ರೇಣುಕಾಚಾರ್ಯ ಜಯಂತ್ಯುತ್ಸವ: ಶರಣರ ತತ್ವ ಆದರ್ಶಗಳು ಎಲ್ಲರಿಗೂ ಮಾದರಿ: ತಿಪ್ಪೇರುದ್ರಸ್ವಾಮಿ
ಗಂಗಾವತಿ 12: ಇಲ್ಲಿಯ ಬಸವಣ್ಣ ಸರ್ಕಲ್ ಹತ್ತಿರವಿರುವ ಗುಂಜಳ್ಳಿ ಓಣಿಯಲ್ಲಿರುವ ಪಂಚಾಚಾರ್ಯರ ದೇವಸ್ಥಾನದಲ್ಲಿ ಜಂಗಮ ಸಮಾಜದ ವತಿಯಿಂದ ರೇಣುಕಾಚಾರ್ಯ ಜಯಂತಿ ಕಾಯಕ್ರಮ ಬುಧವಾರ ಅತ್ಯಂತ ಸರಳವಾಗಿ ಮತ್ತು ಸಂಭ್ರಮದಿಂದ ಜರುಗಿತು. ಕಾರ್ಯಕ್ರಮ ಉದ್ದೇಶಿಸಿ. ಮಾಜಿ ಕಾಡ ಅಧ್ಯಕ್ಷ ಬಿ.ಹೆಚ್.ಎಂ ತಿಪ್ಪೇರುದ್ರಸ್ವಾಮಿ ಮಾತನಾಡಿ, ಶರಣರು ಹಾಗೂ ಮಹಾತ್ಮರು ಪ್ರತಿಯೊಬ್ಬ ಮಾನವ ಕಲ್ಯಾಣಕ್ಕಾಗಿ ಉತ್ತಮ ಸಂದೇಶ ನೀಡಿದ್ದಾರೆ. ಪ್ರತಿಯೊಬ್ಬರೂ ಜಾತಿ ಮತ ಪಂಥ ಎನ್ನದೆ ಎಲ್ಲರೂ ಒಗ್ಗೂಡಿ ಮಹಾತ್ಮರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಮುಂದಿನ ಪೀಳಿಗೆಗೆ ಪರಿಚ ಯಿಸುವ ಪ್ರಯತ್ನ ಸಾಗಲಿ ಎಂದು ತಿಳಿಸಿದರು. ಮಾನವ ಕುಲಕ್ಕೆ ಜಯವಾಗಲಿ ಮಾನವನಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶವನ್ನು ಸಾರಿದ ಜಗದ್ಗುರುಗಳು ಯಾರಾದರೂ ಇದ್ದರೆ ಅದು ರೇಣುಕಾಚಾರ್ಯರು ಎಂದು ಈ ಸಂದರ್ಭದಲ್ಲಿ ಹೇಳಿದರು.ಸರಳವಾಗಿ ನಡೆದ ಜಗದ್ಗುರು ರೇಣುಕಾಚಾರ್ಯರ ಜಯಂತಿಯಲ್ಲಿ ಭಾಗವಹಿಸಿದ ಗಂಗಾವತಿ ಕ್ಷೇತ್ರದ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಈ ಸಂದರ್ಭದಲ್ಲಿ ಮಾತನಾಡಿ ಮಾನವ ಕುಲಕ್ಕೆ ಒಳಿತನ್ನು ಸದಾ ಶರಣರು ಬಯಸುತ್ತಾ ಬಂದಿದ್ದಾರೆ, ನಾವು ನೀವೆಲ್ಲರೂ ಶರಣರ ಆದರ್ಶಗಳನ್ನು ಪಾಲಿಸಿಕೊಂಡು ನಿಜ ಜೀವನದಲ್ಲಿ ಯಾವ ಜಾತಿ-ಭೇದ, ಮತ, ಪಂಥವನ್ನು ಮಾಡದೆ ಎಲ್ಲರೂ ಮಾನವರಾಗಿ ಜೀವಿಸಬೇಕೆಂದು ಮತ್ತು ಒಬ್ಬರಿಗೊಬ್ಬರು ಸಹಾಯ, ಸಹಕಾರದಿಂದ ಜೀವನ ಮುನ್ನಡೆಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಉಮಾಮಹೇಶ್ವರ ಸ್ವಾಮಿ, ಸಂಗಯ್ಯ ಸ್ವಾಮಿ ಸಂಶಿಮಠ,ಸಜ್ಜಲಶ್ರೀ ಹಳೆಯ ವಿಧ್ಯಾರ್ಥಿಗಳ ಬಳಗ ಸಂಸ್ಥಾಪಕ ಕಾರ್ಯದರ್ಶಿ ಎಸ್.ಬಿ.ಹಿರೇಮಠ, ಶಾಂತಮಲ್ಲಯ್ಯಸ್ವಾಮಿ, ವಿರುಪಾಕ್ಷಯ್ಯಸ್ವಾಮಿ ಹೆಚ್.ಎಂ.ಸಂಕ್ರಿ ಸಂಗಯ್ಯ,ಮಾರ್ಕಡಯ್ಯಸ್ವಾಮಿ,ಸುಮಂಗಲ ಸಂಶಿಮಠ,ಆದಯ್ಯಸ್ವಾಮಿ ಹಿರೇಮಠ, ಸಹನಾ ಹಿರೇಮಠ,ಇತರರು ಉಪಸ್ಥಿತರಿದ್ದರು.