ಪತ್ರಿಕಾ ಸ್ವಾತಂತ್ರ್ಯ ರಕ್ಷಿಸಿ : ಪತ್ರಕರ್ತರ ಮೇಲಿನ ಪ್ರಕರಣ ಕೈ ಬಿಡಲು ಜಿಲ್ಲಾಧಿಕಾರಿಗಳಿಗೆ ಮನವಿ

ಕಾರವಾರ 7: ಪರೀಕ್ಷೆಯ ಸಮಯದಲ್ಲಿ ನಕಲು ನಡೆಯುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವರದಿ ಮಾಡಲು ಜ. 5 ರಂದು ಕಾಲೇಜ್ಗೆ ತೆರಳಿದ್ದ ಪತ್ರಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಕಾಲೇಜ್ಗೆ ಅಕ್ರಮ ಪ್ರವೇಶ ಮಾಡಿ, ಪರೀಕ್ಷೆ ನಡೆಯುವ ಸ್ಥಳದ ವಿಡಿಯೋ ಚಿತ್ರೀಕರಣ ಮಾಡಿರುವ ಬಗೆಗೆ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಈ ಪ್ರಕರಣದಲ್ಲಿ ನಿಜಾಂಶವನ್ನು ಮರೆಮಾಚಲಾಗಿದೆ. ಈ ಸಂಬಂಧ ದಾಖಲಾಗಿರುವ ಪ್ರಕರಣವನ್ನು ಕೈಬಿಡುವಂತೆ ಕೋರಿ ಜಿಲ್ಲಾಧಿಕಾರಿ ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಸೋಮವಾರ ಮನವಿ ಸಲ್ಲಿಸಿದರು. 

ಉತ್ತರ ಕನ್ನಡ ಜಿಲ್ಲಾ ಕೇಂದ್ರವಾದ ಕಾರವಾರದಲ್ಲಿ  ಪತ್ರಕರ್ತರಾಗಿರುವವರು  ಸಾಕಷ್ಟು ವಸ್ತುನಿಷ್ಠ ವರದಿಗಳ ಮೂಲಕ ಇಲಾಖೆಗಳ, ಸಕರ್ಾರದ ಗಮನ ಸೆಳೆಯುವ ಕೆಲಸವನ್ನು ಜವಾಬ್ದಾರಿಯುತವಾಗಿ ಮಾಡಿಕೊಂಡು ಬಂದಿದ್ದೇವೆ. ಜನರ ಸಮಸ್ಯೆಗಳನ್ನು ಬಿಂಬಿಸುವ, ಇಲಾಖೆಗಳ ಅಕ್ರಮ ಬಯಲಿಗೆಳೆಯುವ ವರದಿಗಳ ಜೊತೆಗೆ ಅಧಿಕಾರಿಗಳು, ಜನರು ಮಾಡಿದ ಒಳ್ಳೆಯ ಕಾರ್ಯಗಳನ್ನೂ ವರದಿ ಮಾಡುವ ಮೂಲಕ ಪತ್ರಿಕಾ ಧರ್ಮವನ್ನು ನಿಭಾಯಿಸುತ್ತಿದ್ದೇವೆ. ಆದರೆ, ಇತ್ತೀಚೆಗೆ ಪತ್ರಿಕಾ ಸ್ವಾತಂತ್ರೃಕ್ಕೆ ಧಕ್ಕೆಯಾಗುವಂತಹ ಹಲವು ಘಟನೆಗಳು ನಡೆಯುತ್ತಿವೆ. ಪತ್ರಕರ್ತರು ನಿರಾತಂಕವಾಗಿ ಕರ್ತವ್ಯ ನಿರ್ವಹಿಸಲು ಕಷ್ಟದ ವಾತಾವರಣ ನಿಮರ್ಾಣವಾಗಿರುವುದು ಬೇಸರದ ಸಂಗತಿ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಹೇಳುವ ಮಾಧ್ಯಮಗಳನ್ನು ನಿಯಂತ್ರಿಸಲು ಕೆಲ ಇಲಾಖೆಗಳ ನೌಕರರು  ಸುಳ್ಳು ಪ್ರಕರಣಗಳನ್ನು  ದಾಖಲಿಸುತ್ತಿರುವುದು  ಖಂಡನೀಯ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯ ಮೊದಲ ಮಹಡಿಯಲ್ಲಿರುವ ಸವರ್ೇ ವಿಭಾಗದ ಹೊರಗೆ ಪತ್ರಕರ್ತರು ಸುದ್ದಿ ಸಂಗ್ರಹಿಸಲು ಅವಕಾಶವಿಲ್ಲ. ಜಿಲ್ಲಾಧಿಕಾರಿಗಳ ಪೂವರ್ಾನುಮತಿ ಪಡೆಯಬೇಕು ಎಂದು ನಾಮಫಲಕ ಅಳವಡಿಸಲಾಗಿದೆ. ಈಗ ಸಕರ್ಾರಿ ಎಂಜಿನಿಯರಿಂಗ್ ಕಾಲೇಜಿಗೆ ವರದಿಗಾಗಿ ತೆರಳಿದ ಪತ್ರಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ಇಂಥ ಘಟನೆಗಳು ಮರುಕಳಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. 

ಬೇಡಿಕೆಗಳು: 

ಪತ್ರಕರ್ತರ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳನ್ನು ತಕ್ಷಣ ವಜಾ ಮಾಡಬೇಕು. ಪತ್ರಕರ್ತರು ಎಲ್ಲ ಕಚೇರಿಗಳಿಗೆ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ವರದಿ ಮಾಡಲು ತೆರಳುವುದು ಕಷ್ಟವಾಗುತ್ತದೆ. ಇದರಿಂದ ಎಲ್ಲೆಡೆ ಕಾನೂನಿನಂತೆ ಮುಕ್ತವಾಗಿ ಮಾಹಿತಿ ಸಂಗ್ರಹಿಸಲು ಅವಕಾಶ ನೀಡಬೇಕು. ಸಾರ್ವಜನಿಕರ ಹಿತಕ್ಕೆ ಧಕ್ಕೆಯುಂಟುಮಾಡುವ, ಪತ್ರಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವ, ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ವಹಿಸಬೇಕು ಎಂಬ ಬೇಡಿಕೆಗಳನ್ನು ಸಲ್ಲಿಸಲಾಗಿದೆ.  

ಎಸ್ಪಿ ಅವರಿಗೆ ಸಹ ಮನವಿ ಅರ್ಪಣೆ :

ಕಾರವಾರದ ಮಾಜಾಳಿಯಲ್ಲಿರುವ ಸಕರ್ಾರಿ ಇಂಜಿನಿಯರಿಂಗ್ ಕಾಲೇಜ್ನಲ್ಲಿ  ಮೊದಲ ಸೆಮಿಸ್ಟರ್ ವಿದ್ಯಾಥರ್ಿಗಳಿಗೆ ವಿಷಯವನ್ನು ಅದಲು ಬದಲು ಮಾಡಿ ಬೋಧಿಸಿದ್ದರಿಂದ ತೊಂದರೆ ಉಂಟಾಗಿದೆ. ಇತರ ಸೆಮಿಸ್ಟರ್ಗಳಿಗೆ ಪರೀಕ್ಷೆ ನಡೆಯುತ್ತಿದ್ದು, ಸಾಮೂಹಿಕ ನಕಲು ನಡೆಯುತ್ತಿದೆ ಎಂಬ ಮಾಹಿತಿ ಇತ್ತು. 

ಈ ಕುರಿತು ವರದಿ ಮಾಡಲು ದೃಶ್ಯ ಮಾಧ್ಯಮವೊಂದರ  ವರದಿಗಾರ ಸುನೀಲ ಹಣಕೋಣ, ಮುದ್ರಣ ಮಾಧ್ಯಮ ವರದಿಗಾರ ಗುರುಪ್ರಸಾದ ಹೆಗಡೆ ಹಾಗೂ ಕ್ಯಾಮರಾಮೆನ್ ಮಾರುತಿ ಅವರು ಜ. 5 ರಂದು ಕಾಲೇಜ್ಗೆ ತೆರಳಿದ್ದರು ಎಂದು ಎಸ್ಪಿ ಅವರಿಗೆ ಪತ್ರಕರ್ತರು ಸೋಮವಾರ ಭೇಟಿಯಾಗಿ ಘಟನೆಯನ್ನು ವಿವರಿಸಿದ್ದಾರೆ. 

ಸಕರ್ಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿರುವುದುರಿಂದ ಪ್ರಾಂಶುಪಾಲರನ್ನು ಭೇಟಿಯಾಗಿ ಅನುಮತಿ ಪಡೆಯಬೇಕಿತ್ತು. ಹಾಗಾಗಿ ಪ್ರಾಂಶುಪಾಲರ ಕೊಠಡಿಯ ಬಗೆಗೆ ಕಾಲೇಜ್ ಆಡಳಿತ ಕಚೇರಿಯ ಹೊರಗೆ ನಿಂತು ವಿಚಾರಿಸುತ್ತಿರುವಾಗ ಆಗಮಿಸಿದ ಪ್ರಭಾರ ಪ್ರಿನ್ಸಿಪಾಲರು ಎಂಬುವವರ ಬಳಿ ಮಾಹಿತಿ ನೀಡುವಂತೆ ಪತ್ರಕರ್ತರು ಕೇಳಿದ್ದಾರೆ. ಆದರೆ, ಅದಕ್ಕೆ ನಿರಾಕರಿಸಿದ ಅವರು, ಪ್ರಾಂಶುಪಾಲರು ಕಾಲೇಜ್ನಲ್ಲಿಲ್ಲ. ಅವರು ಬಂದ ನಂತರ ಭೇಟಿಯಾಗಿ ಮಾಹಿತಿ ಪಡೆಯಿರಿ ಎಂದು ಸೂಚಿಸಿದರು. 

ಆದರೆ, ಅದೇ ದಿನ ಸಂಜೆ ಮೂವರು ಪತ್ರಕರ್ತರ ವಿರುದ್ಧ ಕಾಲೇಜ್ಗೆ ಅಕ್ರಮ ಪ್ರವೇಶ, ಪರೀಕ್ಷೆ ನಡೆಯುವ ಸಮಯದಲ್ಲಿ ಶೂಟಿಂಗ್ ಸೇರಿ ವಿವಿಧ ಸುಳ್ಳು ಆರೋಪಗಳನ್ನು ಪ್ರಕರಣಗಳನ್ನು ಚಿತ್ತಾಕುಲಾ ಠಾಣೆಯಲ್ಲಿ ದಾಖಲಿಸಿದ್ದಾರೆ. 

ಕಾಲೇಜ್ನ ಕಟ್ಟಡದ ಒಳಗೇ ಪ್ರವೇಶಿಸದ ಪತ್ರಕರ್ತರ ವಿರುದ್ಧ ಸುಳ್ಳು ಆರೋಪಗಳನ್ನು ದೂರು ನೀಡಿದವರು ಹೊರಿಸಿದ್ದಾರೆ. ಇದನ್ನು ಸಮಸ್ತ ಪತ್ರಕರ್ತರು ಖಂಡಿಸುತ್ತೇವೆ. ಪತ್ರಿಕಾ ಸ್ವಾತಂತ್ರೃಕ್ಕೆ ಧಕ್ಕೆಯುಂಟುಮಾಡುವ. ಸುಳ್ಳು ಆರೋಪ ಹೊರಿಸಿ ಪತ್ರಕರ್ತರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ತಂತ್ರ ಇದಾಗಿದೆ ಎಂದು ಎಸ್ಪಿ ಅವರ ಗಮನ ಸೆಳೆಯಲಾಯಿತು. ಪಾರದರ್ಶಕ, ತಾರತಮ್ಯರಹಿತ ಹಾಗೂ ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸುವ ತಮ್ಮ ಇಲಾಖೆಯ ಮುಖ್ಯಸ್ಥರಾದ ತಾವು ಈ ಕುರಿತು ಪರಿಶೀಲನೆ ನಡೆಸಬೇಕು. ಪತ್ರಕರ್ತರ ಮೇಲಿನ ಸುಳ್ಳು ಪ್ರಕರಣವನ್ನು ವಜಾ ಮಾಡಬೇಕು.

ಜನಪರ, ಕಾನೂನು ನಿಷ್ಠ ಅಧಿಕಾರಿಯಾಗಿರುವ ತಾವು ನ್ಯಾಯವನ್ನು ಕಾಪಾಡಬೇಕೆಂದು ವಿನಂತಿಸಲಾಗಿದೆ. ಮನವಿ ನೀಡುವಾಗ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಬಿ.ಹರಿಕಾಂತ, ವಸಂತಕುಮಾರ್ ಕತಗಾಲ, ಸುಭಾಷ್ ದೂಪದೊಂಡ,ಸಂದೀಪ್ ಸಾಗರ,ಕಿಶನ್ ಗುರವ್ ಸೇರಿದಂತೆ ಪತ್ರಕರ್ತರು ಉಪಸ್ಥಿತರಿದ್ದರು.