭಾಗ್ಯಶ್ರೀ ಪೊಲೇಶಿ, ಗೀತಾ ಮಲ್ಲಾಪುರ, ಪಿ.ಎಫ್‌.ಹಾದಿಮನಿ, ಕಿರಣಕುಮಾರ ಲಮಾಣಿ, ವಿವೇಕ ಸುಳಿಬಾವಿ, ಎಮ್‌.ಎನ್‌.ಸಂಗೊಳ್ಳಿ, ಕೆ.ಬಿ.ನರಗುಂದ, ಎಸ್‌.ಜೆ.ಮಜ್ಜಗಿ, ಅಶೋಕ ಪಮ್ಮಾರ, ಪ್ರೊ.ಎಸ್‌.ಬಿ.ಕಿಲ್ಲೆದಾರ, ಡಾ.ಎಸ್‌.ಸಿಮಠಪತಿ, ಅಶೋಕ ವಿಘ್ನೇಶಿ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.