ಉತ್ತಮ ಸಾಧನೆಗೆ ಗ್ರಾ.ಪಂ ನಿಂದ ಸತ್ಕಾರ
Reception from Gram Panchayat for good performance
ಉತ್ತಮ ಸಾಧನೆಗೆ ಗ್ರಾ.ಪಂ ನಿಂದ ಸತ್ಕಾರ
ಯಲಬುರ್ಗಾ 10 : ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ರಂಜಿತಾ ಈರಣ್ಣ ಬಿಸೆರೊಟ್ಟಿ ಪಿ.ಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದಕ್ಕೆ ಗ್ರಾ.ಪಂ ವತಿಯಿಂದ ಸನ್ಮಾನಿಸಿ, ಸತ್ಕರಿಸಲಾಯಿತು. ಬಳಿಕ ಗ್ರಾ.ಪಂ ಅಧ್ಯಕ್ಷ ಶರಣಕುಮಾರ್ ಅಮರಗಟ್ಟಿ ಮಾತನಾಡಿ, ಗ್ರಾಮದ ಬಡ ಕುಟುಂಬದ ವಿದ್ಯಾರ್ಥಿನಿ ರಂಜಿತಾ ಬಿಸೆರೊಟ್ಟಿ ಕುಕನೂರಿನ ಕೆ.ಎಲ್.ಇ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದಳು. ಯಾವುದೇ ಕೋಚಿಂಗ್ ಹಾಗೂ ವಿಶೇಷ ತರಗತಿಗಳಿಗೆ ತೆರಳದೇ ವಿದ್ಯಾಭ್ಯಾಸ ಮಾಡಿ ಶೇ. 92.83 ರಷ್ಟು ಸಾಧನೆ ಮಾಡಿದ್ದಾಳೆ. ಅಲ್ಲದೇ ಗ್ರಾಮದ ಇನ್ನೋರ್ವ ವಿದ್ಯಾರ್ಥಿ ಚೆನ್ನಯ್ಯ ಕಳಕಯ್ಯ ಹಿರೇಮಠ ಶೇ.91.66 ರಷ್ಟು ಸಾಧನೆ ಮಾಡುವ ಮೂಲಕ ಈ ಇಬ್ಬರೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ ಎಂದರು. ನಿವೃತ್ತ ಶಿಕ್ಷಕ ಸಕ್ರ್ಪ ಕುಂಟ್ರು, ಮುಖಂಡರಾದ ಕಾಳೇಶ ಕಮ್ಮಾರ, ಶಂಕ್ರ್ಪ ಇಟಗಿ, ಬಿಲ್ ಕಲೆಕ್ಟರ್ ಶಾಮೀದ್ ಅಲಿ ನಧಾಪ್, ವಿದ್ಯಾರ್ಥಿನಿಯ ಪಾಲಕ ಈರಣ್ಣ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 