ಕ.ವಿ.ವ.ಸಂಘದಲ್ಲಿ ಗಣರಾಜ್ಯೋತ್ಸವ ಆಚರಣೆ
ಧಾರವಾಡ 26: ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ 76 ನೇ ಗಣರಾಜ್ಯೋತ್ಸವ ಅಂಗವಾಗಿ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಧ್ವಜಾರೋಹಣ ನೇರವೇರಿಸಿ ಮಾತನಾಡಿ, ಸಮಾಜ ಕಲ್ಯಾಣವೇ ಪ್ರಜಾಪ್ರಭುತ್ವದ ಗುರಿಯಾಗಿದೆ. ಪ್ರಜಾಪ್ರಭುತ್ವದ ಮೂಲ ಸೂತ್ರ ಸಮಾನತೆ. ಜನತೆಯಲ್ಲಿ ಸಹೋದರತ್ವ ಭಾವನೆಯನ್ನು ಪೋಷಿಸುವುದು ಪ್ರಜಾಪ್ರಭುತ್ವದ ಉದಾತ್ತ ಧ್ಯೇಯ. ಪ್ರಜಾಪ್ರಭುತ್ವದ ಯಶಸ್ಸು ಪ್ರಜೆಗಳಾದ ನಮ್ಮ ಕೈಯಲ್ಲಿದ್ದು, ಪ್ರಜಾಪ್ರಭುತ್ವದ ಮೌಲ್ಯ ಸಿದ್ಧಾಂತಗಳನ್ನು ನಾವು ಇದು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.
ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಮಾತನಾಡಿ, ಸರ್ವತಂತ್ರ ಸ್ವತಂತ್ರ ಪ್ರಜಾಸತಾತ್ಮಕ ಗಣರಾಜ್ಯದ ಪ್ರಜೆಗಳಾದ ನಾವು ತಾಳ್ಮೆ, ಸಹಾನುಭೂತಿ, ಸಹಕಾರ ಮನೋಭಾವನೆ ಉಂಟಾದಲ್ಲಿ ಮಾತ್ರ ಪ್ರಜಾಪ್ರಬುತ್ವ ಪದ್ಧತಿ ಯಶಸ್ವಿಯಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ನಿರಂಕುಶಕ್ಕೆ ಅವಕಾಶವಿಲ್ಲ. ಪ್ರಜೆಗಳೇ ಪ್ರಭುಗಳು. ಪ್ರಜಾಪ್ರಭುತ್ವ ಯಾವುದೇ ವ್ಯಕ್ತಿ ಅಥವಾ ವರ್ಗದ ಹಿತಕ್ಕೆ ಶ್ರಮಿಸುವುದಿಲ್ಲ. ಸರ್ವರಿಗೂ ಸಂವಿಧಾನಾತ್ಮಕ ರಕ್ಷಣೆ ಇದೆ. ಭಾರತದ ಪ್ರಜಾಪ್ರಭುತ್ವ ಜಗತ್ತಿನ ಎಲ್ಲಾ ಪ್ರಜಾಪ್ರಭುತ್ವಕ್ಕಿಂತಲೂ ಶ್ರೇಷ್ಠವಾದುದು. ಸಾರ್ವಭೌಮರಾದರು ಪ್ರಜಾಪ್ರಭುತ್ವದ ಯಶಸ್ಸಿಗೆ ಕಟಿಬದ್ಧರಾಗಿರಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ರಾ.ಹ. ದೇಶಪಾಂಡೆ ಮತ್ತು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಭಾವಚಿತ್ರಕ್ಕೆ ಪುಷ್ಸಮರ್ಿಸಿ ಗೌರವ ಸಲ್ಲಿಸುವುದರೊಂದಿಗೆ ಸ್ಮರಿಸಲಾಯಿತು. ಶಂಕರ ಹಲಗತ್ತಿ ಕಾರ್ಯಕ್ರಮ ನಿರ್ವಹಿಸಿದರು. ಸತೀಶ ತುರಮರಿ, ಶಂಕರ ಕುಂಬಿ, ಡಾ. ಸಂಜೀವ ಕುಲಕರ್ಣಿ, ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ವಿಶ್ವೇಶ್ವರಿ ಬ. ಹಿರೇಮಠ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ನಂದಾ ಗುಳೇದಗುಡ್ಡ, ಆಶಾ ಸೈಯ್ಯದ, ಜಯಶ್ರೀ ಸವಣೂರ, ನಾಗಭೂಷಣ ಹಿರೇಮಠ, ಗುರು ಕಲ್ಮಠ, ಸಂಜನಾ, ಸಾರ್ವಜನಿಕರು, ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.