ಸಂಕದಾಳ ಗ್ರಾಮದ ಶಾಲೆಗೆ ಹೆಚ್ಚುವರಿ ಕೊಠಡಿಗಳನ್ನು ಮಂಜೂರ ಮಾಡಬೇಕೆಂದು ಡಿಡಿಪಿಐಗೆ ಮನವಿ
Request to DDPI to allocate additional rooms for Sankadala village school
ಸಂಕದಾಳ ಗ್ರಾಮದ ಶಾಲೆಗೆ ಹೆಚ್ಚುವರಿ ಕೊಠಡಿಗಳನ್ನು ಮಂಜೂರ ಮಾಡಬೇಕೆಂದು ಡಿಡಿಪಿಐಗೆ ಮನವಿ
ಗದಗ 16: ಲಕ್ಷ್ಮೇಶ್ವರ ತಾಲೂಕ ಸಂಕದಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ವರ್ಗದ ಕೊಠಡಿಗಳನ್ನು ಮಂಜೂರ ಮಾಡಬೇಕೆಂದು ಗ್ರಾಮಸ್ತರೆಲ್ಲರೂ ಸೇರಿ ಡಿಡಿಪಿಐ ಗದಗ ಉಪ ನಿರ್ದೇಶಕರಾದ ಆರ್‌ಎಸ್ ಬುರುಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದ್ದು ಇದಕ್ಕೆ ತನ್ನದೆ ಆಗಿರುವ ಯಾವುದೇ ವಿಶಾಲವಾದ ನಿರ್ಧಿಷ್ಟ ಆಟದ ಮೈದಾನ ಇಲ್ಲದೆ ಇರುವ ಕಾರಣ ಶಾಲೆಯ ಮುಂದೆ ಇರುವ ಸ್ವಲ್ಪ ಆವರಣದಲ್ಲೇ ಗ್ರಾಮದಲ್ಲಿ ಯಾವುದೇ ರೀತಿಯ ಬಸ್ ನಿಲ್ದಾಣದ ವ್ಯವಸ್ಥೆಯೂ ಸಹ ಇಲ್ಲದೆ ಇರುವುದರಿಂದ ಗ್ರಾಮಕ್ಕೆ ಬರುವ ಎಲ್ಲ ಸಾರಿಗೆ ವಾಹನಗಳು ಹಾಗೂ ಇತರೆ ಖಾಸಗಿ ವಾಹನಗಳು ಸಹ ಶಾಲೆಯ ಮೈದಾನದಲ್ಲೇ ನಿಲ್ದಾಣ ಮಾಡುವುದರ ಜೊತೆಗೆ ಅಲ್ಲೇ ರಿವರ್ಸ್ ತೆಗೆದುಕೊಂಡು ಹೋಗುವ ಅನಿವಾರ್ಯತೆ ಇದೆ.
ಬಸ್ ಹಾಗೂ ಇತರೆ ಖಾಸಗಿ ವಾಹನಗಳು ನಮ್ಮ ಗ್ರಾಮದ ಶಾಲೆಯ ಸಣ್ಣ ಮೈದಾನ ಬಿಟ್ಟರೆ ಬೇರೆ ಯಾವುದೇ ರೀತಿಯ ವ್ಯವಸ್ಥೆ ಇರುವುದಿಲ್ಲ. ಹಾಗೆಯೇ ಈ ಶಾಲೆಯ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಲು ಸಹ ಸಾಧ್ಯವಿಲ್ಲ. ಹಾಗಾಗಿ ಈ ಶಾಲೆಯ ಮುಂದೆ ಇರುವ ಮೈದಾನದಲ್ಲಿ ಶಾಲೆಯ ವಿದ್ಯಾರ್ಥಿಗಳು ಆಟವಾಡಲು ಸಹ ತೊಂದರೆಯಾಗುತ್ತಿದೆ. ಮಕ್ಕಳು ಭಯದ ವಾತಾವರಣದಲ್ಲಿ ಶಾಲೆಗೆ ಬರುವಂತಹ ಸ್ಥಿತಿಯ ಜೊತೆಗೆ ಮಕ್ಕಳಿಗೆ ಯಾವ ಸಮಯದಲ್ಲಿಯಾದರು ಅಪಾಯ ಎದುರಾಗಬಹುದು. ಈ ಹಿಂದೆ ಗ್ರಾಮದ ರೈತರಾದ ಬಕಾರಿ ಮನೆತನದವರು ಸರ್ಕಾರಿ ಶಾಲೆಗೆ 20 ಗುಂಟೆ ಜಮೀನನ್ನು ದಾನವಾಗಿ ನೀಡಿದ್ದು ಇರುತ್ತದೆ. ಹಾಗಾಗಿ ಶಾಲೆಗಾಗಿ ದಾನವಾಗಿ ಜಮೀನು ನೀಡಿರುವುದರಿಂದ ಈ ಹೊಲದಲ್ಲಿ ನಮ್ಮ ಗ್ರಾಮಕ್ಕೆ ವರ್ಗದ ಕೊಠಡಿಗಳನ್ನು ಮಂಜೂರಾತಿ ಮಾಡುವುದರ ಮೂಲಕ ವಿದ್ಯಾರ್ಥಿಗಳ ಹಿತರಕ್ಷಣೆ ಕಾಪಾಡಬೆಕೆಂದು ಸಂಕಧಾಳ ಗ್ರಾಮದ ಹಿರಿಯರಾದ ಪಕ್ಕೀರಯ್ಯ ಹಿರೇಮಠ, ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ದುರಗಪ್ಪ ಹರಿಜನ, ನೀಲನಗೌಡ ಪಾಟೀಲ, ಹಾಲಪ್ಪ ಸೂರಣಗಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ರವಿ ಹರಿಜನ, ಶರೀಫ್ ಹರಿಜನ ಹಾಗೂ ಗ್ರಾಮದ ವಕೀಲರಾದ ಮೈಲಾರ್ಪ ದುರಗಪ್ಪ ಹರಿಜನ ಸೇರಿದಂತೆ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 