ರೇಣುಕಾಚಾರ್ಯರು ಮಾನವ ಕುಲಕ್ಕೆ ಮಾನವಿತೆಯ ಸಂದೇಶ ನೀಡಿದ ಮೊದಲಿಗರು : ಶ್ರೀಶೈಲ್ ಜಗದ್ಗುರು
ಮಾಂಜರಿ 13 : ಮಾನವ ಕುಲಕ್ಕೆ ಮಾನವಿತೆಯ ಸಂದೇಶವನ್ನು ಕೋಡುವುದರ ಮುಖಾಂತರ, ಈ ಜಗತ್ತಿಗೆ ಮಾನವಿತೆಯ ಮಾರ್ಗದಲ್ಲಿ ನಡೆಯಲು ಮೊದಲು ಹೇಳಿದ ವೀರಶೈವ ಧರ್ಮದ ಮಹಾನ್ ಶರಣ ಜಗದ್ಗುರು ರೇಣುಕಾಚಾರ್ಯರು ಎಂದು ಶ್ರೀಶೈಲ ಪೀಠದ ಜಗದ್ಗುರುಗಳು ಹಾಗೂ ಯಡೂರಿನ ಕಾಡ ಸಿದ್ದೇಶ್ವರ ಸಂಸ್ಥಾನ ಮಠ ಮತ್ತು ವೀರಭದ್ರ ದೇವಸ್ಥಾನದ ಧರ್ಮಾಧಿಕಾರಿಗಳು ಡಾ ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಹೇಳಿದರು. ಬುಧವಾರ ರಾತ್ರಿ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ಕಾಡ ಸಿದ್ದೇಶ್ವರ ಸಂಸ್ಥಾನ ಮಠ ಮತ್ತು ವೀರಭದ್ರ ದೇವಸ್ಥಾನ ಮತ್ತು ಜಂಗಂ ಸಮಾಜದವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ನಾವೆಲ್ಲರೂ ಭಾರತೀಯ ಮಕ್ಕಳು, ಯಾವುದೇ ಜಾತಿ ಭೇದವಿಲ್ಲದೇ, ಸಮಾಜದ ಎಲ್ಲರನ್ನು ಪ್ರೀತಿಸಿ, ಮಹನಿಯರ ತತ್ವಾದರ್ಶ ಮತ್ತು ಧಾರ್ಮಿಕ ಶಿಕ್ಷಣವನ್ನು ನೀಡಬೇಕು. ಸಮಾಜದಲ್ಲಿ ಗಂಡು ಹೆಣ್ಣಿಗೆ ಸಮಾನ ಸ್ಥಾನ ನೀಡಬೇಕು. ಮಕ್ಕಳಿಗೆ ಸರಿಯಾದ ಸಂಸ್ಕಾರ ಹೇಳಿಕೊಡಬೇಕು. ತಾಯಿಯಾಗುವ ಪ್ರತಿಯೊಬ್ಬ ಹೆಣ್ಣು ಪ್ರಸವಪೂರ್ವ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಮಗುವಿನ ಮೇಲೆ ಉತ್ತಮ ಸಂಸ್ಕಾರದ ಪ್ರಭಾವ ಉಂಟಾಗುತ್ತದೆ ಎಂದು ಹೇಳಿದರು. ಜಮಖಂಡಿಯ ಕಲ್ಯಾಣ ಮಠದ ಗೌರಿಶಂಕರ್ ಶಿವಾಚಾರ್ಯ ಸ್ವಾಮೀಜಿಗಳು ರೇಣುಕಾಚಾರ್ಯರ ಕುರಿತು ವಿಶೇಷ ಉಪನ್ಯಾಸ ನೀಡಿ ರೇಣುಕಾಚಾರ್ಯರ ಬಗ್ಗೆ ಮಾಹಿತಿ ಹುಡುಕುತ್ತ ಹೋದರೆ, ಆಂದ್ರ ದೇಶದ ಕದ್ರಿಗಿಯಲ್ಲಿ ಜನಿಸಿದರು ಎಂದು ತಿಳಿಯುತ್ತದೆ. ಭೂ ಲೋಕದಲ್ಲಿ ಅಧರ್ಮ ಅಶಾಂತಿ ಸ್ಥಾಪನೆಯಾದಾಗ ಅದನ್ನ ಹೋಗಲಾಡಿಸಿ ಸದರ್ಮವನ್ನ ಹುಟ್ಟುಹಾಕಲು ಜನಿಸಿದ ಮಹಾನ್ ಶರಣ, ಶೈವ ಶ್ರೇಷ್ಠತೆಯ ಮೇಲ್ಮಟ್ಟಕ್ಕೆ ತರಲು ಶ್ರಮಿಸಿದ ಯವನ್ನು ಜಗದ್ಗುರು ರೇಣುಕಾಚಾರ್ಯರ ಜೀವನ ಮತ್ತು ತತ್ವ ಆದರ್ಶಗಳು ಶಿವಪುರಾಣ, ಬಸವಪುರಾಣ, ಮತ್ತು ಇತರ ಶೈವ ಪುರಾಣಗಳಲ್ಲಿ ವಿವರಿಸಲಾಗಿದೆ ಈ ವೇಳೆ ಮಲ್ಲಪ್ಪ ಸಿಂಧೂರ್ ಆಡವಯ್ಯ ಅರಳಿಕಟ್ಟಿಮಠ ಮುತ್ತುರಾಜ್ ಮಠದ ಮಹಾದೇವ ಲಕ್ಕಪ್ಪಗೊಳ್ ಮಲ್ಲಯ್ಯ ಶಾಸ್ತ್ರಿ ಜಡೆ ಮಹಾಲಿಂಗ ಶಾಸ್ತ್ರಿ ಭೀರಂಗಿ ಮನೋಹರ್ ಪುಟಾಣಿ ಶೈಲ್ ಶಾಸ್ತ್ರಿ ಸಂತೋಷ್ ಸ್ವಾಮಿ ಹಾಗೂ ಇನ್ನಿತರರು ಹಾಜರಿದ್ದರು ಶ್ರೀಶೈಲ ಪೀಠದ ಜಗದ್ಗುರುಗಳ ಅಮೃತ ಹಸ್ತದಿಂದ ರೇಣುಕಾಚಾರ್ಯರ ಫೋಟೋ ಮತ್ತು ಪ್ರತಿಮೆಗೆ ಪೂಜೆಯನ್ನು ಸಲ್ಲಿಸಲಾಯಿತು