ಕತ್ತಲ ತೊಟ್ಟಿಯಲ್ಲಿ ಸಿಲುಕಿದ್ದ ಹಾವುಗಳ ರಕ್ಷಣೆ
Rescue of snakes trapped in a dark tank
ಮುಂಡಗೋಡ 25: ಪಟ್ಟಣದ ತುಕಾರಾಮ ಇಂಗಳೇರ ಅವರ ತೋಟದಲ್ಲಿರುವ ಸುಮಾರು 12 ಅಡಿ ಆಳದ ತೊಟ್ಟಿಯಲ್ಲಿ ವಿಷಕಾರಿ ಕೊಳಕು ಮಂಡಲ ಹಾವು ಸಿಲುಕಿಕೊಂಡಿದ್ದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ತೊಟ್ಟಿಯಲ್ಲಿ ನೀರು ಇಲ್ಲದ ಕಾರಣ ಹಾವು ಹೊರಬರಲು ಸಾಧ್ಯವಾಗದೇ ತೊಟ್ಟಿಯೊಳಗೇ ಅಸಹಾಯಕವಾಗಿ ಸಿಲುಕಿಕೊಂಡಿತ್ತು. ಹಾವು ಯಾವಾಗ ತೊಟ್ಟಿಗೆ ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಈ ಕುರಿತು ಮಾಹಿತಿ ಪಡೆದ ಮುತ್ತುರಾಜ ಹಳ್ಳಿ, ಗಸ್ತು ಅರಣ್ಯ ಪಾಲಕರು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಧೈರ್ಯದಿಂದ ತೊಟ್ಟಿಯೊಳಗೆ ಇಳಿದು ಅಪಾಯಕರ ಕೊಳಕು ಮಂಡಲ ಹಾವನ್ನು ಸುರಕ್ಷಿತವಾಗಿ ರಕ್ಷಿಸಿದರು. ಅದೇ ತೋಟದಲ್ಲಿ ಇನ್ನೊಂದು ಹೆಬ್ಬಾವು ಇರುವ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನೂ ಸಹ ಎಚ್ಚರಿಕೆಯಿಂದ ಹಿಡಿದು, ಎರಡೂ ಹಾವುಗಳನ್ನು ಅವುಗಳ ಸ್ವಾಭಾವಿಕ ಆವಾಸಸ್ಥಾನಕ್ಕೆ ಸುರಕ್ಷಿತವಾಗಿ ಬಿಡಲಾಯಿತು.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಸಮಾಜ ಸೇವಕರು ಹಾಗೂ ಪ್ರಾಣಿ ಪ್ರಿಯರಾದ ನಾಗರಾಜ ಗುಬ್ಬಕ್ಕನವರು ಹಾಗೂ ವಕೀಲರಾದ ಪವನ ತುಕಾರಾಮ ಇಂಗಳೆ ಅವರು ಉಪಸ್ಥಿತರಿದ್ದು, ಅರಣ್ಯ ಸಿಬ್ಬಂದಿಗೆ ಸಹಕಾರ ನೀಡಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 