ರೈಲ್ವೆ ಸ್ಟೇಷನ್ ಗೆ ನಿತ್ಯ ಬಸ್ ಬಿಡುವಂತೆ ಮನವಿ
Request to run a regular bus to the railway station
ರೈಲ್ವೆ ಸ್ಟೇಷನ್ ಗೆ ನಿತ್ಯ ಬಸ್ ಬಿಡುವಂತೆ ಮನವಿ
ಯಲಬುರ್ಗಾ 08: ಇಲ್ಲಿಯ ರೈಲ್ವೆ ಸ್ಟೇಷನ್ ಗೆ ನಿತ್ಯ ಒಂದು ಬಸ್ ಓಡಿಸುವಂತೆ ಪಪಂ ಸದಸ್ಯ ಅಶೋಕ ಅರಕೇರಿ ಸಾರಿಗೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು,ಬಹು ದಿನದ ಕನಸಾಗಿದ್ದ ಗದಗ ವಾಡಿ ರೈಲ್ವೆಯು ಹುಬ್ಬಳ್ಳಿ ಯಿಂದ ಕುಷ್ಟಗಿ ಯವರೆಗೂ ಓಡಾಡುವುದರಿಂದ ಈ ಭಾಗದ ಪ್ರಯಾಣಿಕರಿಗೆ ಇದರಿಂದ ತುಂಬಾ ಅನುಕೂಲವಾಗಿದೆ. ಆದ್ರೆ ಪಟ್ಟಣದಲ್ಲಿರುವ ನೂತನ ರೈಲ್ವೆ ಸ್ಟೇಷನ್ ಸುಮಾರು 1/2 ಕಿ.ಮಿ ಅಂತರದಲ್ಲಿರುವುದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈಗಾಗಲೆ ಕುಷ್ಟಗಿ ಸಾರಿಗೆ ಘಟಕದಿಂದ ಬಸ್ ನಿಲ್ದಾಣದಿಂದ ರೈಲ್ವೆ ಸ್ಟೇಷನ್ ಯವರೆಗೂ ಬಸ್ ಆರಂಭಿಸಿದ್ದರಿಂದ ಅಲ್ಲಿಯ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಿದೆ. ಅದ್ದರಿಂದ ಕುಷ್ಟಗಿಯಿಂದ ಬೆಳಿಗ್ಗೆ 7;30 ಕ್ಕೆ ಬರುವ ಈ ರೈಲ್ವೆ ಹುಬ್ಬಳ್ಳಿ ಹೊಗುತ್ತಿದೆ.
ಯಲಬುರ್ಗಾ ಸಾರಿಗೆ ಘಟಕದಿಂದ ಬೆಳಿಗ್ಗೆ 6 ಘಂಟೆಯಿಂದ ಬಸ್ ನಿಲ್ದಾಣದಿಂದ ಬಿಡುವ ವ್ಯವಸ್ಥೆ ಹಾಗೂ ರಾತ್ರಿ ಹುಬ್ಬಳ್ಳಿಯಿಂದ ಕುಷ್ಟಗಿ ಗೆ ಬರುವ ರೈಲ್ವೆ ಯಲಬುರ್ಗಾಕ್ಕೆ ರಾತ್ರಿ 8;30 ಕ್ಕೆ ಬರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಿಗ್ಗೆ ಹಾಗು ರಾತ್ರಿ ಸಮಯದಲ್ಲಿ ಇಂದು ಸಾರಿಗೆ ಬಸ್ ಬಿಡುವ ವ್ಯವಸ್ಥೆ ಮಾಡಿದರೆ ಪ್ರಯಾಣಿಕರಿಗೆ ತುಂಬಾ ಅನುಕೂಲ. ಆಗುವುದರಿಂದ ಸಾರಿಗೆ ಇಲಾಖೆ ಗಮನ ಹರಿಸಿ ಒಂದು ಬಸ್ ಬಿಡುವ ವ್ಯವಸ್ಥೆ ಮಾಡುವಂತೆ ಪಪಂ ಸದಸ್ಯ ಅಶೋಕ ಅರಕೇರಿ ಮನವಿ ಮಾಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 