ವಾರಸುದಾರಿಲ್ಲದ ಬ್ಯಾಂಕ್ ಠೇವಣಿಗಳ ವಸೂಲಾತಿ ಶಿಬಿರ
Recovery camp for unclaimed bank deposits
ಕಾರವಾರ 29: ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದೀಲೀಷ್ ಅವರ ಅಧ್ಯಕ್ಷತೆಯಲ್ಲಿ ವಾರಸುದಾರಿಲ್ಲದ ಬ್ಯಾಂಕ್ ಠೇವಣಿಗಳ ವಸೂಲಾತಿ ಶಿಬಿರ ಶುಕ್ರವಾರ ನಡೆಯಿತು. ಭಾರತೀಯ ರಿಸರ್ವ ಬ್ಯಾಂಕ್ನ ಸಹಾಯಕ ಪ್ರಧಾನ ವ್ಯವಸ್ಥಾಪಕ ನಿಶಾ ಠಾಕುರ್ ಕಾರ್ಯಕ್ರಮದ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿ, ಬ್ಯಾಂಕಿನಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ನಿಷಿೊಯವಾಗಿರುವ ಮತ್ತು ಮಾಡದ ಖಾತೆಗಳು ಮತ್ತು ಠೇವಣಿಗಳ ವಿವರಗಳನ್ನು ಣಣಠಿ://ಣಜರಚಿಟ.ಡಿಛ.ಠರ.ಟಿ ನಲ್ಲಿ ನೋಡಬಹುದಾಗಿದೆ. ಸೂಕ್ತ ದಾಖಲೆಗಳು ಮತ್ತು ಪುರಾವೆಗಳೊಂದಿಗೆ ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಹಣವನ್ನು ಮರಳಿ ಪಡೆಯಬಹುದು. ನಿಷಿೊಯ ಬ್ಯಾಂಕ್ ಖಾತೆದಾರರನ್ನು ತಲುಪಲು ಬ್ಯುಸಿನೆಸ್ ಕರೆಸ್ಪೋಂಡೆಂಟ್ ಇವರನ್ನು ಬಳಸಿಕೊಳ್ಳುವಂತೆ ತಿಳಿಸಿದರು. ಕೆನರಾ ಬ್ಯಾಂಕ್ನ ಸಹಾಯಕ ಪ್ರಧಾನ ವ್ಯವಸ್ಥಾಪಕ ನಾಗರಾಜ ರೆಡ್ಡಿ ಇವರು ಬ್ಯಾಂಕಗಳು ಶೀಘ್ರದಲ್ಲಿ ಎಲ್ಲಾ ನಿಷಿೊಯ ಬ್ಯಾಂಕ್ ಖಾತೆದಾರರನ್ನು ಸಂಪರ್ಕಿಸಿ ಅವರ ಹಣವನ್ನು ಮರಳಿಸಬೇಕೆಂದು ತಿಳಿಸಿದರು.
ಜಿಲ್ಲಾ ಅಗ್ರಣೀ ಬ್ಯಾಂಕ್ನ ವ್ಯವಸ್ಥಾಪಕ ರಾಜಪ್ಪ ಗೌಳಿ ಮಾತನಾಡಿ, ಇದುವರೆಗೂ ನಿಷಿೊಯ ಬ್ಯಾಂಕ್ ಖಾತೆದಾರರಿಗೆ ಮರಳಿಸಿದ ಠೇವಣಿಗ ವಿವರ ತಿಳಿಸಿದ ಅವರು ಎಲ್ಲಾ ಬ್ಯಾಂಕ್ ಶಾಖೆಗಳು ಮತ್ತು ಆರ್ಥಿಕ ಸಾಕ್ಷರತಾ ಕೇಂದ್ರಗಳು ಮಾಹಿತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಬ್ಯಾಂಕ್ಗಳ ಖಾತೆದಾರರಿಗೆ ಖಾತೆಗಳನ್ನು ಸಕ್ರೀಯಗೊಳಿಸಿದ ಮಂಜೂರಾತಿ ಪತ್ರಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ನಬಾರ್ಡ್ನ ಸುನೀಲ್ ನಾಯ್ಕ, ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್ ಜಿಲ್ಲಾ ಪಂಚಾಯತ ಮತ್ತು ವಿವಿಧ ಬ್ಯಾಂಕ್ಗಳ ಅಧಿಕಾರಿಗಳು ಮತ್ತಿತರರು ಇದ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾಡದ ಬ್ಯಾಂಕ್ ಠೇವಣಿಗಳ ವಿವರ: ಕೆನರಾ ಬ್ಯಾಂಕ್ 220036 ಖಾತೆಗಳು ರೂ.40.12ಕೋಟಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 43051 ಖಾತೆಗಳು, ರೂ.18.61ಕೋಟಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 5636, ರೂ 0.86, ಇಂಡಿಯನ್ ಓವರ್ಸೀಸ್ ಬ್ಯಾಂಕ್ 3826, ರೂ 0.82, ಇಂಡಿಯನ್ ಬ್ಯಾಂಕ್ 2778, ರೂ 0.74, ಬ್ಯಾಂಕ್ ಆಫ್ ಬರೋಡ 14726, ರೂ 3.5, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 610, ರೂ 0.13, ಬ್ಯಾಂಕ್ ಆಫ್ ಮಹಾರಾಷ್ಟೊ 862, ರೂ. 0.37, ಬ್ಯಾಂಕ್ ಆಫ್ ಇಂಡಿಯಾ 1075, ರೂ0.09, ಐಡಿಬಿಡಿ 94, ರೂ. 0.01, ಪಂಜಾಬ್ ನೇಷನಲ್ ಬ್ಯಾಂಕ್ 1197, ರೂ.0.23, ಫೆಡರಲ್ ಬ್ಯಾಂಕ್ 522, ರೂ 0.14, ಕೊಟಕ ಮಹೀಂದ್ರಾ ಬ್ಯಾಂಕ್ 504, ರೂ 0.68,ಎಚ್ಡಿಎಫ್ಸಿ ಬ್ಯಾಂಕ್ 642,ರೂ.0.11, ಎಕ್ಷೀಸ್ ಬ್ಯಾಂಕ್ 1003, ರೂ.0.39, ಕರ್ನಾಟಕ ಬ್ಯಾಂಕ್ 18533, ರೂ. 3.63, ಐಸಿಐಸಿಐ 491, ರೂ.0.16, ಕೆನರಾ ಡಿಸಿಸಿ ಬ್ಯಾಂಕ್ 772, ರೂ 0.15, ಸೌತ್ ಇಂಡಿಯಾ ಬ್ಯಾಂಕ್ 94, ರೂ.0.01, ಡಿಬಿಎಸ್ ಇಂಡಿಯಾ ಬ್ಯಾಂಕ್ 13,0 ಸೇರಿದಂತೆ ಒಟ್ಟೂ 316465 ಖಾತೆಗಳ, ರೂ. 70.76 ಕೋಟಿ ಆಗಿರುವುದಿಲ್ಲ ಎಂದು ಲೀಡ್ ಬ್ಯಾಂಕ್ ಪ್ರಕಟಣೆ ತಿಳಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 