ಯುವಕರಿಗೆ ಉದ್ಯೋಗ ನೀಡಲು ಮನವಿ

ಲೋಕದರ್ಶನ ವರದಿ

ಕಾರವಾರ 08: ನೌಕಾದಿನದ ಅಂಗವಾಗಿ ಸೀಬರ್ಡ ನೌಕಾನೆಲೆಗೆ ಭೇಟಿ ನೀಡಿದ ಶಾಸಕಿ ರೂಪಾಲಿ ಎಸ್. ನಾಯ್ಕ ನೌಕಾನೆಲೆ ಅಧಿಕಾರಿಗಳೊಂದಿಗೆ ವಿಕ್ರಮಾದಿತ್ಯ ಹಡಗು ವೀಕ್ಷಣೆ ಮಾಡಿದರು ಹಾಗೂ ನಿರಾಶ್ರಿತರ ಮತ್ತು  ಸ್ಥಳೀಯ ನಿರುದ್ಯೋಗಿ ಯುವಕರ ಸಮಸ್ಯೆಗಳ ಬಗ್ಗೆ ಚಚರ್ೆ ನಡೆಸಿದರು.

               ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ  ಸೀಬರ್ಡ ಯೋಜನೆಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶದಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಿ. ಪರರಾಜ್ಯದ ಕಾಮರ್ಿಕರನ್ನು , ಸಿಬ್ಬಂದಿಗಳನ್ನು ಅವಲಂಬಿಸುವುದರ ಬದಲು  ಸ್ಥಳೀಯರಿಗೆ ಸೂಕ್ತ ತರಬೇತಿ ನೀಡಿದರೆ ಎಲ್ಲರಿಗೂ ಅನುಕೂಲ. ಆದ್ದರಿಂದ ಸ್ಥಳೀಯರಿಗೆ ತರಬೇತಿ ನೀಡುವ ವ್ಯವಸ್ಥೆ ಆಗಲಿ. ನಮ್ಮ ಸಹಕಾರ ಬೇಕಿದ್ದರೆ ನಾವು ಸಹಕಿರಿಸಲು ಸಿದ್ಧರಿದ್ದೇವೆ.ಸೀಬರ್ಡ ಯೋಜನೆಯಿಂದ ದೇಶಕ್ಕೂ ಸ್ಥಳೀಯ ಮಣ್ಣಿನ ಮಕ್ಕಳಿಗೂ, ಯುವಕರಿಗೂ ಸಹಾಯವಾಗಲಿ ಎಂಬುದೇ ಬೇಡಿಕೆಯಾಗಿದೆ  ಎಂದರು.  ಈ ಸಂದರ್ಭದಲ್ಲಿ ಮಾತನಾಡಿದ ನೌಕಾನೆಲೆ ಅಧಿಕಾರಿ ಗುರುವೀರದಾಸ ಸ್ಥಳೀಯರಿಗೆ ಸೂಕ್ತ ತರಬೇತಿ ನೀಡಿದರೆ ಅವರಿಗೆ ಉದ್ಯೋಗ ನೀಡಲು ಸಮಸ್ಯೆ ಇಲ್ಲ. ಮೊದಲು ತರಬೇತಿ ನೀಡುವ ವ್ಯವಸ್ಥೆ ಆಗಬೇಕು. 

ನಮ್ಮಿಂದಾಗುವ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ ಎಂದರು.  ನೌಕಾನಲೆ ಅಧಿಕಾರಿಗಳಾದ ಕ್ಯಾಪ್ಟನ್ ವಿಕಾಸ್ ಗುಪ್ತಾ, ಕಮಾಂಡೆಂಟ್ ಆಫಿಸರ್ ಗುರುವೀರದಾಸ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಬಿಜೆಪಿ ಪದಾಧಿಕಾರಿಗಳಾದ  ಭಾಸ್ಕರ ನಾವರ್ೇಕರ, ಅರುಣ ನಾಡಕಣರ್ಿ, ರಾಜೇಂದ್ರ ನಾಯ್ಕ, ಜಗದೀಶ ನಾಯಕ ಮೊಗಟಾ, ಮನೋಜ ಭಟ್, ಕಿಶನ್ ಕಾಂಬ್ಳೆ, ಸಂಜು ನಾಯ್ಕ, ಬಾಲಕೃಷ್ಣ ನಾಯ್ಕ, ಪ್ರಶಾಂತ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.