ಪತ್ರಿಕಾ ಭವನಕ್ಕೆ ನಿವೇಶನ ಒದಗಿಸಲು ಮನವಿ

ಪತ್ರಿಕಾ ಭವನಕ್ಕೆ ನಿವೇಶನ ಒದಗಿಸಲು ಮನವಿ Request to provide site for Patrika Bhavan

               ದೇವರಹಿಪ್ಪರಗಿ 13 : ತಾಲೂಕು ಕೇಂದ್ರವಾದ ದೇವರ ಹಿಪ್ಪರಗಿ ಪಟ್ಟಣದಲ್ಲಿ ನೂತನವಾಗಿ ಪತ್ರಿಕಾ ಭವನ ನಿರ್ಮಿಸಲು ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸೂಕ್ತವಾದ ಒಂದು ಸ್ಥಳದಲ್ಲಿ ನಿವೇಶನ ಒದಗಿಸುವಂತೆ ಕೋರಿ ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರ ನೇತೃತ್ವದಲ್ಲಿ ತಾಲೂಕಿನ ಪತ್ರಕರ್ತರ ಸಂಘದ ಎಲ್ಲಾ ಪದಾಧಿಕಾರಿಗಳು ಸೇರಿ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿದ ತಾಲೂಕ ಕಾನಿಪ ಅಧ್ಯಕ್ಷರಾದ ಸಂಗಮೇಶ ಉತ್ನಾಳ ಅವರು ರಾಜ್ಯದ ಹಲವಾರು ತಾಲೂಕು ಕೇಂದ್ರಗಳಲ್ಲಿ ಈಗಾಗಲೇ ಪತ್ರಿಕಾ ಭವನಗಳು ನಿರ್ಮಾಣಗೊಂಡಿದ್ದು. ಪತ್ರಕರ್ತರ ಹಾಗೂ ಸಾರ್ವಜನಿಕರ. ಅಧಿಕಾರಿಗಳ ಅನುಕೂಲಕ್ಕಾಗಿ ದೇವರ ಹಿಪ್ಪರಗಿ ತಾಲೂಕಿಗೂ ಸಹ ಪತ್ರಿಕಾ ಭವನದ ಅವಶ್ಯಕತೆ ಇದ್ದು ಕೂಡಲೇ ಸೂಕ್ತವಾದ ಸ್ಥಳದಲ್ಲಿ ನಿವೇಶನ ಒದಗಿಸಿ ಕೊಡಬೇಕೆಂದು ಹೇಳಿದರು.

               ಪತ್ರಕರ್ತರ ಮನವಿಗೆ ಸ್ಪಂದಿಸಿದ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಅಫ್ರೋಜ ಅಹ್ಮದ ಪಟೇಲ. ರವರು ತಮ್ಮ ಬೇಡಿಕೆಯನ್ನು ಪರಿಗಣಿಸಿ ಮುಂದಿನ ಸಾಮಾನ್ಯ ಸಭೆಯಲ್ಲಿ ಇಟ್ಟು ಪ. ಪಂ. ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ. ಪ. ಪಂ. ಸದಸ್ಯರ ಒಪ್ಪಿಗೆ ಪಡೆದು ಪತ್ರಕರ್ತರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. ತಹಸಿಲ್ದಾರ ನಿಂಗಣ್ಣ ಬಿರಾದಾರರವರು ಸಹ ತಮ್ಮ ಬೇಡಿಕೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕುಂಬಾರ. ಉಪಾಧ್ಯಕ್ಷರಾದ ಶ್ರೀಧರ್ ನಾಡಗೌಡ. ಮಂಜುನಾಥ ಬ್ಯಾಕೋಡ. ಖಜಾಂಚಿ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ. ಕಾರ್ಯದರ್ಶಿಗಳಾದ ಹುಸೇನ್ ಕೊಕಟನೂರ. ಕಾ.ಕಾರಣಿ ಸದಸ್ಯರಾದ ಈರನಗೌಡ ಪಾಟೀಲ. ಮಹಮದ್ ರಫೀಕ ಮೋಮಿನ್‌. ಹಸನ್ ನದಾಫ. ರಫೀಕ್ ಪತ್ತೆಅಹ್ಮದ್‌. ಅಶೋಕ ಗೊಲ್ಲರ. ಅಮೀದ  ಮುಲ್ಲಾ. ಮಲ್ಲಿಕಾರ್ಜುನ ಕಬ್ಬಿನ.ಸೇರಿದಂತೆ ತಾಲೂಕಿನ ಪತ್ರಕರ್ತರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.