ಲೋಕದರ್ಶನ ವರದಿ
ಬೈಲಹೊಂಗಲ 21: ಸಂಬಂಧಗಳನ್ನು ಗಟ್ಟಿಗೊಳಿಸುವ ನೆಪ ಮತ್ತು ತವರು ಮನೆ ಮೇಲಿನ ಮಮಕಾರದಿಂದ ಹೆಣ್ಣು ಮಕ್ಕಳೇ ಇಂದು ಬಾಲ್ಯ ವಿವಾಹಕ್ಕೆ ಪ್ರೋತ್ಸಾಹಿಸುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ದೊಡವಾಡ ವಲಯ ಅಂಗನವಾಡಿ ಮೇಲ್ವಿಚಾರಕಿ ಶಿಲ್ಪಾ ಗಂಗೊಳ್ಳಿ ಹೇಳಿದರು.
ಅವರು ತಾಲೂಕಿನ ದೊಡವಾಡ ಗ್ರಾಮದ ವೀರಭದ್ರೇಶ್ವರ ಗುರುಕುಲ ಪ್ರೌಢಶಾಲೆಯಲ್ಲಿ ಸ್ಥಳೀಯ ಗ್ರಾಮಪಂಚಾಯತಿ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಮಕ್ಕಳ ಗ್ರಾಮ ಸಭೆಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಗೆ ಹಲವಾರು ಕಠಿಣ ಕಾನೂನುಗಳನ್ನು ಜಾರಿ ತಂದರೂ ಸಹ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚುತ್ತಿರುವುದು ಕಳವಳಕಾರಿ ಎಂದು ಇಲ್ಲಿನ ಆಡುವ ಹುಡುಗಿಯನ್ನು ಕಾಡುವ ಹುಡುಗನಿಗೆ ಕೊಟ್ಟರೆ ಗಿಡುಗನ ಕೈಗೆ ಮಗು ಕೊಟ್ಟು ಅದರ ಜೀವನವನ್ನು ಹಾಳು ಮಾಡಿದಂತಾಗುತ್ತದೆ. ಹೀಗಾಗಿ ಸಮಾಜಕ್ಕಂಟಿರುವ ಬಾಲ್ಯ ವಿವಾಹ ಎಂಬ ಶಾಪ ವಿಮೋಚನೆಗೆ ಎಲ್ಲರ ಸಹಕಾರ ಜಾಗೃತಿ ಅಗತ್ಯ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ ರಾಜೇಶ್ವರಿ ಮಾತನಾಡಿ ಹೆಣ್ಣು ಮಕ್ಕಳು ಶುಚಿತ್ವ ಮತ್ತು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಮನೆಯ ಒಳಗೆ ಮತ್ತು ಹೊರಗೆ ಅಪರಿಚಿತರು ಹಾಗೂ ಸಂಬಂಧಿಕರಿಂದುಂಟಾಗುವ ಗುಡ್ ಟಚ್ ಬ್ಯಾಡ್ ಟಚ್ ಗಳ ಬಗ್ಗೆ ಸಂಪೂರ್ಣ ಅರಿತಿರಬೇಕು ಎಂದು ವಿದ್ಯಾಥರ್ಿನಿಯರಿಗೆ ಸಲಹೆ ನೀಡಿದರು.
ವಿದ್ಯಾಥರ್ಿನಿಯರಾದ ಸುಷ್ಮೀತಾ ಕಾಟೆನ್ನವರ ಹಾಗೂ ಕೀತರ್ಿ ಮುದೆನ್ನವರ ಮಾತನಾಡಿ ಶಾಲಾ ಕುಂದು ಕೊರೆತೆಗಳ ಕುರಿತು ಪಂಚಾಯತಿ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದರು.
ಮುಖ್ಯಾಧ್ಯಾಪಕಿ ಬಿ ಆರ್ ಹುತಮಲ್ಲನವರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಬಸವಂತ ಜಮನೂರ, ಪಿಡಿಓ ಎಸ್ ಐ ದಾನಪ್ಪನವರ ಶಿಕ್ಷಕಿಯರಾದ ಯು ಎಸ್ ಹೂಗಾರ,ಎಲ್ ಬಿ ಮುರಡಿಮಠ, ಪಿ ಎನ್ ಗಸ್ತಿ.ಆರ್ ಎಸ್ ನದಾಫ್ ಹಾಗೂ ಅಂಗನವಾಡಿ, ಆಶಾ ಕಾರ್ಯಕತರ್ೆಯರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಮಂಜುನಾಥ ಸಂಗೊಳ್ಳಿ ನಿರೂಪಿಸಿ ವಂದಿಸಿದರು.