ಕಾರವಾರ28 : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕವಯತ್ರಿ ರೇಣುಕಾ ರಮಾನಂದ ಅವರ ಮೀನುಪೇಟೆಯ ತಿರುವು ಕವನ ಸಂಕಲನಕ್ಕೆ ಕಲಬುಗರ್ಿ ಜಿಲ್ಲೆಯ ಸೇಡಂ ತಾಲೂಕಿನ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಇತ್ತೀಚೆಗೆ ರಾಜ್ಯದ ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.
ಮಹಿಪಾಲರೆಡ್ಡಿ ಮುನ್ನೂರು ಮತ್ತು ಅವರ ಶ್ರೀಮತಿ ರತ್ನಕಲಾ ಮುನ್ನೂರು ಅವರು ತಮ್ಮ ಅಮ್ಮ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರು ಅವರ ಹೆಸರಿನಲ್ಲಿ ಕಳೆದ ಹದಿನೆಂಟು ವರ್ಷದಿಂದ ಐದು ಸಾಹಿತ್ಯ ಕೃತಿಗಳಿಗೆ ಕೊಡುತ್ತ ಬಂದಿರುವ ರಾಜ್ಯಮಟ್ಟದ ಈ ಪ್ರಶಸ್ತಿಗೆ ಈ ಬಾರಿ ಬಂದ 440 ಪುಸ್ತಕಗಳಲ್ಲಿ ನಟ ಪ್ರಕಾಶ್ ರೈ, ವಿಕ್ರಮ್ ವಿಸಾಜಿ, ರೇಣುಕಾ ರಮಾನಂದ, ಯ ರು ಪಾಟೀಲ, ಶಶಿಕಾಂತ ದೇಸಾಯಿ ಹೀಗೆ ಐವರ ಪುಸ್ತಕಗಳನ್ನು ಆಯ್ಕೆ ಮಾಡಲಾಗಿತ್ತು.
ಮಾಜಿ ಸಚಿವ ರಾಮಲಿಂಗಾರೆಡ್ಡಿ, ಹಾಗೂ ಡಾ.ಶರಣಪ್ರಕಾಶ ಪಾಟೀಲ,ನಾಗರೆಡ್ಡಿ ಪಾಟೀಲ, ಗುಲ್ಬಗರ್ಾ ವಿ,ವಿ,ಯ ಎಚ್ ಟಿ ಪೋತೆ, ಪ್ರಕಾಶ್ ರೈ ಮುಂತಾದವರು ಪ್ರಶಸ್ತಿ ಪ್ರಧಾನವನ್ನು ಮಾಡಿ ಮಾತನಾಡಿದರು. ಪ್ರಶಸ್ತಿ ಎರಡು ಸ್ಮರಣಿಕೆ, ಐದು ಸಾವಿರ ನಗದು ಮತ್ತು ತೊಗರಿ ಕಣಜ ಎಂದು ಪ್ರಖ್ಯಾತಿ ಹೊಂದಿದ ಕಲಬುಗರ್ಿ ನೆಲದ ಎರಡು ಕೇಜಿ ತೊಗರಿಬೇಳೆಯನ್ನು ಹೊಂದಿದ್ದು ತನಗೆ ಇದೊಂದು ವಿಶೇಷ ಅನುಭವ.
ಉತ್ತರಕನ್ನಡ ಜಿಲ್ಲೆಯ ಅಂಕೋಲೆಯ ತನ್ನನ್ನು ಕನರ್ಾಟಕದ ತುತ್ತತುದಿಗಿರುವ ಕಲಬುಗರ್ಿ ತವರುಮನೆಗೆ ಕರೆದು ಮಡಿಲಕ್ಕಿ ತುಂಬಿ ಕಳಿಸಿದಂತಾಗಿದೆ. ಪ್ರಶಸ್ತಿ ಘೋಷಣೆಯಾದ ದಿನದಿಂದಲೂ ಪ್ರತಿಯೊಬ್ಬರೂ ನನ್ನನ್ನು ಅಮ್ಮಾ ಎಂದೇ ಕರೆಯುತ್ತಿದ್ದಾರೆ. ನಾಡಿನೆಲ್ಲೆಡೆ ಈ ಪ್ರಶಸ್ತಿಗಿರುವ ಮಹತ್ವವನ್ನು ಇದು ಹೇಳುತ್ತದೆ. ಓರ್ವ ಮಹಿಳೆಗೆ ಅಮ್ಮಾ ಎಂಬ ಕರೆಗಿಂತ ಹೆಚ್ಚಿನದು ಯಾವುದೂ ಇಲ್ಲ...ಎಂದು ಪ್ರಶಸ್ತಿ ಸ್ವೀಕರಿಸಿದ ರೇಣುಕಾ ರಮಾನಂದ ಅವರು ಮಾತನಾಡಿದರು..
ಪ್ರತಿಷ್ಠಾನದ ಮಹಿಪಾಲರೆಡ್ಡಿ ಮುನ್ನೂರು ಕಾರ್ಯಕ್ರಮವನ್ನು ನಿರ್ವಹಿಸಿದರು..ರತ್ನಕಲಾ ಮುನ್ನೂರು ಹಾಗೂ ಈ ಬಾರಿ ಅಮ್ಮ ಗೌರವ ಪುರಸ್ಕಾರ ಪಡೆದ ಇನ್ನಿತರ ಐವರು ವಿವಿದ ಕ್ಷೇತ್ರಗಳ ಸಾಧಕರು ವೇದಿಕೆ ಮೇಲಿದ್ದರು.