ಕಾರವಾರ 29: ನಗರದ ಮಹಿಳಾ ಪದವಿ ಕಾಲೇಜಿಗೆ ಕಟ್ಟಡ ನಿಮರ್ಿಸಲು ರಾಜ್ಯ ಸಕರ್ಾರ 330 ಲಕ್ಷ ಹಾಗೂ ಅಂಕೋಲಾದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪೂರಕ ಕಟ್ಟಡ ನಿಮರ್ಾಣಕ್ಕೆ 200 ಲಕ್ಷ ಮಂಜೂರಿ ಮಾಡಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಜಿಲ್ಲೆಯಲ್ಲಿರುವ ಏಕೈಕ ಮಹಿಳಾ ಕಾಲೇಜು ಕಾರವಾರದಲ್ಲಿದೆ. ಇತ್ತಿಚೇಗೆ ಈ ಕಾಲೇಜಿಗೆ ಭೇಟಿ ನೀಡಿದಾಗ ಹಳೆಯ ಕಟ್ಟಡದಲ್ಲಿ ಕಾಲೇಜು ನಡೆಯುತ್ತಿರುವುದು ಗಮನಕ್ಕೆ ಬಂದಿತ್ತು. ಕಾಲೇಜಿನ ಶೌಚಾಲಯ ವ್ಯವಸ್ಥೆ ಕೂಡಾ ಸೂಕ್ತವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇತ್ತಿಚೇಗೆ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮಹಿಳಾ ಕಾಲೇಜಿನ ದುರವಸ್ಥೆಯನ್ನು ಹಾಗೂ ಅಂಕೋಲಾದ ಸರಕಾರಿ ಪ್ರಥಮ ದಜರ್ೆ ಕಾಲೇಜಿನ ಸಮಸ್ಯೆ ವಿವರಿಸಲಾಗಿತ್ತು. ಹಾಗೂ ಕಟ್ಟಡ ನಿಮರ್ಾಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಅವರನ್ನು ವಿನಂತಿಸಿದ್ದೆನು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಹಿಳಾ ಕಾಲೇಜಿಗೆ 330 ಲಕ್ಷ ಹಾಗೂ ಅಂಕೋಲಾದ ಸರಕಾರಿ ಪ್ರಥಮ ದಜರ್ೆ ಕಾಲೇಜಿಗೆ 200 ಲಕ್ಷ ಮಂಜೂರು ಮಾಡಿದ್ದಾರೆ. ನೂತನ ಮಹಿಳಾ ಕಾಲೇಜಿನ ಸ್ವಂತ ಕಟ್ಟಡದ ಕಾಮಗಾರಿ ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.