ಲೋಕದರ್ಶನ ವರದಿ
ಕಾರವಾರ 8: ನಗರದ ಸಮಸ್ಯೆಗಳನ್ನು ನಗರಸಭೆಯ ಪೌರಾಯುಕ್ತರಿಗೆ ನಗರಸಭೆಯ ಬಿಜೆಪಿ ಸದಸ್ಯರು ಬುಧುವಾರ ನಿವೇದಿಸಿದರಲ್ಲದೇ ಲಿಖಿತ ಮನವಿ ಸಹ ನೀಡಿದರು.
ನಗರದ ಕೆಲವು ಭಾಗಗಳಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು ಜನರಿಗೆ ದೈನಂದಿನ ಜೀವನ ನಡೆಸಲು ಅಸಾಧ್ಯವಾಗಿರುತ್ತದೆ. ನಗರಸಭೆ ಪೂರೈಸುವ ನೀರು ಶುದ್ಧವಾಗಿರದೇ ಕುಡಿಯಲು ಯೋಗ್ಯವಾಗಿಲ್ಲ. 31 ವಾಡರ್ಿನಲ್ಲಿಯೂ ಗಟಾರ ಕ್ಲಿನಿಂಗ್ ಮಾಡಿಲ್ಲ. ಹಾಗೆ ಬಿಟ್ಟರೆ ಮಳೆಗಾಲದಲ್ಲಿ ತೊಂದರೆಗಳು ಉಲ್ಬಣಸಬಹುದು. ಅಲ್ಲದೇ ಯೂಜಿಡಿ ಕಾಮಗಾರಿಯೂ ಕೆಲವು ಕಡೆ ಅಸಮಪರ್ಕವಾಗಿದ್ದು, ಸರಿಯಾಗಿ ನೀರು ಹರಿಯುತ್ತಿಲ್ಲ. ರಸ್ತೆಯ ಮೇಲೆ ಕೊಳಚೆ ಹರಿಗು ದುರ್ಗಂಧ ಹಬ್ಬುತ್ತಿದೆ. ಸಾರ್ವಜನರಿಗೆ ಕಿರಿ-ಕಿರಿ ಉಂಟಾಗುತ್ತದೆ. ಈಗಾಗಲೇ ಈ ಪರಿಸ್ಥಿತಿಯಿದ್ದು, ಮುಂದೇ ಮಳೆಗಾಲ ಬಂದರೆ ಪರಿಸ್ಥಿತಿ ಹದಗೆಡಲಿದೆ. ಆದ್ದರಿಂದ ಮಹನೀಯರು ತಕ್ಷಣ ಇದಕ್ಕೆ ಸ್ಪಂದಿಸಿ ಕ್ರಮವಹಿಸಿ ವ್ಯವಸ್ಥೆಯನ್ನು ಸರಿಪಡಿಸಬೇಕಾಗಿ ನಗರಸಭೆಯ ಬಿಜೆಪಿ ಸದಸ್ಯರು ಹಾಗೂ ಕಾರವಾರ ನಗರದ ಬಿಜೆಪಿ ಘಟಕ ಆಗ್ರಹಿಸಿತು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಕಾರವಾರ ನಗರಾಧ್ಯಕ್ಷ ಮನೋಜ ಭಟ್, ನಗರಸಭೆ ಸದಸ್ಯರಾದ ಡಾ. ನಿತಿನ್ಪಿಕಳೆ, ರವಿರಾಜ ಅಂಕೋಲೆಕರ, ಉಲ್ಲಾಸ ಕೇಣಿ, ರೋಷನಿ ಮಾಳಸೆಕರ, ಅನುಶ್ರೀ ಕುಬಡೆ, ಪ್ರಕಾಶ ನಾಯ್ಕ, ಸುಜಾತಾ ತಾಮಸೆ, ಹನುಮಂತ ತಳವಾರ, ಪ್ರಧಾನ ಕಾರ್ಯದಶರ್ಿ ನಾಗೇಶ ಕುರಡೇಕರ, ಸಂದೇಶ ಶೆಟ್ಟಿ ಉಪಸ್ಥಿತರಿದ್ದರು.